ಚಿತ್ರರಂಗಕ್ಕೆ ವಿದಾಯ ಹೇಳಿ ಲಂಡನ್‌ಗೆ ಹಾರಿದ ಶಮಿತಾ

By Rajendra

ಸಾಗರ ಕನ್ಯೆ ಶಿಲ್ಪಾ ಶೆಟ್ಟಿ ಮುದ್ದಿನ ತಂಗಿ ಶಮಿತಾ ಶೆಟ್ಟಿ ಬಾಲಿವುಡ್‌ಗೆ ಟಾಟಾ ಬಾಯ್ ಬಾಯ್ ಹೇಳಿದ್ದಾರೆ. ಈ ವಿಷಯವನ್ನು ಸ್ವತಃ ಶಮಿತಾ ಅಕ್ಕ ಶಿಲ್ಪಾ ತಿಳಿಸಿದ್ದಾರೆ. ಬಾಲಿವುಡ್‌ನಿಂದ ನಿರೀಕ್ಷಿಸಿದಷ್ಟು ಅವಕಾಶಗಳು ಶಮಿತಾ ಬರುತ್ತಿಲ್ಲ. ಹಾಗಾಗಿ ಆಕೆ ಚಿತ್ರರಂಗ ತ್ವರೆಯುತ್ತಿದ್ದಾರೆ ಎಂದಿದ್ದಾರೆ ಶಿಲ್ಪಾ.

ಹಾಗಿದ್ದರೆ ಆಕೆಯ ಮುಂದಿನ ಪಯಣ ಎತ್ತ? ಸದ್ಯಕ್ಕೆ ಆಕೆ ಲಂಡನ್‌ಗೆ ಹಾರಲಿದ್ದು ಅಲ್ಲಿ ಇಂಟೀರಿಯರ್ ಡಿಸೈನಿಂಗ್ ಕಲಿಯಲಿದ್ದಾರಂತೆ. ಅಲ್ಲಿಂದ ಆಕೆಯ ಹೊಸ ವೃತ್ತಿ ಜೀವನ ಆರಂಭವಾಗಲಿದೆ. ಅದು ಆರು ತಿಂಗಳ ಅಲ್ಪಾವಧಿ ಕೋರ್ಸ್. ಪೂರ್ಣಾವಧಿ ಕೆಲಸ ಕೊಡುತ್ತದೆ ಎಂಬ ಲೆಕ್ಕಾಚಾರ ಅವರದು.

"ಗೃಹಿಣಿಯಾಗಿ ನನ್ನ ಜೀವನದಲ್ಲಿ ಅತ್ಯುತ್ತಮವಾದ ಪಾತ್ರವನ್ನು ಪೋಷಿಸುತ್ತಿದ್ದೇನೆ. ಚಲನಚಿತ್ರಗಳು ಜೀವನದ ಅವಿಭಾಜ್ಯ ಅಂಗವಲ್ಲ. ಬೆಳಗ್ಗೆ ಎದ್ದು ತರಾತುರಿಯಲ್ಲಿ ಶೂಟಿಂಗ್‌ಗೆ ಹೋಗುವುದಕ್ಕಿಂತ ಮನೆವಾರ್ತೆ ನೋಡಿಕೊಳ್ಳುವುದರಲ್ಲೇ ಹೆಚ್ಚು ತೃಪ್ತಿ ಇದೆ " ಎಂದು ತಂಗಿಯ ನಿರ್ಧಾರವನ್ನು ಶಿಲ್ಪಾ ಶೆಟ್ಟಿ ಸಮರ್ಥಿಸಿಕೊಂಡಿದ್ದಾರೆ. (ಏಜೆನ್ಸೀಸ್)

More from Filmibeat

English summary
Shamita Shetty, Shilpa Shetty's sister after not being able to find a foothold in Bollywood, has decided to take off to London to in search of another calling. Reveals Shilpa, "Shamita is now entering another phase in her life and career. She is now heading to London for a six-month course in interior designing. We all felt this was the right move for her to make."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X