ಪ್ರಿಯಾಂಕಾ ಚೋಪ್ರಾ ಮೂಗಿಗೆ ಸುರೂಪಿ ಚಿಕಿತ್ಸೆ
ಸಿನಿಮಾ ತಾರೆಗಳು ತಮ್ಮ ದೇಹದ ಅಂಕು ಡೊಂಕುಗಳನ್ನು ಸರಿಪಡಿಸಿಕೊಳ್ಳಲು ಆಗಾಗ ಸುರೂಪಿ ಚಿಕಿತ್ಸೆಗಳು, ಶಸ್ತ್ರಚಿಕಿತ್ಸೆಗಳಿಗೆ ಶರಣಾಗುವುದು ಮಾಮೂಲು.
ಈಗ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರ ಕೂಡಾ ತಮ್ಮ ಮೂಗಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ಈಗ ಅವರ ಮೂಗಿನ ಆಕಾರ ಬದಲಾಗಿದ್ದು ಸಂಪಿಗೆ ಮೂಗಿನ ತರಹ ಆಗಿದೆಯಂತೆ. ಮೂಲಗಳ ಪ್ರಕಾರ, ಯಾವಾಗಲೂ ಪ್ರಿಯಾಂಕಾ ತಮ್ಮ ಮೂಗಿನ ಬಗ್ಗೆ ಮೂಗು ಮುರಿಯುತ್ತಿದ್ದರಂತೆ. ತಮ್ಮ ಮೂಗಿನ ಆಕಾರದ ಬಗ್ಗೆ ಆಕೆಗೆ ಸದಾ ಕಾಲ ಅಸಮಾಧಾನ ಕಾಡುತ್ತಿತ್ತಂತೆ. ಈ ಹಿಂದೆಯೂ ಒಮ್ಮೆ ಮೂಗಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ತೃಪ್ತಿ ಕೊಟ್ಟಿರಲಿಲ್ಲವಂತೆ.
ತಮ್ಮ ಮೂಗಿನ ಆಕಾರದಲ್ಲಿ ಎಲ್ಲೋ ಒಂಚೂರು ಎಡವಟ್ಟಾಗಿದೆಯಲ್ಲಾ ಎಂಬ ಕೊರಗು ಇದ್ದೇ ಇತ್ತಂತೆ. ಹಾಗಾಗಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಶರಣೆಂದಿದ್ದಾರೆ. ಈಗ ತಮ್ಮ ಮೂಗಿನ ಬಗ್ಗೆ ಪೂರ್ಣ ಸಮಾಧಾನವಾಗಿದೆಯಂತೆ. ಎಲ್ಲಿ, ಯಾವಾಗ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡರು ಎಂಬ ವಿವರಗಳು ಮಾತ್ರ ಲಭ್ಯವಿಲ್ಲ. ಈ ಹಿಂದೆ ತಮ್ಮ ದಪ್ಪ ತುಟಿಗಳಿಗೂ ಪ್ರಿಯಾಂಕಾ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.


Click it and Unblock the Notifications











