ಐಶ್ವರ್ಯಾ ರೈ ಡೆಲಿವರಿಗೆ ನವೆಂಬರ್ ಹನ್ನೊಂದಕ್ಕಾ!
ಐಶ್ವರ್ಯಾ ರೈ ಮದುವೆಯಾದಾಗಿನಿಂದ ಅವರ ಮಗುವಿಗಾಗಿ(!) ಹಂಬಲಿಸುತ್ತಿತ್ತು ಅಭಿಮಾನಿ ಬಳಗ. ಈಗಂತೂ ಹೇಳಿ ಕೇಳಿ ಗರ್ಭಿಣಿಯಾಗಿರುವ ಐಶ್ ಮೇಲೆಯೇ ಎಲ್ಲರ ಕಣ್ಣು! ಬೇರೆಲ್ಲರಿಗಿಂತ ಹೆಚ್ಚು ತಲೆಕೆಡಿಸಿಕೊಂಡಿದ್ದು ಬುಕ್ಕಿಗಳು. ಐಶ್ ಗೆ ಹುಟ್ಟುವ ಮಗು ಗಂಡೋ, ಹೆಣ್ಣೋ ಅಥವಾ ಟ್ವಿನ್ಸ್..? ಎಂಬ ಮೂರು ಆಯ್ಕೆಗಳಲ್ಲಿ ಬೆಟ್ಸ್ ಕಟ್ಟಿಸಿಕೊಂಡಿದ್ದೇ ಕೆಲಸ.
ಟ್ವಿನ್ಸ್ ಅಲ್ಲವೇ ಅಲ್ಲ ಎಂದು ಅಭಿಷೇಕ್ ಹೇಳಿದ ಮೇಲೆ, ಮೇಲೋ ಅಥವಾ ಫೀಮೇಲೋ ಎಂಬುದಕ್ಕಷ್ಟೇ ಸೀಮಿತವಾಯಿತು ಬೆಟ್ಟಿಂಗ್ ಬಿಸಿನೆಸ್. ಇದೀಗ ಡೆಲಿವರ್ ಡೇಟ್ ಬಗ್ಗೆ ಶುರುವಾಗಿದೆ ಬೆಟ್ಟಿಂಗ್. ಒಟ್ಟಿನಲ್ಲಿ ಐಶ್ ಹೊಟ್ಟೆಯಿಂದ ಮಗು ಈಚೆ ಬರುವವರೆಗೂ ಜನರಿಗೆ ನಿದ್ರೆಯಿಲ್ಲ, ಬೆಟ್ಟಿಂಗ್ ಬಿಸಿನೆಸ್ಮನ್ ಗೆ ಚಿಂತೆಯಿಲ್ಲ. ಇಷ್ಟೇ ಅಲ್ಲ, ಮಗು ಹುಟ್ಟಲಿರುವ ದಿನಾಂಕದ ಆಯ್ಕೆಗಳಲ್ಲಿ ಒಂದು 11/11/11 ಆಗಿದ್ದರೆ, ಮಕ್ಕಳ ದಿನಾಚರಣೆಯ ದಿನಾಂಕ, 14/11/11 ಇನ್ನೊಂದು!
ಇದೀಗ ಡೆಲಿವರಿ ಡೇಟ್ ಹತ್ತಿರ ಬರುತ್ತಿದ್ದಂತೆ ಬೆಟ್ಟಿಂಗ್ ರೇಟ್ ನಲ್ಲಿ ಕ್ಷಣಕ್ಷಣಕ್ಕೂ ಬದಲಾವಣೆ ಆಗುತ್ತಿದೆಯಂತೆ. ಯಾರಿಗೋ ಹುಟ್ಟುವ ಮಗುವಿಗಾಗಿ ಯಾರೋ ತಲೆಕೆಡಿಸಿಕೊಳ್ಳುವುದು ಇದೇ ಕೊನೆಯಲ್ಲ ಬಿಡಿ. ಇದಕ್ಕೆಲ್ಲಾ ಐಶ್ ಹಾಗೂ ಬಚ್ಚನ್ ಕುಟುಂಬ ತಲೆಕೆಡಿಸಿಕೊಂಡಿದ್ದರೆ ಇಷ್ಟರಲ್ಲೇ ಏನೋನೋ ಆಗುತ್ತಿತ್ತು. ಮಗುವಿಗೇನಾದರೂ ಗೊತ್ತಾದರೆ ಹೊಟ್ಟೆಯೊಳಗೇ ನಗುವುದು ಗ್ಯಾರಂಟಿ..!


Click it and Unblock the Notifications












