twitter
    For Quick Alerts
    ALLOW NOTIFICATIONS  
    For Daily Alerts

    ನವೆಂಬರ್‌ನಲ್ಲಿ ಗರ್ಭಿಣಿ ಐಶ್ವರ್ಯ ರೈಗೆ ಡೆಲಿವರಿ

    By Rajendra
    |

    Aishwarya Rai
    ಬಾಲಿವುಡ್ ತಾರೆ ಐಶ್ವರ್ಯ ರೈ ಈಗ ಏಳು ತಿಂಗಳ ಗರ್ಭಿಣಿ. ಇತ್ತೀಚೆಗೆ ಅವರು ಮುಂಬೈನ ಸಿದ್ಧಿ ವಿನಾಯಕ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನಭಾಗ್ಯ ಪಡೆದರು. ತಮ್ಮ ಪೋಷಕರ ಜೊತೆ ಐಶ್ವರ್ಯ ಮಂದಿರಕ್ಕೆ ಆಗಮಿಸಿದ್ದರು. ಅವರು ಫಿಟ್ ಅಂಡ್ ಫೈನಾಗಿ ಕಾಣಿಸುತ್ತಿದ್ದರು ಎಂದು ಆಲಯದ ಸಿಬ್ಬಂದಿ ತಿಳಿಸಿದ್ದಾರೆ.

    ಐಶ್ವರ್ಯ ರೈ ಗರ್ಭಿಣಿ ಆದ ಬಳಿಕ ಅವರು ಸಾರ್ವಜನಿಕ ಸಭೆ ಸಮಾರಂಭಗಳಿಂದ ದೂರ ಉಳಿದಿದ್ದರು. ತೀರಾ ಇತ್ತೀಚೆಗೆ ಲಕ್ಸ್ ಜಾಹೀರಾತಿನಲ್ಲಿ ಅಭಿನಯಿಸಿದ್ದು ಬಿಟ್ಟರೆ ಉಳಿದಂತೆ ಅವರು ಮನೆಗೆ ಸೀಮಿತವಾಗಿದ್ದರು. ಈಗ ಮಂದಿರಕ್ಕೆ ಬರುವ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದಾರೆ.

    ನವೆಂಬರ್ ತಿಂಗಳಲ್ಲಿ ಐಶ್ವರ್ಯ ರೈ ಮಗುವಿಗೆ ಜನ್ಮ ನೀಡಲಿರುವುದಾಗಿ ವೈದ್ಯರು ತಿಳಿಸಿದ್ದಾರೆ. ವಿಶೇಷ ಎಂದರೆ ನವೆಂಬರ್ ತಿಂಗಳು ಐಶು ಅವರ ಬರ್ತ್‌‍ಡೇ ತಿಂಗಳೂ ಹೌದೂ. ಈ ಥ್ರಿಲ್ಲಿಂಗ್ ಅವಕಾಶಕ್ಕಾಗಿ ಅವರ ಕುಟುಂಬಿಕರು ಸೇರಿದಂತೆ ಅಭಿಮಾನಿಗಳು ಕಾತುರದಿಂದಿದ್ದಾರೆ. (ಏಜೆನ್ಸೀಸ್)

    English summary
    Aishwarya Rai Bachchan's due date is November which is also her birth month and all the family members are looking forward to this thrilling moment. Recently Aishwarya was spotted at the Siddhivinayak temple praying for the new arrival.
    Tuesday, September 13, 2011, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X