ಬಾಲಿವುಡ್ 'ಬ್ರಹ್ಮಚಾರಿ' ಶಮ್ಮಿ ಕಪೂರ್ ಇನ್ನಿಲ್ಲ

By Mahesh

Veteran actor Shammi Kapoor passes away
ಹಿಂದಿನ ಚಿತ್ರರಂಗದ ಯಶಸ್ವಿ ನಟ, ಕಪೂರ್ ಮನೆತನದ ಹಿರಿಯ 'ಜೀವನ ಜ್ಯೋತಿ' ಇಂದು ಮುಂಜಾನೆ 5.15ಕ್ಕೆ ನಂದಿದೆ. ಕೆಲ ತಿಂಗಳುಗಳಿಂದ ಅಸ್ವಸ್ಥರಾಗಿದ್ದ 79 ವರ್ಷದ ಶಮ್ಮಿ ಕಪೂರ್ ಅವರು ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

21 ಅಕ್ಟೋಬರ್ 1931ರಂದು ಜನಿಸಿದ ಶಂಷೀರ್ ರಾಜ್ ಕಪೂರ್ ಅವರು ತಂದೆ ಪೃಥ್ವೀರಾಜ ಕಪೂರ್, ಅಣ್ಣ ರಾಜ್ ಕಪೂರ್, ತಮ್ಮ ಶಶಿ ಕಪೂರ್ ರಂತೆ ಬಾಲಿವುಡ್ ಜಗತ್ತಿನಲ್ಲಿ ಮಿಂಚಿದರು.

ಬಾಲ್ಯದಲ್ಲಿ ಹೆಚ್ಚಿನ ಅವಧಿ ಕೋಲ್ಕತ್ತಾದಲ್ಲೇ ಕಳೆದ ಶಮ್ಮಿ, 5೦ ರಿಂದ 60 ರ ದಶಕದಲ್ಲಿ ಹಿಂದಿ ಚಿತ್ರರಂಗ ಆಳಿದ ಆರಡಿ ಅಜಾನುಬಾಹು ಶಮ್ಮಿ 953ರಲ್ಲಿ ಜೀವನ ಜ್ಯೋತಿ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದರು.

ಮಧುಬಾಲಾ ನಂತರ ಆಶಾ ಪರೇಖ್ , ಸಾಧನಾ, ಸಾಯಿರಾಬಾನು, ಶರ್ಮಿಳಾ ಠಾಗೋರ್ ಜೊತೆ ನಟಿಸಿದ ಶಮ್ಮಿ ಜೊತೆ ನಟಿಸುವುದೆಂದರೆ ಆ ಕಾಲದ ನಟಿಯರಿಗೆ ಹೆಮ್ಮೆಯ ವಿಷಯವಾಗಿತ್ತು.

ಹಿರಿಯ ನಟಿ ಗೀತಾ ಬಾಲಿಯವರೊಡನೆ ಶಮ್ಮಿ ಪ್ರೇಮವಿವಾಹವಾಗಿದ್ದರು. ಆದಿತ್ಯ ರಾಜ್ ಕಪೂರ್ ಹಾಗೂ ಕಾಂಚನ ಎಂಬ ಇಬ್ಬರು ಮಕ್ಕಳಿದ್ದಾರೆ. 1966 ರಲ್ಲಿ ಸಿಡುಬು ರೋಗಕ್ಕೆ ತುತ್ತಾಗಿದ್ದ ನಟಿ ಗೀತಾ ಬಾಲಿ ಇಹಲೋಕದ ಯಾತ್ರೆ ಮುಗಿಸಿದರು. ನಂತರ ಗುಜರಾತಿನ ನೀಲಾದೇವಿ ಗೋಯಿಲ್ ಎಂಬುವರನ್ನು ಶಮ್ಮಿ ವಿವಾಹವಾದರು.

ತುಮ್ಸಾ ನಹೀ ದೇಖಾ, ದಿಲ್ ದೇಖೆ ದೇಖೋ, ಜಂಗ್ಲಿ, ದಿಲ್ ತೇರಾ ದಿವಾನಾ, ಪ್ರೊಫೆಸರ್,ಚೈನಾ ಟೌನ್,ಬ್ರಹ್ಮಚಾರಿ, ರಾಜ್ ಕುಮಾರ್, ಕಶ್ಮೀರ್ ಕಿ ಕಲಿ, ತೀಸ್ರಿ ಮಂಜಿಲ್, ಆನ್ ಈವಿಂಗ್ ಇನ್ ಪ್ಯಾರೀಸ್, ವಿಧಾತ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಬಾಲಿವುಡ್ ನಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿದ ಧೀಮಂತ ನಟ.

ಬ್ರಹ್ಮಚಾರಿ ಚಿತ್ರದ ಅಭಿನಯಕ್ಕೆ ಫಿಲ್ಮಂಫೇರ್ ಪ್ರಶಸ್ತಿ, ವಿಧಾತ ಚಿತ್ರಕ್ಕೆ ಪೋಷಕ ನಟ ಪ್ರಶಸ್ತಿ ಗಳಿಸಿದ್ದರು. ದಾದಾ ಸಾಹೇಬ್ ಫಾಲ್ಕೆ ಅಕಾಡಮಿಯಿಂದ ಫಾಲ್ಕೆ ಲೆಂಜೆಂಡ್ ನಟ ಪ್ರಶಸ್ತಿ,

ಮಹಮ್ಮದ್ ರಫಿ ಹಾಗೂ ಶಮ್ಮಿ ಕಪೂರ್ ಜೋಡಿಯಲ್ಲಿ ಬಂದ ಗೀತೆಗಳು ಅಜರಾಮರವಾಗಿದೆ.

ನೆಟ್ಟಿಜನ್ ಶಮ್ಮಿ: ಐ.ಯು.ಸಿ.ಐ) ಭಾರತೀಯ ಅಂತರ್ಜಾಲ ಬಳಕೆದಾರರ ವರ್ಗದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಶಮ್ಮಿ, ಟ್ವೀಟ್ಟರ್ ಗೆ ಕಾಲಿಟ್ಟ ಬಾಲಿವುಡ್ ನ ಹಿರಿಯ ಜೀವಿಯಾಗಿದ್ದರು. ಕಪೂರ್ ಮನೆತನಕ್ಕೆ ಸಂಬಂಧಿಸಿದ ವೆಬ್ ಸೈಟ್ ನಿರ್ವಹಣೆ ಕೂಡಾ ಶಮ್ಮಿ ಮಾಡುತ್ತಿದ್ದರು.

More from Filmibeat

English summary
Veteran Bollywood actor Shammi Kapoor passed away on Sunday morning. The 79-year-old actor was admitted to Breach Candy hospital last week and was on ventilator support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X