For Quick Alerts
  ALLOW NOTIFICATIONS  
  For Daily Alerts

  ಚೇತನ್ ಭಗತ್ ಕಥೆ ಮತ್ತೆ ತೆರೆಗೆ ಅಪ್ಪಳಿಸಲಿದೆ

  By Mahesh
  |

  ಚೇತನ್ ಭಗತ್ ಎಂಬ ಸ್ಟಾರ್ ಕಾದಂಬರಿಗಾರ ಯಾರಿಗೆ ಗೊತ್ತಿಲ್ಲ. ಟೆಕ್ಕಿಗಳಿಗಳಂತೂ ಅಘೋಷಿತ ಗುರುವಿನಂತೆ ಆರಾಧಿಸುವ ಚೇತನ್ ರ ಇನ್ನೊಂದು ಕಾದಂಬರಿ ಈಗ ಬೆಳ್ಳಿತೆರೆಗೆ ಬರಲು ಸಿದ್ಧವಾಗಿದೆ. 3 ಈಡಿಯಟ್ಸ್ ಚಿತ್ರದಿಂದ ಹೋದ ಮಾನ ಈ ಮೂಲಕ ಮತ್ತೆ ಪಡೆಯುವ ಕನಸು ಕಾಣುತ್ತಿದ್ದಾರೆ ಚೇತನ್.

  ಚೇತನ್ ರ ಜನಪ್ರಿಯ ಕಾದಂಬರಿ '2 States" ನ ನಾಯಕ ಕ್ರಿಶ್ ಪಾತ್ರವನ್ನು ಬಾಲಿವುಡ್ ನ ಬಿಂದಾಸ್ ನಟ ಸೈಫ್ ಅಲಿಖಾನ್ ನಿರ್ವಹಿಸಲಿದ್ದಾರೆ. ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಮೂಲಕ 2 ಸ್ಟೇಟ್ಸ್ ಚಿತ್ರವಾಗುತ್ತಿರುವ ವಿಷಯವನ್ನು ಚೇತನ್ ಬಹಿರಂಗಪಡಿಸಿದ್ದಾರೆ.

  ಅಂಜಾನಾ ಅಂಜಾನಿ ನಿರ್ಮಿಸಿದ ಸಾಜಿದ್ ನಾಡಿಯಾಡ್ ವಾಲ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಚೇತನ್ ಟ್ವೀಟ್ ಮಾಡಿದ್ದಾರೆ.

  ಸುಂದರ ಕೌಟುಂಬಿಕ ಚಿತ್ರವಾಗಿ ಹೊರ ಹೊಮ್ಮುವ ಎಲ್ಲಾ ವಿಶ್ವಾಸವಿದೆ. ನನಗಂತೂ ತುಂಬಾ ಖುಷಿಯಾಗಿದೆ ಎಂದಿರುವ ಚೇತನ್, ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಕೂಡಾ ಅರ್ಪಿಸಿದ್ದಾರೆ.

  ಈ ಮುಂಚೆ ಚೇತನ್ ರ 'ಫೈವ್ ಪಾಯಿಂಟ್ ಸಮ್ ಒನ್' ಕಥೆ ಆಧರಿಸಿದ 3 ಈಡಿಯಟ್ಸ್ ಚಿತ್ರವಾಗಿ ಭರ್ಜರಿ ಯಶಸ್ಸು ಕಂಡಿತ್ತು. 'ಒನ್ ನೈಟ್ @ಕಾಲ್ ಸೆಂಟರ್ ' ಕಾದಂಬರಿ ಹಲೋ ಚಿತ್ರವಾಗಿ ಬೆಳ್ಳಿತೆರೆಯಲ್ಲಿ ವಿಫಲವಾಗಿತ್ತು. 3 ಈಡಿಯಟ್ಸ್ ನಲ್ಲಿ ಸರಿಯಾಗಿ ಹಣ ಹಾಗೂ ಮನ್ನಣೆ ಸಿಗಲಿಲ್ಲ ಎಂದು ಚೇತನ್ ಕ್ಯಾತೆ ತೆಗೆದಿದ್ದರು. ಆದರೂ ಅವರ ' ಫೈವ್ ಪಾಯಿಂಟ್ ಸಮ್ ಒನ್' ಪುಸ್ತಕ ಮಾರಾಟದಲ್ಲಿ ಶೇ10ರಿಂದ 15ರಷ್ಟು ಹೆಚ್ಚಳ ಕಂಡು ಪರೋಕ್ಷವಾಗಿ ಚೇತನ್ ಗೆ ಲಾಭ ತಂದಿತ್ತು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X