ಜಾನ್ ಅಬ್ರಹಾಂ 'ನ್ಯೂ ಗರ್ಲ್ ಫ್ರೆಂಡ್' ನ್ಯೂಸ್ ಟಾಂ ಟಾಂ
ಒಂದು ಕಾಲದಲ್ಲಿ ಒಂದಾಗಿದ್ದ ಜಾನ್ ಅಬ್ರಹಾಂ ಬಿಪಾಶಾ ಬಸು ಬೇರಾಗಿ ಬಹಳಕಾಲ ಆಯ್ತು. ಬಿಪಾಶಾಗೆ 26ರ ಫೊರ್ಸ್ ಫೊರ ರಾಣಾ 'ಬಾಯ್ ಫ್ರೆಂಡ್ ಶಿಪ್' ಆಗಿದ್ದೂ ಆಯ್ತು. ಜಾನ್ ಗೆ ಯಾರಪ್ಪಾ ಇನ್ನು ಕಂಪನಿ ಎಂದು ತಲೆಕೆಡಿಸಿಕೊಳ್ಳುತ್ತಿದ್ದವರಿಗೆ ಉತ್ತರ ಸಿಕ್ಕಿದೆ.
ಜಾನ್ ಬಗ್ಗೆ ಬಾಯಿಗೆ ಬಂದದ್ದನ್ನೆಲ್ಲಾ ಮಾತನಾಡುತ್ತಿತ್ತು ಬಾಲಿವುಡ್. ಈಗ ಜಾನ್ ಬಾಯ್ಬಿಟ್ಟಿದ್ದಾರೆ. ಬಾಲಿವುಡ್ ಬಾಯಿ ಮುಚ್ಚಿಕೊಂಡಿದೆ. ಜಾನ್ ಹೊಸ ಪ್ರೇಯಸಿ ಹೆಸರು ಪ್ರಿಯಾ ಮಾರ್ವಾ. ಮುಂಬೈ ಮ್ಯಾರಥಾನ್ ವೇಳೆ ಜಾನ್-ಪ್ರಿಯಾ ಜೋಡಿ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡು ಮೋಡಿ ಮಾಡಿತು.
ಈ ಮೊದಲು ಮಿಡ್ ಡೇಗೆ ನೀಡಿದ ಸಂದರ್ಶನದಲ್ಲಿ ಜಾನ್ ಹೆಸರು ಹೇಳದೇ, ಹೃದಯ ದೊರಕಿದ್ದನ್ನು ಹೇಳಿಕೊಂಡಿದ್ದರು. "ನನ್ನ ಜೀವನದಲ್ಲಿ ಸ್ಪೆಷಲ್ ವ್ಯಕ್ಕಿಯೊಬ್ಬರ ಆಗಮನವಾಗಿದೆ. ಅದು ಸಂಪೂರ್ಣ ವೈಯಕ್ತಿಕ, ಹೆಚ್ಚೇನೂ ಹೇಳಲಾರೆ" ಎಂದಿದ್ದರು. ಆದರೆ ಪ್ರಿಯಾ ಜೊತೆ ಜಾನ್ ಹೆಚ್ಚು ಪೊಸೆಸಿವ್ ಆಗಿದ್ದನ್ನು ಅವನಾಪ್ತರು ನೋಡಿದ್ದರು. ಈಗ ಜಾನ್ ಸ್ವತಃ ಬಾಯ್ಬಿಟ್ಟಿದ್ದಾನೆ. ಬಿಪಾಶಾ ಸಿಕ್ಕಿದರೆ ಹೇಳಿಬಿಡಿ... (ಏಜೆನ್ಸೀಸ್)


Click it and Unblock the Notifications











