ಹೃತಿಕ್ ರೋಶನ್ ಈ ವರ್ಷದ 'ಗೇ ಐಕಾನ್' ಆಯ್ಕೆ?
ವೆಬ್ ಸೈಟ್ ಒಂದರ ಸಮೀಕ್ಷೆಯ ಪ್ರಕಾರ ಈ ವರ್ಷದ 'ಗೇ ಐಕಾನ್' ಆಗಿ ಬಾಲಿವುಡ್ ಮೋಸ್ಟ್ ಹ್ಯಾಂಡ್ ಸಮ್ ಗಾಯ್ ಹೃತಿಕ್ ಆಯ್ಕೆಯಾಗಲಿದ್ದಾರೆ. ಈ ವಿಷಯವಾಗಿ ಬಂದ ಅಭಿಪ್ರಾಯಗಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ ಬಹಳಷ್ಟು ಜನರ ವೋಟ್ ಹೃತಿಕ್ ಪರವಾಗಿದೆ. ಈ ಮೊದಲು ಗೇ ಐಕಾನ್ ಆಗಿದ್ದವರು ಇಮ್ರಾನ್ ಖಾನ್ ಮತ್ತು ರಣಬೀರ್ ಕಪೂರ್.
"ಗ್ರೀಕ್ ದೇವರಂತಹ ದೇಹ ಹೊಂದಿರುವ ಹೃತಿಕ್ ಈ ಟೈಟಲ್ ಗೆ ಯೋಗ್ಯ" ಎಂದು ಕೆಲವರು ಅಭಿಪ್ರಾಯಪಟ್ಟರೆ ಇನ್ನೂ ಕೆಲವರು ಹಲವರು "ಅವರದ್ದು ತೀರಾ ಎಲುಬು ಎದ್ದು ಕಾಣುವ ದೇಹ, ಹಾಗಾಗಿ ಅವರು ಅದಕ್ಕೆ ಅರ್ಹರಲ್ಲ" ಅಂದಿದ್ದಾರೆ. ಆದರೆ ತುಂಬಾ ಮಂದಿ 'ಗೇ' ಗಳು ಹೃತಿಕ್ ರನ್ನು ಇಷ್ಟಪಡುವುದಾಗಿ ಹೇಳಿದ್ದಾರೆ.
ಆಶ್ಚರ್ಯವೆಂದರೆ ಈ ಬಗ್ಗೆ ಹೃತಿಕ್ ಏನೂ ಮಾತನಾಡುತ್ತಿಲ್ಲ. ಈ ಮೊದಲು ಇಮ್ರಾನ್ ಮತ್ತು ರಣಬೀರ್ ಅವರಿಗೆ ಈ ಪಟ್ಟ ಒಲಿದಿದ್ದು ಹೃತಿಕ್ ಗೂ ಗೊತ್ತು. ಯುವಕರು ಹೆಚ್ಚಾಗಿ ಅವರನ್ನೇ ಇಷ್ಟಪಡುವುದೂ ಅವರಿಗೆ ಗೊತ್ತು. ಆದರೆ ಈ 'ಗೇ ಐಕಾನ್' ಬಗ್ಗೆ ಮಾತ್ರ ಅವರಾದರೂ ಏನಂದಾರು? ಯಾರೋ ಅನ್ನುವುದಕ್ಕೆ ಅವರೇನು ಮಾಡೋಕಾಗುತ್ತೆ! ಇದಕ್ಕೆಲ್ಲಾ ಸುಮ್ಮನಿದ್ದರೇ ಒಳ್ಳೆಯದು ತಾನೇ... (ಏಜೆನ್ಸೀಸ್ )


Click it and Unblock the Notifications











