Just In
Don't Miss!
- News
ಭಾರತದಿಂದ 2 ಮಿಲಿಯನ್ ಕೊರೊನಾವೈರಸ್ ಲಸಿಕೆ ಪಡೆದ ಬ್ರೆಜಿಲ್
- Lifestyle
"ಶನಿವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ "
- Education
Karnataka SSLC Exam 2021: ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾತಿ ಕಡ್ಡಾಯ ಇಲ್ಲ
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Sports
ಭಾರತ vs ಆಸೀಸ್: ಕಾಕತಾಳೀಯ, ಕುತೂಹಲಕಾರಿ ಅಂಕಿ-ಅಂಶಗಳು!
- Automobiles
ಕೋವಿಡ್ ವ್ಯಾಕ್ಸಿನ್ ಸಾಗಾಣಿಕೆಗಾಗಿ ಹೊಸ ಮಾದರಿಯ ಟ್ರಕ್ ಸಿದ್ದಪಡಿಸಿದ ಭಾರತ್ ಬೆಂಝ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರವೀನಾ ಟಂಡನ್ ಜತೆ ಅಮಿತಾಬ್ ಬಚ್ಚನ್ ರೊಮ್ಯಾನ್ಸ್
ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯಿಸುತ್ತಿರುವ ಲೇಟೆಸ್ಟ್ ಚಿತ್ರ ಬುದ್ಧ. ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಪುರಿ ಜಗನ್ನಾಥ್. ಬಾಲಿವುಡ್ ಕನಸಿನ ಕನ್ಯೆ ಹೇಮಾ ಮಾಲಿನಿ ಬಹಳಷ್ಟು ಚಿತ್ರಗಳಲ್ಲಿ ಬಿಗ್ ಬಿಗೆ ಪತ್ನಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ರವೀನಾ ಟಂಡನ್ ಜತೆ ಬಿಗ್ ಬಿ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ.
ಚಿತ್ರದಲ್ಲಿ ಬಿಗ್ ಬಿ ಅವರದು ವಯಸ್ಸಾದ ಪಾತ್ರವಾದರೂ ನವ ಯುವಕನಂತೆ ಕಾಣಿಸುತ್ತಾರಂತೆ. ರವೀನಾ ಟಂಡನ್ ಜತೆ ರೊಮ್ಯಾನ್ಸ್ ಮಾಡಿ ನೇರವಾಗಿ ಯುವ ಹೃದಯಗಳಿಗೆ ಲಗ್ಗೆ ಹಾಕುತ್ತಾರಂತೆ. 'ಪಾ' ಚಿತ್ರದ ಬಳಿಕ ಬಿಗ್ ಬಿಗೆ ಸವಾಲೊಡ್ಡುವ ಮತ್ತೊಂದು ಚಿತ್ರ 'ಬುದ್ಧ' ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆರಂಭದಲ್ಲಿ ಟಬು ಮತ್ತು ಜೂಹಿ ಚಾವ್ಲಾ ಅವರಿಗೆ ಚಿತ್ರದಲ್ಲಿ ನಟಿಸಲು ಆಹ್ವಾನ ನೀಡಲಾಗಿತ್ತು. ಕೊನೆ ಗಳಿಗೆಯಲ್ಲಿ ಈ ಪಾತ್ರ ರವೀನಾ ಟಂಡನ್ ಪಾಲಾಗಿದೆ. ಅಂದಹಾಗೆ 'ಬುದ್ಧ' ಚಿತ್ರ ಮಾರ್ಚ್‌ನಲ್ಲಿ ಸೆಟ್ಟೇರಲಿದೆ. ಬಿಗ್ ಬಿ, ರವೀನಾ ಟಂಡನ್ ಜೋಡಿ ಪ್ರೇಕ್ಷಕರನ್ನು ಸೆಳೆಯುತ್ತಾರೋ ಇಲ್ಲವೋ ಕಾದುನೋಡಬೇಕು.