For Daily Alerts
Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಂಬತ್ತು ವರ್ಷ ಪೂರೈಸಿದ ಭಾರತದ ಮೊದಲ ಟಾಕಿ ಚಿತ್ರ
Bollywood
oi-Rajendra Chintamani
By Rajendra
|
ಮೂಕಿ ಚಿತ್ರಗಳಿಗೆ ವಿದಾಯ ಹೇಳಿ ಟಾಕಿ ಚಿತ್ರಗಳಿಗೆ ನಾಂದಿ ಹಾಡಿದ ಮೊದಲ ಚಿತ್ರ ಅಲಂ ಅರಾ. ಈ ಚಿತ್ರ ಬಿಡುಗಡೆಯಾಗಿ ಇಂದಿಗೆ (ಮಾ.14) ಯಶಸ್ವಿ ಎಂಭತ್ತು ವರ್ಷಗಳನ್ನು ಪೂರೈಸಿದೆ. ಮಾರ್ಚ್ 14, 1931ರಲ್ಲಿ ತೆರೆಕಂಡ ಈ ಚಿತ್ರ ಭಾರತದ ಮೊಟ್ಟ ಮೊದಲ ವಾಕ್ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನ ಮೆಜೆಸ್ಟಿಕ್ ಸಿನಿಮಾದಲ್ಲಿ ಚೊಚ್ಚಲ ಪ್ರದರ್ಶನ ಕಂಡಿತ್ತು.
ಎರಡು ಗಂಟೆ ನಾಲ್ಕು ನಿಮಿಷಗಳ ಕಾಲಾವಧಿಯ ಈ ಟಾಕಿ ಚಿತ್ರವನ್ನು ಕಂಡ ಅಂದಿನ ಪ್ರೇಕ್ಷಕ ಮೂಕವಿಸ್ಮಿತನಾಗಿದ್ದ. ಬಾಲಿವುಡ್ ಚಿತ್ರಗಳಲ್ಲಿ ಸಂಗೀತ ಹಾಗೂ ಹಾಡುಗಳ ಬಳಕೆ ನಾಂದಿ ಹಾಡಿದ ಚಿತ್ರ ಇದು. ಕಮರ್ ಪುರ್‌ನ ರಾಜನ ಇಬ್ಬರು ಮುದ್ದಿನ ರಾಣಿಯರಾದ ನವ್ ಬಹರ್ ಹಾಗೂ ದಿಲ್ ಬಹರ್ ಕುರಿತ ಕಥಾಹಂದರವನ್ನು ಚಿತ್ರ ಒಳಗೊಂಡಿತ್ತು.
ಈ ಚಿತ್ರಕ್ಕೆ ಧ್ವನಿ ಹಾಗೂ ಸಂಗೀತದ ಮಹತ್ವವನ್ನು ಅರಿತ ಚಿತ್ರದ ನಿರ್ದೇಶಕ ಅರ್ದೇಶಿರ್ ಇರಾನಿ ಹೊಸ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದರು. ಸದ್ಯಕ್ಕೆ ಈ ಚಿತ್ರದ ಪ್ರಿಂಟ್‍ಗಳು ದುರ್ಲಭವಾಗಿದೆ. ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ ಬಳಿಯೂ ಇಲ್ಲ. ಪುಣೆಯ ನ್ಯಾಷನಲ್ ಫಿಲ್ಮ್ ಆರ್ಕೈವ್ಸ್‌ನಲ್ಲಿ ಇರಬಹುದು ಎಂಬು ಭಾವಿಸಲಾಗಿದ್ದ ಪ್ರಿಂಟ್‌ಗಳು 2003ರಲ್ಲಿ ಆದ ಬೆಂಕಿ ಆಕಸ್ಮಿಕದಲ್ಲಿ ಸುಟ್ಟುಹೋಗಿರುವ ಸಾಧ್ಯತೆಗಳಿವೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Comments
English summary
Alam Ara, the first talkie in the history of India was made today 80 years back. It was the same day when director Ardeshir Irani thought of this idea to include sound in movies. Alam Ara was a period movie which depicted the story of two queens of the king of Kamarpur, raani Nav bahar and raani Dilbahar.
Story first published: Monday, March 14, 2011, 17:09 [IST]
Other articles published on Mar 14, 2011