»   » ಐಶ್ವರ್ಯ ರೈ ಡೆಲಿವರ್ ಡೇಟ್ ಕೊನೆಗೂ ಬಹಿರಂಗ

ಐಶ್ವರ್ಯ ರೈ ಡೆಲಿವರ್ ಡೇಟ್ ಕೊನೆಗೂ ಬಹಿರಂಗ

Posted By:
Subscribe to Filmibeat Kannada

ಮುಂಬೈನ ಮರೋಲಿನಲ್ಲಿರುವ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಸಕುಟುಂಬ ಸಪರಿವಾರ ಸಮೇತ ಇರುವ ಸುಂದರಿ ಐಶ್ವರ್ಯಾ ರೈ ಹೆರಿಗೆಯ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿದೆ. ಈಗಾಗಲೇ ಗೌರವಾನ್ವಿತ ಬಚ್ಚನ್ ಕುಟುಂಬ ಯಾವ ಮೂಢನಂಬಿಕೆಗೆ ಕಟ್ಟು ಬೀಳದೇ, ಐಶೂಗೆ ನೈಸರ್ಗಿಕ ಹೆರಿಗೆಗೆ ಅವಕಾಶ ನೀಡಲಿದ್ದಾರೆ ಎಂಬುದು ಖಚಿತವಾಗಿದೆ.

ಸುದ್ದಿ ಮೂಲಗಳ ಪ್ರಕಾರ, ಐಶ್ವರ್ಯಾ ಹೆರಿಗೆ ಇದೇ ತಿಂಗಳ 17 ರಂದು. ಆ ದಿನ ಮಧ್ಯಾನ್ಹದ ವೇಳೆಗೆ ಸೆವೆನ್ ಹಿಲ್ಸ್ ಆಸ್ಪತ್ರೆಯ 5ನೇ ಮಹಡಿಗೆ ಐಶೂರನ್ನು ಸ್ಥಳಾಂತರಿಸಲಾಗುವುದೆಂಬ ಮಾಹಿತ ಲಭ್ಯವಾಗಿದೆ. ಈಗಾಗಲೇ ಆಸ್ಪತ್ರೆಗೆ ಅಭಿಷೇಕ್ ಸಹೋದರಿ ಶ್ವೇತಾ ನಂದ ಆಗಮಿಸಿದ್ದಾರೆ. ಇಡೀ ಬಚ್ಚನ್ ಪರಿವಾರ ಅಲ್ಲಿದೆ.

ಪ್ರಪಂಚವೇ ಪರವಶವಾಗಿರುವ ಈ ವಿದ್ಯನ್ಮಾನಕ್ಕೆ ಸೆವೆನ್ ಹಿಲ್ಸ್ ಆಸ್ಪತ್ರೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಬೆಟ್ಟಿಂಗ್ ಭೂಪರು ಇನ್ನು ಗಂಡೋ ಹೆಣ್ಣೋ ಎಂದು ಕಿತ್ತಾಡಬಹುದು. ಕೊನೆಗೂ ನವೆಂಬರ್ 17 ಕ್ಕೆ ಐಶೂ ಹೆರಿಗೆ ಖಚಿತವಾಗಿದೆ. ಜಗತ್ತು ನವೆಂಬರ್ 17ಕ್ಕೆ ಸಂಚಲನಹೊಂದುವುದಂತೂ ಗ್ಯಾರಂಟಿ. (ಏಜೆನ್ಸೀಸ್)

English summary
Aishwarya Rai Bachchan was admitted to the Seven Hills Hospital, on Sunday amidst tight security. Aishwarya will apparently give birth to her first child on November 17.
 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada