For Quick Alerts
  ALLOW NOTIFICATIONS  
  For Daily Alerts

  'ಧೂಮ್-2' ಚಿತ್ರಕ್ಕೆ 14 ವರ್ಷದ ಸಂಭ್ರಮ; ಹೃತಿಕ್ ಪಾತ್ರಕ್ಕೆ ಈ 3 ಖ್ಯಾತ ನಟರು ಸ್ಫೂರ್ತಿಯಂತೆ

  |

  ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಹೃತಿಕ್ ರೋಷನ್ ಅಭಿನಯದ ಸೂಪರ್ ಹಿಟ್ ಧೂಮ್-2 ಸಿನಿಮಾ ರಿಲೀಸ್ ಆಗಿ 14 ವರ್ಷಗಳು ಕಳೆದಿವೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಸರಿಯಾಗಿ 14 ವರ್ಷಗಳ ಹಿಂದೆ ಅಂದರೆ 2006 ನವೆಂಬರ್ 24ರಂದು ರಿಲೀಸ್ ಆಗಿತ್ತು.

  ಇದೀಗ ಈ ಸಿನಿಮಾಗೆ 14 ವರ್ಷದ ಸಂಭ್ರಮ. 14 ವರ್ಷ ತುಂಬಿರುವ ಧೂಮ್-2 ಬಗ್ಗೆ ನಟ ಹೃತಿಕ್ ರೋಷನ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ರಿವೀಲ್ ಮಾಡಿದ್ದಾರೆ. ಚಿತ್ರದಲ್ಲಿ ಹೃತಿಕ್ ಆರ್ಯನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಮೂವರು ಖ್ಯಾತ ನಟರಿಂದ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. ಮುಂದೆ ಓದಿ..

  ಹಾಲಿವುಡ್ ಎಂಟ್ರಿಗೆ ಸಜ್ಜಾದ ನಟ ಹೃತಿಕ್ ರೋಷನ್ಹಾಲಿವುಡ್ ಎಂಟ್ರಿಗೆ ಸಜ್ಜಾದ ನಟ ಹೃತಿಕ್ ರೋಷನ್

  ಈ ಮೂವರು ನಟರಿಂದ ಸ್ಫೂರ್ತಿ ಪಡೆದ ಆರ್ಯನ್ ಪಾತ್ರ

  ಈ ಮೂವರು ನಟರಿಂದ ಸ್ಫೂರ್ತಿ ಪಡೆದ ಆರ್ಯನ್ ಪಾತ್ರ

  ಹೃತಿಕ್ ನಟಿಸಿದ್ದ ಆರ್ಯನ್ ಪಾತ್ರ ಸ್ಫೂರ್ತಿ ಪಡೆದ ಮೂವರು ನಟರು ಮತ್ಯಾರು ಅಲ್ಲ ಬ್ರೂಸ್ ವಿಲ್ಲೀಸ್, ಪಿಯರ್ಸ್ ಬ್ರಾಸ್ನನ್ ಮತ್ತು ಅಮಿತಾಬ್ ಬಚ್ಚನ್ ಎಂದು ಹೃತಿಕ್ ಬಹಿರಂಗ ಪಡಿಸಿದ್ದಾರೆ. ಸಿನಿಮಾ ಬಗ್ಗೆ ಬರೆದುಕೊಂಡಿರುವ ಹೃತಿಕ್, 'ಧೂಮ್-2ನ ಆರ್ಯನ್ ನನ್ನ ಒಂದು ಭಾಗವಾಗಿದ್ದನು ಎಂದು ನನಗೆ ತಿಳಿದಿರಲಿಲ್ಲ. ಆ ಪಾತ್ರಕ್ಕಾಗಿ ನಾನು 3 ನಟರಿಂದ ಸ್ಫೂರ್ತಿ ಸಿಕ್ಕಿತು. ಬ್ರೂಸ್ ವಿಲ್ಲೀಸ್, ಪಿಯರ್ಸ್ ಬ್ರಾಸ್ನನ್ ಮತ್ತು ಅಮಿತಾಬ್ ಬಚ್ಚನ್. ಈ ಮೂವರು ನಟರಿಂದ ಆರ್ಯನ್ ಪಾತ್ರ ಹೊರಬಂದಿದೆ. ನನ್ನೊಳಗೆ ಆರ್ಯನ್ ಶಾಶ್ವತವಾಗಿ ಜೀವಿಸುತ್ತಾನೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ.

  ಕುತೂಹಲ ಹೆಚ್ಚಿಸಿದ ಹೃತಿಕ್ ಪೋಸ್ಟ್: ಮತ್ತೆ ಬರ್ತಾನಾ ಸೂಪರ್ ಹೀರೋ 'ಕಿಶ್'?ಕುತೂಹಲ ಹೆಚ್ಚಿಸಿದ ಹೃತಿಕ್ ಪೋಸ್ಟ್: ಮತ್ತೆ ಬರ್ತಾನಾ ಸೂಪರ್ ಹೀರೋ 'ಕಿಶ್'?

  ಚಿತ್ರಕ್ಕಾಗಿ ಒಂದೇ ದಿನ ಪ್ರಚಾರ

  ಚಿತ್ರಕ್ಕಾಗಿ ಒಂದೇ ದಿನ ಪ್ರಚಾರ

  ಅಲ್ಲದೆ ಎಲ್ಲಾ ನಟರು ಈ ಚಿತ್ರಕ್ಕಾಗಿ ಕೇವಲ ಒಂದೇ ಒಂದು ಪ್ರಚಾರ ಮಾಡಿದ್ದಾರೆಂದು ನಿಮಗೆ ತಿಳಿದಿದೆಯೇ? ಎಂದು ಹೃತಿಕ್ ಹೇಳಿದ್ದಾರೆ. ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಉದಯ್ ಚೋಪ್ರಾ, ಬಿಪಾಶಾ ಬಸು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್ ಆದಮೇಲೆ ದೊಡ್ಡ ಮಟ್ಟಕ್ಕೆ ಯಶಸ್ಸು ಗಳಿಸಿತು. ಹೃತಿಕ್ ಪಾತ್ರಕ್ಕೆ ಅಭಿಮಾನಿಗಳಿಗಳಿಂದ ಭಾರಿ ಮೆಚ್ಚುಗೆ ಪಾತ್ರವಾಗಿತ್ತು.

  ಮಾಜಿ ಪತ್ನಿಯ ಹುಟ್ಟುಹಬ್ಬದ ಲುಕ್ ಗೆ ನಟ ಹೃತಿಕ್ ರೋಷನ್ ಫಿದಾಮಾಜಿ ಪತ್ನಿಯ ಹುಟ್ಟುಹಬ್ಬದ ಲುಕ್ ಗೆ ನಟ ಹೃತಿಕ್ ರೋಷನ್ ಫಿದಾ

  ಧೂಮ್-3 ನಲ್ಲಿ ಹೃತಿಕ್ ಮಿಸ್

  ಧೂಮ್-3 ನಲ್ಲಿ ಹೃತಿಕ್ ಮಿಸ್

  ಧೂಮ್-2 ಬಾಕ್ಸ್ ಆಫೀಸ್ ನಲ್ಲು ಸಿನಿಮಾ ಉತ್ತಮ ಕಮಾಯಿ ಮಾಡಿತ್ತು. ಧೂಮ್-2 ಬಳಿಕ ಬಂದ ಧೂಮ್-3 ನಲ್ಲಿ ಹೃತಿಕ್ ರೋಷನ್ ಇರಲಿಲ್ಲ. ಧೂಮ್-3ನಲ್ಲಿ ಅಭಿಮಾನಿಗಳು ಹೃತಿಕ್ ರೋಷನ್ ನನ್ನು ತುಂಬಾ ಮಿಸ್ ಮಾಡಿಕೊಂಡಿದ್ದರು. ಒಂದುವೇಳೆ ಧೂಮ್ ಪ್ರಾಂಚೈಸಿ ಮುಂದುವರೆದರೆ ಧೂಮ್-4 ನಲ್ಲಿ ಹೃತಿಕ್ ಕಾಣಿಸಿಕೊಳ್ಳಲಿ ಎನ್ನುವುದು ಅಭಿಮಾನಿಗಳ ಆಸೆ.

  6 ಗಂಟೆ ಆದ್ರೆ ಒಂದು ಸಲ ಗಡಿಯಾರ ನೋಡಿ ಸಿಗ್ನಲ್ ಕೊಡ್ತಾ ಇದ್ರು ರಾಜ್ ಕುಮಾರ್ | Jaggesh and DR Rajkumar
  ಕ್ರಿಶ್-4 ಹೃತಿಕ್ ಬ್ಯುಸಿ

  ಕ್ರಿಶ್-4 ಹೃತಿಕ್ ಬ್ಯುಸಿ

  ಹೃತಿಕ್ ರೋಷನ್ ಸದ್ಯ ವಾರ್ ಸಿನಿಮಾ ಬಳಿಕ ಯಾವುದೇ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಮಾಡಿಲ್ಲ. ಕ್ರಿಶ್-4 ನಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೃತಿಕ್ ಮತ್ತೆ ಸೂಪರ್ ಹೀರೋ ಆಗಿ ಯಾವಾಗ ಎಂಟ್ರಿ ಕೊಡ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  English summary
  14 Years of Dhoom 2: Hrithik Roshan was inspired by three iconic actors for his role of Aryan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X