ಮಿ.ಪರ್ಫೆಕ್ಟ್ ಅಮೀರ್ ಖಾನ್‌ಗೆ ಐಟಂ ಗರ್ಲ್ ಬೇಕಂತೆ

By Rajendra

ಬಾಲಿವುಡ್‌ನಲ್ಲಿ ಐಟಂ ಸಾಂಗು, ಐಟಂ ಗರ್ಲ್ ಇಲ್ಲ ಎಂದರೆ ಚಿತ್ರಕ್ಕೆ ಉಳಿಗಾಲವಿಲ್ಲ ಎಂಬಂತಾಗಿದೆ. ಒಂದಷ್ಟು ಮಸಾಲೆ, ಒಗ್ಗರಣೆ ಹಾಕಿದರೇನೆ ಅವರಿಗೆ ಸಮಾಧಾನ ಅನ್ನಿಸುತ್ತದೆ. ಈ ವಿಚಾರದಲ್ಲಿ ಮಿ.ಪರ್ಫೆಕ್ಟ್ ಎಂದೇ ಖ್ಯಾತನಾದ ಅಮೀರ್ ಖಾನ್ ಕೂಡ ಹಿಂದೆ ಉಳಿದಿಲ್ಲ. ಈಗವರು ಐಟಂ ಗರ್ಲ್‌ವೊಬ್ಬಳ ಹುಡುಕಾಟದಲ್ಲಿದ್ದಾರೆ.

ಇಮ್ರಾನ್ ಖಾನ್ ಮುಖ್ಯಭೂಮಿಕೆಯಲ್ಲಿರುವ ಅಮೀರ್ ನಿರ್ಮಿಸುತ್ತಿರುವ 'ಡೆಲ್ಲಿ ಬೆಲ್ಲಿ' ಚಿತ್ರಕ್ಕಾಗಿ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಪರಿಸ್ಥಿತಿ ಅಮೀರ್‌ಗೆ ಎದುರಾಗಿದೆ. ಮಲ್ಲಿಕಾ ಶೆರಾವತ್, ಕತ್ರಿನಾ ಕೈಫ್ ಅಥವಾ ದೀಪಿಕಾ ಪಡುಕೋಣೆ ಇವರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬುದು ಅಮೀರ್‌ಗೆ ದೊಡ್ಡ ತಲೆನೋವಾಗಿದೆಯಂತೆ.

ಅಮೀರ್ ಚಿತ್ರಗಳೆಂದರೆ ಸಾಮಾನ್ಯವಾಗಿ ಸದಭಿರುಚಿಯ ಚಿತ್ರಗಳು ಎಂಬ ಭಾವನೆ ಇದೆ. ಇದಕ್ಕೆ ತಕ್ಕಂತೆ ಅವರ ಚಿತ್ರಗಳು ಬಂದಿವೆ. ಆಗ ಈಗ ಐಟಂ ಸಾಂಗ್‌ಗೆ ಯಾಕೆ ಗಂಟು ಬಿದ್ದರು ಎಂಬ ಪ್ರಶ್ನೆ ಬಾಲಿವುಡ್ ಮಂದಿಯನ್ನು ಗಲಿಬಿಲಿಗೊಳಿಸಿದೆ. ಚಿತ್ರದ ಕತೆ ಆ ರೀತಿಯ ಹಾಡನ್ನು ಬಯಸುತ್ತದೆ ಎಂದು ಎಲ್ಲರಂತೆ ಅಮೀರ್ ಕೂಡ ಉತ್ತರ ಕೊಟ್ಟಿದ್ದಾರೆ. ಆದರೆ ಐಟಂ ಹುಡುಗಿ ಮಾತ್ರ ಇನ್ನೂ ಸಿಕ್ಕಿಲ್ಲ. (ಏಜೆನ್ಸೀಸ್)

More from Filmibeat

English summary
Aamir Khan is on a lookout for an item girl for his forthcoming film Delhi Belly, starring Imran Khan. Aamir has confused between Mallika Sherawat, Katrina Kaif and Deepika Padukone, for the song. He is busy looking for the perfect item girl to pep up his film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X