»   » ಕಂಟ್ರೋಲ್ ತಪ್ಪಿದ ಬಾಣಂತಿ ಐಶ್ವರ್ಯ ರೈ ತೂಕ

ಕಂಟ್ರೋಲ್ ತಪ್ಪಿದ ಬಾಣಂತಿ ಐಶ್ವರ್ಯ ರೈ ತೂಕ

Posted By:
Subscribe to Filmibeat Kannada

ಅಮ್ಮನಾಗುವುದಕ್ಕೂ ಮುನ್ನ ಬಾಲಿವುಡ್ ತಾರೆ ಐಶ್ವರ್ಯ ರೈ ತೆಳ್ಳಗೆ, ಬೆಳ್ಳಗೆ ಬಳುಕುವ ಬಳ್ಳಿಯಂತಿದ್ದರು. ಆದರೆ ಅಮ್ಮನಾದ ಮೂರು ತಿಂಗಳ ಬಳಿಕ ಅವರ ದೇಹದ ತೂಕ ಕಂಟ್ರೋಲ್ ತಪ್ಪಿದೆ. ಬಳುಕುವ ಬಳ್ಳಿಯಂತಿದ್ದ ಆಕೆ ಈಗ ಬಲಿತ ಬಾಳೆಗಿಡದಂತಾಗಿದ್ದಾರೆ.

ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾಗ ಯೋಗಾಭ್ಯಾಸ, ವ್ಯಾಯಾಮ ಮಾಡಿ ದೇಹದ ತೂಕವನ್ನು ನಿಯಂತ್ರಿಸಿಕೊಂಡಿದ್ದರು. ಅಮ್ಮನಾದ ಮೇಲೆ ಪಾಪ ಈಗೇನು ಮಾಡಲು ಸಾಧ್ಯ. ಕಸರತ್ತು ಮಾಡಲು ಪುರುಸೊತ್ತೆಲ್ಲಿ? ಹಾಗಾಗಿ ದೇಹದ ತೂಕ ಕಂಟ್ರೋಲ್ ತಪ್ಪಿ ಆಫಲ್‌ನಂತಿದ್ದ ಕೆನ್ನೆಗಳು ಎಣ್ಣೆಯಲ್ಲಿ ಕರಿದ ಕಡುಬಿನಂತಾಗಿವೆ.

ಮೊನ್ನೆ ನಡೆದ ಜೆನಿಲಿಯಾ ಮದುವೆಗೆ ಸಾಕಷ್ಟು ಮೇಕಪ್ ಮಾಡಿಕೊಂಡು ಬಂದಿದ್ದರೂ ಐಶ್ವರ್ಯ ರೈ ಡುಮ್ಮಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಸದ್ಯಕ್ಕೆ ಯಾವ ಚಿತ್ರದಲ್ಲೂ ಬಣ್ಣಹಚ್ಚುವ ಪ್ಲಾನ್ ಐಶ್ವರ್ಯ ರೈಗಿಲ್ಲ. ಅಲ್ಲಿಯವರೆಗೂ ಆಕೆ ಬಲೂನ್‌ನಂತೆ ಆಗದಿದ್ದರೆ ಅಷ್ಟೇ ಸಾಕಪ್ಪ ಎಂದು ಬಾಲಿವುಡ್ ನಿರ್ಮಾಪಕರು ಜಪಿಸುತ್ತಿದ್ದಾರೆ. (ಏಜೆನ್ಸೀಸ್)

English summary
Aishwarya Rai Bachchan was recently seen at the wedding reception of Genelia D'Souza-Riteish Deshmukh's wedding reception. Though Aishwarya looked beautiful in a traditional and heavily embroidered anarkali green suit with blue and gold dupatta, it was evident from her chubby cheeks that Aish had put on gallons of weight after delivery.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X