ದೀಪಿಕಾ ಪಡುಕೋಣೆ ಬಾಲಿವುಡ್ ಪಯಣಕ್ಕೆ 14 ವರ್ಷ: ಸಂತಸ ಹಂಚಿಕೊಂಡ ನಟಿ
ನಟಿ ದೀಪಿಕಾ ಪಡುಕೋಣೆ ಸದ್ಯ ಸಂತಸದಲ್ಲಿ ಇದ್ದರೆ. ಇವರ ಸಂತಸಕ್ಕೆ ಕಾರಣ ಓಂ ಶಾಂತಿ ಓಂ ಸಿನಿಮಾ. ದೀಪಿಕಾ ಪಡುಕೋಣೆ ಈ ಚಿತ್ರದ ಮೂಲಕವೇ ಬಾಲಿವುಡ್ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿದ್ದು. ಈಗ ಅವರ ಬಾಲಿವುಡ್ ಸಿನಿಮಾ ಪಯಣಕ್ಕೆ 14 ವರ್ಷ ತುಂಬಿದೆ. ಓಂ ಶಾಂತಿ ಓಂ ಸಿನಿಮಾ ನವೆಂಬರ್ 9, 2007ರಲ್ಲಿ ತೆರೆ ಕಂಡಿತ್ತು. ಈ ಚಿತ್ರ ರಿಲೀಸ್ ಆಗಿ ಹದಿನಾಲ್ಕು ವರ್ಷ ಆಗಿದೆ. ಇದೇ ಖುಷಿ ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಓಂ ಶಾಂತಿ ಓಂ ಸಿನಿಮಾದ ಹಾಡನ್ನು ಹಂಚಿ ಕೊಳ್ಳುವುದರ ಮೂಲಕ ತಮ್ಮ ಬಾಲಿವುಡ್ ಸಿನಿ ಪಯಣಕ್ಕೆ ಹದಿನಾಲ್ಕು ವರ್ಷ ತುಂಬಿದೆ ಎನ್ನುವ ಸಂತಸವನ್ನು ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದಾರೆ.
ಬಾಲಿವುಡ್‌ಗೆ ಎಂಟ್ರಿ ಕೊಟ್ಟ ದೀಪಿಕಾ ಪಡುಕೋಣೆ ಮೊದಲು ನಟಿಸಿದ್ದು ಓಂ ಶಾಂತಿ ಓಂ ಸಿನಿಮಾದಲ್ಲಿ. ಮೊದಲ ಚಿತ್ರದಲ್ಲಿ ಶಾರುಖ್ ಖಾನ್ ಜೊತೆಗೆ ತೆರೆ ಹಂಚಿಕೊಳ್ಳುವಂತಹ ಅವಕಾಶ ಸಿಕ್ಕಿತ್ತು. ಜೊತೆಗೆ ದೀಪಿಕಾ ಪಡುಕೋಣೆ ಅಭಿನಯದ ಮೊಟ್ಟಮೊದಲ ಬಾಲಿವುಡ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇನ್ನು ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ದ್ವಿ ಪಾತ್ರದಲ್ಲಿ ನಟಿಸಿದ್ದಾರೆ. ಶಾಂತಿಪ್ರಿಯ ಮತ್ತು ಸಂಧ್ಯಾ ಆಗಿ ದ್ವಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ದೀಪಿಕಾ ಬಾಲಿವುಡ್ ಸಿನಿ ಪ್ರೇಕ್ಷಕರಿಗೆ ಮೊದಲ ಚಿತ್ರದಲ್ಲೇ ಇಷ್ಟವಾದರು. ಹಾಗಾಗಿ ಮೊದಲ ಸಿನಿಮಾದಲ್ಲಿ ದೀಪಿಕಾ ಒಬ್ಬ ಸ್ಟಾರ್ ನಾಯಕಿಯಾಗಿ ಗುರುತಿಸಿ ಕೊಳ್ಳಲು ಸಾಧ್ಯವಾಗಿದೆ. ಈ ಚಿತ್ರವನ್ನು ಫರ್ಹಾ ಖಾನ್ ನಿರ್ದೇಶನ ಮಾಡಿದ್ದು, ಅರ್ಜುನ್ ರಾಂಪಾಲ್, ಶ್ರೇಯಸ್ ತಲ್ಪಾಡೆ ಮತ್ತು ಕಿರಣ್ ಖೇರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ಸಿನಿಮಾ ಜರ್ನಿಗೆ 14 ವರ್ಷ ತುಂಬಿದೆ. ಆದರೆ ಒಟ್ಟಾರೆ ದೀಪಿಕಾ ಪಡುಕೋಣೆ ಸಿನಿಮಾ ಜರ್ನಿಗೆ ಯಾರಿಗೆ ಹದಿನೈದು ವರ್ಷ ತುಂಬಿದೆ. ಯಾಕೆಂದರೆ ದೀಪಿಕಾ ಪಡುಕೋಣೆ ಮೊಟ್ಟಮೊದಲ ಬಾರಿಗೆ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದು ಕನ್ನಡದ ಐಶ್ವರ್ಯ ಸಿನಿಮಾದ ಮೂಲಕ. ನಟ ಉಪೇಂದ್ರ ಜೊತೆಗೆ ದೀಪಿಕಾ ಪಡುಕೋಣೆ ಐಶ್ವರ್ಯ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. 2006 ಸೆಪ್ಟೆಂಬರ್‌ನಲ್ಲಿ ಈ ಚಿತ್ರ ರಿಲೀಸ್ ಆಗಿದೆ. ಹಾಗಾಗಿ ದೀಪಿಕಾ ಪಡುಕೋಣೆ ಅವರ ಒಟ್ಟಾರೆ ಸಿನಿಮಾ ಜರ್ನಿಗೆ 15 ವರ್ಷ ತುಂಬಿದೆ. ಆದರೆ ಅವರ ಬಾಲಿವುಡ್ ಜರ್ನಿಗೆ ಹದಿನಾಲ್ಕು ವರ್ಷ ತುಂಬಿದೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ ದೀಪಿಕಾ ಪಡುಕೋಣೆ ನಂತರ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಕನ್ನಡದ ಐಶ್ವರ್ಯ ಸಿನಿಮಾ ಕೂಡ ಹಿಟ್ ಆದಂತಹ ಚಿತ್ರ.
ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸು ಕಂಡು ಮೈಲಿಗಲ್ಲನ್ನು ಸಾಧಿಸಿದ ದೀಪಿಕಾ ಪಡುಕೋಣೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಡುತ್ತಾ ಬಂದಿದ್ದಾರೆ. ಓಂ ಶಾಂತಿ ಓಂ ಚಿತ್ರದಿಂದ ಶುರುವಾದ ಯಶಸ್ವಿ ಪಯಣ ಇಲ್ಲಿವರೆಗೆ ಸಾಗಿದೆ. ಲವ್ ಆಜ್ ಕಲ್ , ಹೇ ಜವಾನಿ ಹೇ ದಿವಾನಿ, ತಮಾಶಾ ಅಂತಹ ಚಿತ್ರಗಳು ದೀಪಿಕಾ ಪಡುಕೋಣೆ ಸಿನಿಮಾ ಜೀವನದ ಉತ್ತಮ ಸಿನಿಮಾಗಳು ಎನಿಸಿಕೊಂಡಿವೆ. ಇನ್ನು 2020ರಲ್ಲಿ ಬಂದಂತಹ ಚಪಾಕ್ ಸಿನಿಮಾದ ಮೂಲಕ ದೀಪಿಕಾ ಪಡುಕೋಣೆ ನಿರ್ಮಾಪಕಿ ಆಗಿ ಕೂಡ ಹೊರ ಹೊಮ್ಮಿದ್ದಾರೆ. ಈ ಮೂಲಕ ದೀಪಿಕಾ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಸದ್ಯ ದೀಪಿಕಾ ಶಾರುಖ್ ಖಾನ್ ಜೊತೆಗೆ ಪಠಾಣ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.


Click it and Unblock the Notifications











