ಬಿಪಾಶಾಗೆ 'ಕಿಸ್ಸಿಂಗ್ ಸೀನ್' ಅಂದ್ರೆ ಬಹಳ ಭಯವಂತೆ

Bipasha Basu
ಬೋಲ್ಡ್ ನಟಿ ಎಂದೇ ಬಾಲಿವುಡ್ ನಲ್ಲಿ ಖ್ಯಾತಿ ಪಡೆದಿರುವ ಬಿಪಾಶಾ ಬಸು ತೆರೆಯ ಮೇಲೆ ಹೆಚ್ಚು ಕಡಿಮೆ ಎಲ್ಲಾ ರೀತಿಯ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಕಿನಿ ಹಾಕಿದ್ದಾರೆ, ಎರಡು ಸಲ ಕಿಸ್ಸಿಂಗ್ ಸೀನ್ ನಲ್ಲಿ ಭಾಗಿಯಾಗಿದ್ದಾರೆ. ದೇಹದ ಉಬ್ಬು-ತಗ್ಗು ತೋರಿಸಿ 'ಐಟಂ ಸಾಂಗ್' ನಲ್ಲೂ ತಮ್ಮ ಮಾದಕ ಮೈಮಾಟ ಪ್ರದರ್ಶಿಸಿದ್ದಾರೆ.

ಆದರೂ ಬಿಪ್ ಗೆ 'ಕಿಸ್ಸಿಂಗ್ ಸೀನ್' ಅಂದ್ರೆ ಸಖತ್ ಭಯವಂತೆ. "ಅದ್ಯಾಕೋ ಗೊತ್ತಿಲ್ಲ, ನನಗೆ ಕಿಸ್ಸಿಂಗ್ ದೃಶ್ಯ ಅಂದ್ರೆ ಸಂಕೋಚ ಹಾಗೂ ಭಯ. ಹಾಲಿವುಡ್ ಚಿತ್ರಗಳಲ್ಲಂತೂ ಕಿಸ್ಸಿಂಗ್ ಸೀನ್ ಗಳು ತೀರಾ ಸಹಜ. ಈಗ ಬಾಲಿವುಡ್ ಚಿತ್ರಗಳಲ್ಲೂ ಕಾಮನ್. ಆದರೆ ನನಗೆ ಮಾತ್ರ ಈಗಲೂ ಅದು ತೀರಾ ಖಾಸಗಿ ವಿಷಯ, ತೆರೆಯ ಮೇಲೆ ಬೇಡ ಅನ್ನಿಸುತ್ತದೆ" ಎಂದಿದ್ದಾರೆ.

ತಮ್ಮ ಹನ್ನೊಂದು ವರುಷಗಳ ವೃತ್ತಿ ಜೀವನದಲ್ಲಿ ಎರಡು ಬಾರಿ ಲಿಪ್ ಲಾಕ್ ಮಾಡಿದ್ದಾರೆ ಬಿಪಾಶಾ. ಒಂದು ಈಗ ಹಳೆಯ ಬಾಯ್ ಫ್ರೆಂಡ್ ಎನಿಸಿರುವ ಜಾನ್ ಜೊತೆ 'ಜಿಸ್ಮ್' ಚಿತ್ರದಲ್ಲಿ ಹಾಗೂ ಇನ್ನೊಂದು 'ಬಚ್ನಾ ಯೇ ಹಸೀನೋ' ದಲ್ಲಿ ರಣಬೀರ್ ಕಪೂರ್ ಜೊತೆ. ಆಗಲೂ ಸಾಕಷ್ಟು ಮುಜಿಗರ ಅನುಭವಿಸಿದ್ದರಂತೆ ಈಕೆ. ಒಟ್ಟಿನಲ್ಲಿ ಈಕೆ ಹೇಳುವ 'ಕಿಸ್ ಪುರಾಣ' ಸತ್ಯವೋ ಸುಳ್ಳೋ ಎಂಬುದು ಬಾಲಿವುಡ್ ಗೂ ಒಗಟಾಗಿದೆ. (ಏಜೆನ್ಸೀಸ್)

More from Filmibeat

English summary
Actress Bipasha Basu has done all kinds of bold scenes. The Bollywood star has donned bikini in Dhoom and Players, done bold scenes in Jism and a raunchy item number in Omkara. But Bips says that she has inhibitions doing kissing scenes in films.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X