For Quick Alerts
  ALLOW NOTIFICATIONS  
  For Daily Alerts

  ಅನಾರ್ಕಲಿ ಸಲ್ವಾರ್ ಕಮೀಜ್‌ನಲ್ಲಿ ಗರ್ಭಿಣಿ ಶಿಲ್ಪಾ ಶೆಟ್ಟಿ

  By Rajendra
  |

  ತಾರೆ ಶಿಲ್ಪಾ ಶೆಟ್ಟಿ ಗರ್ಭಿಣಿಯಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ದರ್ಶನ ನೀಡಿದ್ದಾರೆ. ಗರ್ಭಿಣಿಯಾದ ಬಳಿಕ ಶಿಲ್ಪಾ ಸಭೆ ಸಮಾರಂಭಗಳಿಂದ ದೂರ ಉಳಿದಿದ್ದರು. ತಮ್ಮ ಬಿಜಿನೆಸ್ ಪಾರ್ಟನರ್ ಕಿರಣ್ ಭಾವಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಲ್ಪಾ ತುಂಬು ಹೊಟ್ಟೆ ಹೊತ್ತು ಬಂದದ್ದು ವಿಶೇಷವಾಗಿತ್ತು.

  ಕೆಂಪು ಮಿಶ್ರಿತ ಶ್ವೇತ ವರ್ಣದ ಅನಾರ್ಕಲಿ ಸಲ್ವಾರ್ ಕಮೀಜ್‌ನಲ್ಲಿ ಕಾಣಿಸಿಕೊಂಡ ಅವರನ್ನು ಛಾಯಾಗ್ರಾಹಕರು ತಮ್ಮ ಕ್ಯಾಮೆರಾ ಕಣ್ಣಲ್ಲಿ ಬಂಧಿಸಿದರು. ಟ್ವಿಟ್ಟರ್‌ನಲ್ಲಿ ಗರ್ಭಿಣಿಯಾದ ವಿಷಯವನ್ನು ಬಹಿರಂಗಪಡಿಸಿದ ಬಳಿಕ ಶಿಲ್ಪಾ ಶೆಟ್ಟಿ ನಾಪತ್ತೆಯಾಗಿದ್ದರು. ತಮ್ಮ ಪತಿ ರಾಜ್ ಕುಂದ್ರಾ ಜೊತೆ ಬಂದ ಶಿಲ್ಪಾ ರಸಪೂರಿ ಹಣ್ಣಿನಂತೆ ಕಂಗೊಳಿಸುತ್ತಿದ್ದದ್ದು ವಿಶೇಷ.

  ಲಂಡನ್ ಮೂಲದ ಉದ್ಯಮಿ ರಾಜ್ ಕುಂದ್ರಾ ಅವರನ್ನು 2009ರಲ್ಲಿ ಮದುವೆಯಾದ ಬಳಿಕ ಶಿಲ್ಪಾ ಚಿತ್ರರಂಗದಿಂದ ದೂರ ಉಳಿದಿದ್ದು, ಸದ್ಯಕ್ಕೆ ಯೋಗ ಹಾಗೂ ಸ್ಪಾ ಬಿಜಿನೆಸ್ ನೋಡಿಕೊಳ್ಳುತ್ತಿದ್ದಾರೆ. ಶಿಲ್ಪಾರನ್ನು ಕಂಡ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. (ಏಜೆನ್ಸೀಸ್)

  English summary
  Recently pregnant Shilpa Shetty made her first public appearance in a gorgeous red and white Anarkali salwar kameez. The occasion was Lohri celebration hosted by good friend and business partner Kiran Bawa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X