ಏಕ್ತಾಗೆ 'ಡರ್ಟಿ' ವರ್ಮಾ ಮಿಲಿಯನ್ ಸೀರಿಯಲ್ ಕಿಸ್

ಈ ಚಿತ್ರವನ್ನು ನೋಡಿದ ವರ್ಮಾ, ಉದ್ಗಾರ ಎತ್ತಿದ್ದಾರೆ. "ಕುಟುಂಬ ಸಮೇತ ನೋಡುವಂತ ಡರ್ಟಿ ಚಿತ್ರವನ್ನು ನಿರ್ಮಾಣ ಮಾಡಿದ ಏಕ್ತಾ ಕಪೂರ್ ಗೆ ಧನ್ಯವಾದ. 'ಎಲ್ಲಾ ಕುಟುಂಬಗಳ ಒಳ ಮನಸ್ಸುಗಳೂ ಸಾಕಷ್ಟು ಕೆಳ ಹಾಗೂ ಕೀಳು ಮಟ್ಟದಲ್ಲಿಯೇ ಇರುತ್ತವೆ' ಎಂದು ನಾನು ಸಾಕಷ್ಟು ಮೊದಲೇ ಅಂದುಕೊಂಡಿದ್ದ ವಿಷಯವನ್ನು ಈ ಮೂಲಕ ಏಕ್ತಾ ಕಪೂರ್ ದೃಢೀಕರಿಸಿದ್ದಾರೆ" ಎಂದಿದ್ದಾರೆ.
ಡರ್ಟಿ ಚಿತ್ರದ ನಿರ್ಮಾಪಕಿ ಏಕ್ತಾ ಕುರಿತು, ವರ್ಮಾ ಈ ರೀತಿ ಟ್ವೀಟ್ ಮಾಡಿದ್ದಾರೆ. “I want to give 2 million 15 lakh 17 thousand 3 hundred and 26 and a half kisses to Ekta for proving that Dirty is Clean and Clean is Dirty." ಆದರೆ ವರ್ಮಾ ಹೇಳಿರುವ ಈ ಸಂಖ್ಯೆಯ ಮೂಲ ಯಾವುದೆಂದು ಅವರನ್ನೇ ಕೇಳಿ. ಆದರೆ ಏಕ್ತಾ ಕಪೂರ್ ಗೆ ರಾಮ್ ಗೋಪಾಲ್ ವರ್ಮಾ ಬಹಳಷ್ಟು ಕಿಸ್ ಗಳ ಮೂಲಕ ಪ್ರಶಂಸೆ ನೀಡಲು ಬಯಸಿದ್ದಾರೆ.
ಈ ಎಲ್ಲಾ ಕಥೆಯ ನೀತಿಯೆಂದರೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಏಕ್ತಾ ಕಪೂರ್ ನಿರ್ಮಾಣದ 'ದಿ ಡರ್ಟಿ ಪಿಕ್ಚರ್' ಚಿತ್ರ ಸಖತ್ ಇಷ್ಟವಾಗಿದೆ. ಅವರು ನಿರ್ಮಾಪಕಿ ಏಕ್ತಾಗೆ ಈ ಮೂಲಕ ಕೃತಜ್ಞತೆ ಹೇಳುತ್ತಿದ್ದಾರೆ. ಹಾಗೂ ಎಲ್ಲಾ ಫ್ಯಾಮಿಲಿಗಳ ನಾಟಕವನ್ನು ಈ ಸಿನಿಮಾ ಮೂಲಕ ಬಯಲಿಗೆಳೆಯಲು ಬಯಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











