For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ ನಗ್ನ ಚಿತ್ರ ಎಲ್ಲಾ ಹುಸಿ!

  By Mahesh
  |

  ಛೆ! ಪ್ರೇಮಿಗಳ ದಿನ ಎಂಥಾ ಸುದ್ದಿ.. ವಿದ್ಯಾಬಾಲನ್ ಬೆತ್ತಲೆ ಬೆನ್ನು ಕಂಡು ಬೆರಗಾಗಿದ್ದ ಪಡ್ಡೆಗಳು, ಎಂಎಫ್ ಹುಸೇನ್ ರಂಥ ನಗ್ನ ಕಲಾಚಿತ್ರ ತಜ್ಞನಿಗೆ ವಿದ್ಯಾ ರೂಪದರ್ಶಿ ಎಂದು ತಿಳಿದ ಕೂಡಲೇ ನಿದ್ದೆಗೆಟ್ಟು ಕಾದು ಕೂತಿದ್ದರು.

  ಆದರೆ, ಬೆತ್ತಲೆ ಕಲಾಕೃತಿ ರಚಿಸಲು ವಿದ್ಯಾ ಒಪ್ಪಿಗೆ ನೀಡಿದ್ದಾರೆ, ಹುಸೇನ್ ಈಗಾಗಲೇ ಅದಕ್ಕೆ ಬೇಕಾದ ಬ್ರೆಷ್ ಗಳ ಆಯ್ಕೆಯಲ್ಲಿ ತೊಡಗಿದ್ದಾರೆ ಎನ್ನುವುದೆಲ್ಲ ಸುಳ್ಳು ಸುದ್ದಿ, ವಿದ್ಯಾ ಹೆಸರಿಗೆ ಮಸಿಬಳಿಯಲು ಕೆಲ ಜನರು ಹೆಣೆದ ಸುದ್ದಿ ಎಂದು ವಿದ್ಯಾಬಾಲನ್ ಅವರ ಆಪ್ತವಲಯ ಹೇಳಿದೆ. [ಮಕ್ಬೂಲ್ ಫಿದಾ ಹುಸೇನ್ ಇನ್ನಿಲ್ಲ]

  ಕ್ಯಾಲೆಂಡರ್ ವೊಂದರಲ್ಲಿ ಬೆತ್ತಲೆ ಬೆನ್ನು ತೋರಿಸಿದ್ದ ವಿದ್ಯಾ, ಸದ್ಯ ಸಿಲ್ಕ್ ಸ್ಮಿತಾ ಅವರ ಜೀವನ ಚರಿತ್ರೆ ಆಧರಿಸಿದ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಅಗತ್ಯಕ್ಕೆ ತಕ್ಕಷ್ಟು ಎಕ್ಸ್ ಪೋಸ್ ಮಾಡಲು ಸಿದ್ಧ ಎಂದಿದ್ದ ವಿದ್ಯಾ, ಡರ್ಟಿ ಪಿಕ್ಚರ್ ಚಿತ್ರದಲ್ಲಿ ನಾಸಿರುದ್ದೀನ್ ಶಾ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಸುದ್ದಿ ಹಬ್ಬಿತ್ತು.

  ಆದರೆ, ಇದರ ಬೆನ್ನ ಹಿಂದೆ, ಹುಸೇನ್ ಸಾಹೆಬ್ರು, ವಿದ್ಯಾ ಚಿತ್ರ ರಚಿಸಲು ಅನುಮತಿ ಕೋರಿದ್ದು, ಅದಕ್ಕೆ ವಿದ್ಯಾ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿಯೂ ಗಾಳಿಗಿಂತ ವೇಗವಾಗಿ ಎಲ್ಲೆಡೆ ಹಬ್ಬಿತ್ತು.

  ಮಾಧುರಿ ದೀಕ್ಷಿತ್, ಅಮೃತಾ ರಾವ್ ಹಾಗೂ ಅನುಷ್ಕಾ ಶರ್ಮಾ ನಂತರ ವಿದ್ಯಾರನ್ನು ತನ್ನ ಕುಂಚದಲ್ಲಿ ಸೆರೆ ಹಿಡಿಯಲು ಹಿರಿಯ ಕಲಾವಿದ ಹುಸೇನ್ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಎ ಡರ್ಟಿ ಪಿಕ್ಚರ್ ನಂತರ ನೂಡ್ ಪಿಕ್ಚರ್ ನಲ್ಲಿ ಕಾಣಿಸಿಕೊಳ್ಳಲು ವಿದ್ಯಾ ತಯಾರು ಎಂದು ಮಾಧ್ಯಮಗಳಲ್ಲಿ, ಪತ್ರಿಕೆಗಳ ಪೇಜ್ 3 ನಲ್ಲಿ ಸುದ್ದಿಯೋ ಸುದ್ದಿಯಾಗಿತ್ತು. ಆದರೆ, ಈಗ ಅದೆಲ್ಲವೂ ಠುಸ್ ಆಗಿದೆ.

  English summary
  A source close to Actress Vidya Balan has strongly denied that she has never dared to bare all. and report about MF Hussain plans to paint Vidya posing nude is fabricated by people. Vidya never agrees such offer and she has set limits to the skin-show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X