ಬಬ್ಲಿ ತಾರೆ ಜೆನಿಲಿಯಾ ಡಿಸೋಜಾ ಮದುವೆ ಡೀಟೇಲ್ಸ್
ಬಬ್ಲಿ ತಾರೆ ಜೆನಿಲಿಯಾ ಡಿಸೋಜಾಗೆ ತನ್ನ ಬಾಯ್ ಫ್ರೆಂಡ್ ರಿತೇಶ್ ದೇಶ್‌ಮುಖ್ ಕೈಹಿಡಿಯುತ್ತಿರುವುದು ಗೊತ್ತೇ ಇದೆ. ಇವರಿಬ್ಬರ ಮದುವೆ ಶೀಘ್ರದಲ್ಲೇ ಮುಂಬೈನಲ್ಲಿ ನೆರವೇರಲಿದೆ. ಫೆಬ್ರವರಿ 2012ರ ಮೊದಲನೇ ವಾರದಲ್ಲಿ ನಾಲ್ಕು ದಿನಗಳ ಕಾಲ ಮದುವೆ ಸಂಭ್ರಮಕ್ಕೆ ಸಿದ್ಧತೆಗಳು ಭರ್ಜರಿಯಾಗಿವೆ.
ಜೆನಿಲಿಯಾ ಹಾಗೂ ರಿತೇಶ್ ಕುಟುಂಬಿಕರು ಫೆಬ್ರವರಿ 3,4,5,6 ದಿನಾಂಕಗಳನ್ನು ಮದುವೆಗೆ ನಿಗದಿಪಡಿಸಿದ್ದಾರೆ. ಫೆಬ್ರವರಿ 3ರಂದು ಮೆಹಂದಿ ಸಂಭ್ರಮ, 4ರಂದು ಸಂಗೀತ ಸಂಭ್ರಮ, 5 ಮತ್ತು 6ರಂದು ಆರತಕ್ಷತೆ ಹಾಗೂ ಮದುವೆ ನಡೆಯಲಿದೆ. ಮುಂಬೈನ ಪ್ರತಿಷ್ಠಿತ ಹ್ಯಾತ್ ರೀಜೆನ್ಸಿ ಹೊಟೇಲ್‌ನಲ್ಲಿ ಮದುವೆ ಅದ್ದೂರಿಯಾಗಿ ನೆರವೇರಲಿದೆ.
ಬಚ್ಚನ್ ಫ್ಯಾಮಿಲಿ, ನಿರ್ದೇಶಕರಾದ ಕರಣ್ ಜೋಹರ್, ರಾಮ್ ಗೋಪಾಲ್ ವರ್ಮಾ, ಸಜಿದ್ ಖಾನ್, ನಟರದ ಬೊಮನ್ ಇರಾನಿ, ಇಮ್ರಾನ್ ಖಾನ್ ಸೇರಿದಂತೆ ಬಾಲಿವುಡ್‌ನ ಬಹುತೇಕ ಖ್ಯಾತನಾಮರು ಆಗಮಿಸಲಿದ್ದಾರೆ. ಜೆನಿಲಿಯಾ ಮತ್ತು ರಿತೇಶ್ ಹನಿಮೂನ್ ಪ್ಲಾನ್ ಕೂಡ ನಡೆಯುತ್ತಿದೆ ಎನ್ನುತ್ತವೆ ಬಾಲಿವುಡ್ ಮೂಲಗಳು. (ಏಜೆನ್ಸೀಸ್)
More from Filmibeat
English summary
Bubbly actress Genelia’s marriage with her long time boyfriend Riteish Deshmukh will be held soon in Mumbai. As per the sources the couple plans to have a four-day celebration of their marriage in the first week of February 2012. The couple family has selected the February 3,4,5,6 dates for Genelia-Riteish’s marriage.


Click it and Unblock the Notifications











