ಸಖತ್ ಹಾಟ್ ಮತ್ತು ಸ್ಪೈಸಿ ರಾಗಿಣಿ ಎಂಎಂಎಸ್ ದೃಶ್ಯಗಳು
ಎಂಎಂಎಸ್‌ಗಳು ಎಂದರೆ ಸಾಕು ಅದರ ಜೊತೆಗೆ ಅಶ್ಲೀಲ ಎಂಬ ಪದವೂ ಅಂಟಿಕೊಂಡುಬಿಡುತ್ತದೆ. ಇವು ಉಜಿರೆ ಮಲ್ಲಿಗೆ, ಪುತೂರು ಮಲ್ಲಿಗೆ, ಮೈಸೂರು ಮಲ್ಲಿಗೆ ಎಂಬ ನಾನಾ ಹೆಸರುಗಳಲ್ಲಿ ಹರಿದಾಡಿ ಯುವಕರನ್ನು ದಾರಿತಪ್ಪಿಸುತ್ತವೆ. ಇದನ್ನು ಚೆನ್ನಾಗಿ ಬಲ್ಲ ಬಾಲಿವುಡ್ ಮಂದಿ ಈಗ ಅದೇ ಹೆಸರಿನಲ್ಲಿ ಚಿತ್ರ ತೆಗೆಯುತ್ತಿದ್ದಾರೆ. ಚಿತ್ರದ ಹೆಸರು 'ರಾಗಿಣಿ ಎಂಎಂಎಸ್'.
ಇದೊಂದು ನೈಜ ಕಥಾಹಂದರದ ಚಿತ್ರವಾಗಿದ್ದು ಏಕ್ತಾ ಕಪೂರ್ ನಿರ್ಮಿಸುತ್ತಿದ್ದು, ಪವನ್ ಕೃಪಲಾನಿ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಎಎಲ್‌ಟಿ ಲಾಂಛನದಲ್ಲಿ ನಿರ್ಮಿಸುತ್ತಿರುವ ಎರಡನೆ ಚಿತ್ರ ಇದು. ಈ ಹಿಂದೆ ಇದೇ ಸಂಸ್ಥೆ 'ಲವ್ ಸೆಕ್ಸ್ ಧೋಕಾ' ಎಂಬ ಚಿತ್ರವನ್ನು ನಿರ್ಮಿಸಿತ್ತು. ಅದು ಭರ್ಜರಿ ಯಶಸ್ಸನ್ನು ದಾಖಲಿಸಿತ್ತು.
ವಾರಾಂತ್ಯದ ರಜಾ ದಿನಗಳನ್ನು ರೊಮ್ಯಾಂಟಿಕ್ ಆಗಿ ಕಳೆಯಳು ಯುವ ಜೋಡಿಯೊಂದು ಮನೆಗೆ ಪ್ರವೇಶಿಸುತ್ತದೆ. ಆದರೆ ಆ ಮನೆಯಲ್ಲಿ ರಹಸ್ಯವಾಗಿ ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ರೋಮ್ಯಾಂಟಿಕ್ ಮೂಡ್‌ನಲ್ಲಿರುವ ಯುವ ಜೋಡಿಗೆ ಈ ವಿಷಯ ಗೊತ್ತಿರುವುದಿಲ್ಲ.
ಅವರ ಪ್ರತಿಯೊಂದು ಖಾಸಗಿ ಸನ್ನಿವೇಶಗಳು ರಹಸ್ಯವಾಗಿ ಚಿತ್ರೀಕರಣಗೊಳ್ಳುತ್ತವೆ. ಬಳಿಕ ಈ ಎಂಎಂಎಸ್ ಏನೆಲ್ಲಾ ಅವಾಂತರಳಿಗೆ ಕಾರಣವಾಗುತ್ತದೆ ಎಂಬುದು ಚಿತ್ರದ ಕತೆ. ವಿಶೇಷ ಎಂದರೆ ಚಿತ್ರೀಕರಣದ ಎಂಎಂಎಸ್ ದೃಶ್ಯಗಳು ವಿಚಿತ್ರವಾಗಿದ್ದು ಮಾನವರಿಗೆ ಅರ್ಥವಾಗುವುದೇ ಇಲ್ಲ. ಇಲ್ಲಿಂದ ಚಿತ್ರ ಹೊಸ ತಿರುವು ಪಡೆಯುತ್ತದೆ. ಮೇ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ.


Click it and Unblock the Notifications











