ಬಾಲಿವುಡ್ ಯಶಸ್ವಿ ಚಿತ್ರಗಳ ಜೊತೆ ರಾ ಒನ್ ಹೋಲಿಕೆ
ಬಿಗ್ ಬಜೆಟ್ ಚಿತ್ರ ಶಾರುಖ್ ಖಾನ್ ರಾ ಒನ್, ಈ ವರ್ಷದ ಬಿಗ್ ಬಜೆಟ್ ಚಿತ್ರ ಎಂಬುದಕ್ಕೆ ಸಂದೇಹವೇ ಇಲ್ಲ. ಬಾಕ್ಸ್ ಆಫೀಸ್ ಅಂಕಿ-ಅಂಶಗಳು ಇದನ್ನು ಸಾಕ್ಷಿ ಸಮೇತ ದೃಢಪಡಿಸುತ್ತವೆ. ಮೊದಲ ಎರಡು ವಾರಗಳಲ್ಲಿ ಈಗಾಗಲೇ 112 ಕೋಟಿ ರು. ಗಳಿಸಿರುವ ರಾ ಒನ್ ಚಿತ್ರದ ನಿರ್ಮಾಣಕ್ಕೆ ತಗಲಿರುವ ವೆಚ್ಚ ರು. 135 ಕೋಟಿ.
ಇನ್ನೂ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಇನ್ನೂ ಸಾಕಷ್ಟು ಗಳಿಸುವುದಕ್ಕೆ ಅವಕಾಶವಿದೆ. ವಾರದಲ್ಲಿ 5 ದಿನ ಮಾತ್ರ ಕೆಲಸಮಾಡುವ ಜನರಿರುವಲ್ಲಿ ಬಿಗ್ ಬಜೆಟ್ ಚಿತ್ರಕ್ಕೆ ಹಾಕಿದ ಬಂಡವಾಳ ವಾಪಸ್ ಬರುವುದು ಗ್ಯಾರಂಟಿ ಎಂಬುದನ್ನು ರಾ ಒನ್ ಚಿತ್ರ ಸ್ಪಷ್ಟಪಡಿಸಿದೆ.
ಬಾಲಿವುಡ್ ಸೂಪರ್ ಹಿಟ್ ಹಾಗೂ ಬಿಗ್ ಬಜೆಟ್ ಚಿತ್ರಗಳ ಸ್ಥಿತಿಗತಿಗಳ ಇಣುಕು ನೋಟ ಇಲ್ಲಿದೆ.
*ಗಜನಿ- ನಿರ್ಮಾಣ ವೆಚ್ಚ: 50 ಕೋಟಿ ರು, ಬಾಕ್ಸ್ ಆಫೀಸ್ ಗಳಿಕೆ: 118 ಕೋಟಿ ರು.
*3 ಈಡಿಯಟ್ಸ್- ನಿರ್ಮಾಣ ವೆಚ್ಚ: 55 ಕೋಟಿ ರು, ಬಾಕ್ಸ್ ಆಫೀಸ್ ಗಳಿಕೆ: 215 ಕೋಟಿ ರು.
*ದಬಾಂಗ್- ನಿರ್ಮಾಣ ವೆಚ್ಚ: 45 ಕೋಟಿ ರು, ಬಾಕ್ಸ್ ಆಫೀಸ್ ಗಳಿಕೆ: 143 ಕೋಟಿ ರು.
*ರೆಡಿ- ನಿರ್ಮಾಣ ವೆಚ್ಚ: 55 ಕೋಟಿ ರು, ಬಾಕ್ಸ್ ಆಫೀಸ್ ಗಳಿಕೆ: 122 ಕೋಟಿ ರು.
*ಸಿಂಗಮ್- ನಿರ್ಮಾಣ ವೆಚ್ಚ: 45 ಕೋಟಿ ರು, ಬಾಕ್ಸ್ ಆಫೀಸ್ ಗಳಿಕೆ: 118 ಕೋಟಿ ರು.
*ಬಾಡಿಗಾರ್ಡ್- ನಿರ್ಮಾಣ ವೆಚ್ಚ: 62 ಕೋಟಿ ರು, ಬಾಕ್ಸ್ ಆಫೀಸ್ ಗಳಿಕೆ: 150 ಕೋಟಿ ರು. ಹಾಗೂ ರಾ ಒನ್
*ನಿರ್ಮಾಣ ವೆಚ್ಚ: 135 ಕೋಟಿ ರು, ಬಾಕ್ಸ್ ಆಫೀಸ್ ಗಳಿಕೆ ಸದ್ಯಕ್ಕೆ: 112 ಕೋಟಿ ರು. (ಪ್ರದರ್ಶನ ಕಾಣುತ್ತಿರುವುದರಿಂದ ಸಾಕಷ್ಟು ಹೆಚ್ಚಾಗುವ ಸಾಧ್ಯತೆ ಇದೆ (ಏಜೆನ್ಸೀಸ್)


Click it and Unblock the Notifications











