ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆಯಾಗಿ ಕತ್ರಿನಾ!
ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತೊಮ್ಮೆ ಏಷ್ಯಾದ 50 ಮಂದಿ ಅತ್ಯಂತ ಸೆಕ್ಸಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ನಟಿಯರ ತೀವ್ರ ಸ್ಪರ್ಧೆಯನ್ನು ಹಿಂದಿಕ್ಕಿ ಕತ್ರಿಕಾ ಕೈಫ್ ಗೆ ಈ ಪಟ್ಟ ಒಲಿದಿದೆ. ಸ್ಪರ್ಧೆಯಲ್ಲಿ ಮಾಜಿ ಸುಂದರಿಯರು, ರೂಪದರ್ಶಿಯರು ಮತ್ತು ಪಾಪ್ ನಟಿಯರು ಇದ್ದದ್ದು ವಿಶೇಷ.
ಮೊದಲ ಹತ್ತು ಸ್ಥಾನಗಳಲ್ಲಿ ಎಂಟು ಸ್ಥಾನಗಳು ಭಾರತೀಯ ನಟಿಯರ ಪಾಲಾಗಿವೆ. ಬ್ರಿಟಿಷ್ ಕಿರುತೆರೆ ತಾರೆ ಲೈಲಾ ರೌಸ್ ಮತ್ತು ಪಾಕಿಸ್ತಾನಿ ನಟಿ ಮೆವಿಶ್ ಹಯತ್ ಮೊದಲ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಈಸ್ಟರ್ನ್ ಹೈ 50 ಸೆಕ್ಸಿಯಸ್ಟ್ ಮಹಿಳೆಯರ ಪಟ್ಟಿಯಲ್ಲಿನ ಹತ್ತು ಮಂದಿಯ ಹೆಸರು ಹೀಗಿದೆ.
ಕತ್ರಿನಾ ಕೈಫ್, ಪ್ರಿಯಾಂಕ ಚೋಪ್ರಾ, ಪ್ರೀಡಾ ಪಿಂಟೋ, ಲೈಲಾ ರೌಸ್, ಕರೀನಾ ಕಪೂರ್, ಬಿಪಶಾ ಬಸು, ಲಾರಾ ದತ್ತ, ಐಶ್ವರ್ಯ ರೈ ಬಚ್ಚನ್, ಮೆವಿಶ್ ಹಯತ್ ಮತ್ತು ದೀಪಿಕಾ ಪಡುಕೋಣೆ. ಯುಕೆಯ ಪ್ರತಿಷ್ಠಿತ ನಿಯತಕಾಲಿಕೆ ಈಸ್ಟರ್ನ್ ಹೈ ಈ ಪ್ರಶಸ್ತಿಯನ್ನು ಕೊಡುತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
aishwarya rai ಐಶ್ವರ್ಯ ರೈ ಕತ್ರಿನಾ ಕೈಫ್ katrina kaif kareena kapoor freida pinto priyanka chopra ಕರೀನಾ ಪ್ರಿಯಾಂಕಾ ಚೋಪ್ರಾ lara dutta ಸೆಕ್ಸಿ ಮಹಿಳೆ ಈಸ್ಟರ್ನ್ ಹೈ sexiest asian women


Click it and Unblock the Notifications











