ದೇವ್ ಆನಂದ್ ಚಿತಾಭಸ್ಮ ಗೋದಾವರಿಯಲ್ಲಿ ಲೀನ
ಬಾಲಿವುಡ್ ಚಿರಯವ್ವನಿಗ ಎಂದೇ ಖ್ಯಾತನಾಗಿದ್ದ ದೇವ್ ಆನಂದ್ ಅವರ ಚಿತಾಭಸ್ಮವನ್ನು ನಾಸಿಕ್ ಬಳಿ ಗೋದಾವರಿ ನದಿಯಲ್ಲಿ ಲೀನಗೊಳಿಸಲಾಯಿತು. ದೇವ್ ಆನಂದ್ ಚಿತಾಭಸ್ಮವನ್ನು ಪವಿತ್ರ ನದಿಯಲ್ಲಿ ಬಿಡಲು ಅವರ ಪುತ್ರ ಸುನೀಲ್ ಲಂಡನ್‌ನಿಂದ ಭಾರತಕ್ಕೆ ಆಗಮಿಸಿದ್ದರು.
ಡಿಸೆಂಬರ್ 3ರಂದು ಲಂಡನ್‌ನಲ್ಲಿ ದೇವ್ ಆನಂದ್ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆ ಲಂಡನ್‌ನಲ್ಲಿ ನೆರವೇರಿತ್ತು. ಲಂಡನ್‌ನ ಭಾರತೀಯ ವಿದ್ಯಾಭವನದಲ್ಲಿ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಶುಕ್ರವಾರ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ಸ್ಟುಡಿಯೋದಲ್ಲಿ ದೇವ್ ಆನಂದ್ ಬಳಸುತ್ತಿದ್ದ ಮೇಕಪ್ ರೂಂ ಇರುವುದೇ ಇದಕ್ಕೆ ಕಾರಣ. ಆ ಮೇಕಪ್ ರೂಮಿಗೆ ಭೇಟಿ ನೀಡಿದರೆ ದೇವ್ ಆನಂದ್ ಇನ್ನೂ ಇಲ್ಲೇ ಎಲ್ಲೋ ಇದ್ದಾರೆ ಎಂಬ ಭಾವನೆ ಬರುತ್ತದೆ ಎಂಬುದು ಅವರ ಅಪಾರ ಅಭಿಮಾನಿಗಳ ನಂಬಿಕೆ. ಹಾಗೆಯೇ ಈ ಸ್ಟುಡಿಯೋದೊಂದಿಗೆ ದೇವ್ ಆನಂದ್ ಅವರಿಗೆ ಭಾವನಾತ್ಮಕ ನಂಟೂ ಇತ್ತು. (ಪಿಟಿಐ)
More from Filmibeat
English summary
Bollywood's evergreen star Dev Anand's ashes have been immersed in the Godavari river in Nashik this afternoon. Dev Anand's son Suneil came to India from London to immerse his late father's ashes in the holy river. Mohan Churiwala, a close aide of the legendary actor, has confirmed the news.


Click it and Unblock the Notifications











