ವರ್ಮಾಜೀಗೆ ಪಾಸಿಟಿವ್ ಆಗೋ ಹುಚ್ಚು ಬಿಡಿಸಿ ಪ್ಲೀಸ್

By Mahesh

ಸಿನಿಮಾವನ್ನು ಫ್ಯಾಕ್ಟರಿ ಮಟ್ಟಕ್ಕೆ ಇಳಿಸಿ, ನಾಯಕಿಯರ ಬಟ್ಟೆಯನ್ನೂ ಇಂಚಿಂಚಾಗಿ ತುಂಡರಿಸಿ, ಮಾಧ್ಯಮಗಳನ್ನು ಲೆಕ್ಕಿಸದೆ, ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ರಾರಾಜಿಸುತ್ತಿರುವ ಏಕೈಕ ಪಾಗಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಂದರೆ ಎಲ್ಲರೂ ಹೌದು ಹೌದು ಎನ್ನುತ್ತಾರೆ. ವರ್ಮಾರನ್ನು ಪಾಗಲ್ ಎಂದಿದ್ದಕ್ಕೆ ಅವರ ಅಭಿಮಾನಿಗಳು ಗುರ್ರ್ ಎನ್ನಬೇಡಿ ಮತ್ತೆ. ಅದು ನಾವಿಟ್ಟ ಹೆಸರಲ್ಲ. ವರ್ಮಾ ಹೆಸರಿನಲ್ಲಿ ನೋಂದಾಣಿಯಾಗಿರುವ ಹೊಸ ಬಾಲಿವುಡ್ ಚಿತ್ರ.

ಆರ್ ಜಿವಿ ಯಾರನ್ನು ಲೆಕ್ಕಿಸುವುದಿಲ್ಲ, ಬಿಗ್ ಬಿ, ಚಿರಂಜೀವಿ ಮುಂತಾದ ಘಟಾನುಘಟಿ ಸ್ಟಾರ್ ಗಳಿಗೆ ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳುವ ಛಾತಿ ಉಳ್ಳವರು. ಆದರೆ, ಅವರ ಚಿತ್ರ ವಿಚಿತ್ರ ಟ್ವೀಟ್ ಸಂದೇಶ, ಸಿನಿಮಾಗಳ ಶೈಲಿ ನೋಡಿದ ಸಿನಿಮಾ ಮಂದಿ, ಆರ್ ಜಿವಿ ಹೆಸರಿನಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರದ ಹೆಸರು ರಾಮು ಬನ್ ಗಯಾ ಪಾಗಲ್. ಈ ಹಿಂದೆ ತೆಲುಗು ಚಿತ್ರರಂಗದಲ್ಲೂ ಮೂರ್ಖುಡು, ಐತೆ ರಾಮ್ ಗೋಪಾಲ್ ವರ್ಮಾ ಲೇಕಾಪೊತೆ ಮನ ಕರ್ಮ" ಮುಂತಾದ ಚಿತ್ರಗಳನ್ನುನೋಂದಾಯಿಸಲಾಗಿತ್ತು.

ಆದರೆ, ಹಾಸ್ಯ, ವಿಡಂಬನೆ, ಕುಹಕ ಎಲ್ಲವನ್ನೂ ಅರಗಿಸಿಕೊಳ್ಳಬಲ್ಲ ಪ್ರಜ್ಞಾವಂತ ವರ್ಮಾ ಈ ರೀತಿ ನಾನ್ಸೆನ್ಸ್ ಗಳಿಗೆ ಸೊಪ್ಪು ಹಾಕದೆ ತನಗನ್ನಿಸಿದ್ದನ್ನು ಮಾಡುವ ಚಿತ್ರಕರ್ಮಿ. ಸದ್ಯಕ್ಕೆ ಮೈಸೂರು ಮೂಲದ ಮಾರಿಯಾ ಸುಸೈರಾಜ್ ಹಾಗೂ ನೀರಜ್ ಗ್ರೋವರ್ ಕೊಲೆ ಪ್ರಕರಣದ ಕಥೆ ಇಟ್ಟುಕೊಂಡು ನಾಟ್ ಎ ಲವ್ ಸ್ಟೋರಿ ಎನ್ನುವ ಸಿನಿಮಾ ಮಾಡುತ್ತಿದ್ದಾನೆ.ಇದರಲ್ಲಿ ಮೊನ್ನೆ ನಾಯಕಿ ಮಾಹಿ ಗಿಲ್ ದೀರ್ಘಕಾಲದ ಕಿಸ್ಸಿಂಗ್ ಸೀನ್ ನಲ್ಲಿ ಹೆಚ್ಚು ಇನ್ವಾಲ್ ಆಗಿ ನಟಿಸಿದ್ದು ನೋಡಿ ಮುಜುಗರಗೊಂಡ ವರ್ಮಾ ಆಕೆಗೆ ಸ್ಸಾರಿ, ಎಂದು ಮೆಸೇಜ್ ಹಾಕಿದ್ದನಂತೆ.

ಈ ಪರಿ ವಿಚಿತ್ರ ಚಿತ್ರಗಳ ಸಚಿತ್ರ ನಿರ್ದೇಶಕ ವರ್ಮಾಗೆ ಈಗ ಟ್ವಿಟ್ಟರ್, ಫೇಸ್ ಬುಕ್ ಸಹವಾಸ ಸಾಕಾಗಿದೆಯಂತೆ. ಹೊಸದೇನಾದರೂ ಬೇಕು ಎಂದು ಹುಡುಕುತ್ತಿದ್ದಾಗ ಗೂಗಲ್ ಪ್ಲಸ್ ಕಣ್ಣಿಗೆ ಬಿದ್ದಿದೆ. ಆದರೆ, ವರ್ಮಾಗೆ ಜಿಪ್ಲಸ್ ನ ಆಹ್ವಾನ ಇನ್ನೂ ಸಿಕ್ಕಿಲ್ಲ. ದಯವಿಟ್ಟು ಯಾರಾದರೂ ಜಿಪ್ಲಸ್ ಖಾತೆ ಉಳ್ಳವರು ವರ್ಮಾರಿಗೆ ಆಹ್ವಾನ ನೀಡಿ ಅವರು ಪಾಸಿಟಿವ್ ಆಗಬೇಕಂತೆ.

More from Filmibeat

English summary
Social media freak Ram Gopal Varma is planning to shift sands from his Facebook, Twitter account to Google plus. But Varma is yet to get a invitation. Meanwhile movies on Varma has been registered in Bollywood. RGV is busy in Not A Love Story movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X