ಶೀಲಾ ಕಿ ಜವಾನಿ ಕತ್ರೀನಾಗೆ ಹೊಸ ವರ್ಷದ ಆಫರ್
ಬಾಲಿವುಡ್ ಹಾಟ್ ಸೆನ್ಸೇಷನ್ ಕತ್ರೀನಾ ಕೈಫ್ ಗೆ ಹೊಸ ವರ್ಷದ ಸ್ವಾಗತಕ್ಕೆ ಕುಣಿಯಲು ಬರೋಬ್ಬರಿ ರು. 2 ಕೋಟಿ ಆಫರ್ ನೀಡಲಾಗಿದೆ .ಮುಂಬೈನ ಪಂಚತಾರಾ ಹೊಟೇಲೊಂದರಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಕತ್ರೀನಾ, ತಮ್ಮ ಜಗತ್ಪ್ರಸಿದ್ಧ ಹಿಟ್ ಗಳಾದ 'ಶೀಲಾ ಕಿ ಜವಾನಿ' ಹಾಗೂ 'ಚಿಕ್ನಿ ಚಮೇಲಿ' ಗೀತೆಗೆ ನರ್ತಿಸಲಿದ್ದಾರೆ.
ಈ ಹಾಡುಗಳ ಒಟ್ಟೂ ಕಾಲಾವಧಿ 1,080 ಸೆಕೆಂಡ್ಸ್. ಇದಕ್ಕೆ ಕತ್ರೀನಾಗೆ ಸಿಗಲಿರುವ ಸಂಭಾವನೆ ರು. 2 ಕೋಟಿ. ಈ ಆಫರ್ ಗೆ ಆಕೆ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಕೊಟ್ಟರೆ ಸರಿ, ಇಲ್ಲದಿದ್ದರೆ ಯಾವುದಕ್ಕೂ ಇರಲಿ ಎಂದು ಇನ್ನೊಬ್ಬ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಗೆ ಕೂಡ ಆಫರ್ ನೀಡಲು ನಿರ್ಧರಿಸಲಾಗಿದೆ.
ಈ ಇಬ್ಬರಲ್ಲಿ ಹೊಸ ವರ್ಷದ ಸ್ವಾಗತವನ್ನು ಮುಂಬೈನಲ್ಲಿ ಯಾರು ಮಾಡಲಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್. ಕತ್ರೀನಾ ಒಪ್ಪಿಕೊಂಡರೆ ಕತ್ರೀನಾ, ಇಲ್ಲದಿದ್ದರೆ ಮಲ್ಲಿಕಾ ಗ್ಯಾರಂಟಿ. ಇಷ್ಟು ದೊಡ್ಡ ಮೊತ್ತ ಕೇವಲ ಅಷ್ಟು ಮಾತ್ರ ಕಾಲಾವಧಿಗೆ. ಯಾರಿಗುಂಟು ಯಾರಿಗಿಲ್ಲ ಎಂದು ಉಳಿದ ಬೆಡಗಿಯರು ಕೈಕೈ ಹಿಸುಕಿಕೊಳ್ಳುತ್ತಿದ್ದಾರಂತೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications