twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್‌ಗೆ ತೆರಳಲು ಪೈಪೋಟಿಗೆ ಬಿದ್ದಿವೆ 14 ಭಾರತೀಯ ಸಿನಿಮಾಗಳು

    |

    94ನೇ ಆಸ್ಕರ್ ಪ್ರಶಸ್ತಿ ಇದೇ ಏಪ್ರಿಲ್‌ನಲ್ಲಿ ಮುಗಿದಿದೆ. ಇದೀಗ 95ನೇ ಆಸ್ಕರ್‌ನತ್ತ ದೃಷ್ಟಿ ನೆಟ್ಟಿದೆ. ವಿಶ್ವದ ಅತ್ಯುನ್ನತ ಸಿನಿಮಾ ಪ್ರಶಸ್ತಿ ಎಂದೇ ಗುರುತಿಸಲಾಗುವ ಆಸ್ಕರ್‌ಗೆ ಈ ಬಾರಿ ಭಾರತದಿಂದ ಹೋಗುವ ಅಧಿಕೃತ ಸಿನಿಮಾ ಯಾವುದು ಎಂಬ ಬಗ್ಗೆ ಹುಡುಕಾಟ ಆರಂಭವಾಗಿದೆ.

    14 ಸಿನಿಮಾಗಳು ಈ ಬಾರಿ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ರವಾನೆಯಾಗಲು ಪರಸ್ಪರ ಸ್ಪರ್ಧೆಗೆ ಇಳಿದಿವೆ. ಅದರಲ್ಲಿ ಎರಡಷ್ಟೆ ದಕ್ಷಿಣ ಭಾರತದ ಸಿನಿಮಾಗಳಿವೆ. ಕನ್ನಡದ ಯಾವೊಂದು ಸಿನಿಮಾ ಸಹ ಸ್ಪರ್ಧೆಯಲ್ಲಿಲ್ಲ.

    ಕುಂಚಾಕೊ ಬೋಬನ್, ಜೋಜು ಜಾರ್ಜ್, ನಿಮಿಷಾ ಸಜಯನ್ ನಟಿಸಿ, ಮಾರ್ಟಿನ್ ಪ್ರಕ್ಕಟ್ ನಿರ್ದೇಶಿಸಿರುವ ಮಲಯಾಳಂ ಸಿನಿಮಾ 'ನಾಯಟ್ಟು', ಯೋಗಿಬಾಬು ನಟಿಸಿ, ಮಡೊನೆ ಅಶ್ವಿನ್ ನಿರ್ದೇಶಿಸಿರುವ ತಮಿಳು ಸಿನಿಮಾ 'ಮಂಡೇಲಾ', ವಿದ್ಯಾ ಬಾಲನ್ ನಟಿಸಿರುವ ಹಿಂದಿಯ 'ಶೇರ್ನಿ', ವಿಕ್ಕಿ ಕೌಶಲ್ ನಟಿಸಿ ಇತ್ತೀಚೆಗಷ್ಟೆ ಬಿಡುಗಡೆ ಆದ 'ಸರ್ದಾರ್ ಉದ್ಧಮ್ ಸಿಂಗ್', ಅಸ್ಸಾಮ್‌ನ 'ಬ್ರಿಡ್ಜ್', ಗುಜರಾತಿ ಸಿನಿಮಾ 'ಚೆಲ್ಲ ಶೋ' ಇನ್ನೂ ಕೆಲವು ಸಿನಿಮಾಗಳು ಸ್ಪರ್ಧೆಯಲ್ಲಿವೆ.

    14 Indian Movies Competing To Select For Oscar Award

    ಆಯ್ಕೆ ಆಗಿರುವ 14 ಸಿನಿಮಾಗಳನ್ನು 15 ಮಂದಿಯ ಸಿನಿಮಾಕರ್ಮಿಗಳ ಪ್ಯಾನೆಲ್ ವೀಕ್ಷಿಸಿ ಒಂದು ಸಿನಿಮಾವನ್ನು ಆಯ್ಕೆ ಮಾಡಿ 95ನೇ ಆಸ್ಕರ್‌ಗೆ ಭಾರತದ ಅಧಿಕೃತ ಆಯ್ಕೆಯಾಗಿ ಕಳಿಸಲಿದೆ. ಸಿನಿಮಾ ವೀಕ್ಷಣೆ ಕೊಲ್ಕತ್ತದಲ್ಲಿ ನಡೆಯಲಿದೆ. ಆಸ್ಕರ್‌ ಅಂಗಳದಲ್ಲಿ ಮತ್ತೊಮ್ಮೆ ವಿಮರ್ಶೆಗೊಳಪಡುವ ಸಿನಿಮಾಗಳು ಕೆಲವು ವಿಭಾಗಗಳನ್ನು ದಾಟಿ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆ ಆಗಿ ಅವುಗಳಲ್ಲಿ ಒಂದನ್ನು ಅತ್ಯುತ್ತಮ ವಿದೇಶಿ ಸಿನಿಮಾ ಅಥವಾ ಅತ್ಯುತ್ತಮ ಸಿನಿಮಾ ಎಂದು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ. ಕಳೆದ ವರ್ಷ ಭಾರತದಿಂದ ಮಲಯಾಳಂನ 'ಜಲ್ಲಿಕಟ್ಟು' ಸಿನಿಮಾ ಅಧಿಕೃತ ಸಿನಿಮಾವಾಗಿ ಆಸ್ಕರ್ ಪ್ರವೇಶಿಸಿತ್ತು. ಆದರೆ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆಯಾಗಲು ವಿಫಲವಾಗಿತ್ತು.

    ಈ ಬಾರಿಯ ಆಯ್ಕೆ ಸಮಿತಿಯ ನಾಯಕತ್ವವನ್ನು ನಿರ್ದೇಶಕ ಶಾಜಿ ಎನ್ ಕರುಣ್ ವಹಿಸಿಕೊಂಡಿದ್ದಾರೆ. ಅವರ ಮುಂದಾಳತ್ವದ 15 ಮಂದಿಯ ತಂಡವು ಈ 14 ರಲ್ಲಿ ಒಂದು ಅತ್ಯುತ್ತಮ ಸಿನಿಮಾವನ್ನು ಆಯ್ಕೆ ಮಾಡಲಿದೆ. ಪಟ್ಟಿಯಲ್ಲಿ ತಮಿಳಿನ 'ಕರ್ಣನ್' ಸಿನಿಮಾ ಇಲ್ಲದೇ ಇರುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಭಾರತದ ಮೊದಲ ಆಸ್ಕರ್ ವಿಜೇತ ಸತ್ಯಜಿತ್ ರೇ ಅವರ ಜನ್ಮ ಶತಮಾನೋತ್ಸವ ಈ ವರ್ಷ ಆಚರಿಸಲಾಗುತ್ತಿದೆ. ಹಾಗಾಗಿ ಈ ಬಾರಿ ಆಸ್ಕರ್‌ ಆಯ್ಕೆ ಕೊಲ್ಕತ್ತದಲ್ಲಿ ನಡೆಯುತ್ತಿದೆ.

    ಭಾರತದ 'ಮದರ್ ಇಂಡಿಯಾ', 'ಸಲಾಂ ಬಾಂಬೆ', 'ಲಗಾನ್' ಸಿನಿಮಾಗಳಷ್ಟೆ ಈವರೆಗೆ ಆಸ್ಕರ್‌ನ ಅಂತಿಮ ನಾಲ್ಕರ ಘಟಕ್ಕೆ ತಲುಪಲು ಯಶಸ್ವಿಯಾಗಿವೆ. ಇನ್ನಾವ ಭಾರತೀಯ ಸಿನಿಮಾಗಳು ಆಸ್ಕರ್‌ಗೆ ಈವರೆಗೆ ನಾಮಿನೇಟ್ ಆಗಿಲ್ಲ. ಕಮಲ್ ಹಾಸನ್ ನಟಿಸಿರುವ ಆರು ಸಿನಿಮಾಗಳು ಈವರೆಗೆ ಆಸ್ಕರ್‌ಗೆ ಕಳಿಸಲ್ಪಟ್ಟಿವೆ. ಸತ್ಯಜಿತ್ ರೇ ಅವರ ಮೂರು ಸಿನಿಮಾಗಳು ಆಸ್ಕರ್‌ಗೆ ಕಳಿಸಲ್ಪಟ್ಟಿವೆ. ಅಮೀರ್ ಖಾನ್‌ರ ನಾಲ್ಕು ಸಿನಿಮಾಗಳು ಆಸ್ಕರ್‌ಗೆ ಅರ್ಹತೆ ಗಿಟ್ಟಿಸಿಕೊಂಡಿವೆ. 'ಲಗಾನ್' ಸಿನಿಮಾ ಅಂತಿಮ ನಾಲ್ಕರ ಘಟ್ಟಕ್ಕೆ ಆಯ್ಕೆ ಸಹ ಆಗಿತ್ತು. ಆದರೆ ಪ್ರಶಸ್ತಿ ಜಯಿಸಲಿಲ್ಲ.

    English summary
    14 Indian movie including two south Indian movies were shortlisted to India's official entry to Oscars.
    Thursday, October 21, 2021, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X