ಅಮೀರ್ ಖಾನ್ ಮಹಾ ಬುದ್ಧಿವಂತ; ಸಾಕ್ಷಿ ನೋಡಿ
ಬಾಲಿವುಡ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಸಂಬಂಧಗಳನ್ನು ನಿಭಾಯಿಸುವುದರಲ್ಲಿ ತುಂಬಾ ನಿಸ್ಸೀಮ ಎನ್ನಲೇಬೇಕು. ಮೊನ್ನೆ ತಾನೆ ಸೆಟ್ ನಲ್ಲೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಅಮೀರ್ ಖಾನ್, ತಮ್ಮ ಮಿತ್ರ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಹೊಗಳಿ ಅಟ್ಟದಮೇಲಿಟ್ಟಿದ್ದಾರೆ. ಸಲ್ಲೂ ತಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಗ್ರೇಟ್ ಅಂದಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅಮೀರ್, "ಸಲ್ಲುಗೆ ಅವನು ಬಯಸಿದ ಪ್ರೀತಿ ಸಿಗಲಿ. ಅವನಿಗೆ ಬೇಗ ಮದುವೆಯಾಗುವ ಮುಹೂರ್ತ ಕೂಡಿಬರಲಿ" ಎಂದು ಆಶಿಸಿದ್ದಾರೆ. ಅಷ್ಟೇ ಅಲ್ಲ, "ಸಲ್ಲೂ ಆತನ ಸ್ಪರ್ಧಿಗಳಿಗಿಂತ ಒಂದು ರೂಪಾಯಿಯಷ್ಟಾದರೂ ಹೆಚ್ಚೇ ಬಾಳುತ್ತಾರೆ" ಎನ್ನುವ ಮೂಲಕ ಲೈಟಾಗಿ ಶಾರುಖ್ ಕಾಲೆಳೆದಿದ್ದಾರೆ. ಹೀಗೆ ಆಗಾಗ ಶಾರುಖ್ ಗೆ ಬಿಸಿ ಮುಟ್ಟಿಸುತ್ತಲೇ ಇರುತ್ತಾರೆ ಅಮೀರ್.
ಇಷ್ಟೇ ಆದರೆ ಪರವಾಗಿರಲಿಲ್ಲ, ಅಮೀರ್ ಅದೆಷ್ಟು ನಿಸ್ಸೀಮರೆಂದರೆ ಸ್ವಲ್ಪ ದಿನಗಳ ಹಿಂದೆ ಸಲ್ಲೂ ತಂಗಿ 'ರಾ ಒನ್' ಚಿತ್ರ ವಿಫಲವಾದ ಬಗ್ಗೆ ಶಾರುಖ್ ಕಾಲೆಳೆದಿದ್ದರು. ಆಗ ಇದೇ ಅಮೀರ್ ಖಾನ್. "ಶಾರುಕ್ ರಾ ಒನ್ ಚಿತ್ರ ಸೋತರೂ, ಬಾಲಿವುಡ್ ಇತಿಹಾಸದಲ್ಲಿ ಅದು ವಿಭಿನ್ನ ಹಾಗೂ ಶ್ರೀಮಂತವಾಗಿ ಮೂಡಿಬಂದ ಚಿತ್ರ" ಎಂದು ಹೇಳುವ ಮೂಲಕ ಶಾರುಖ್ ಗೆ ಬೆಂಬಲ ನೀಡಿದ್ದರು. ಹೀಗಾಗಿ ಅಮೀರ್ ಮಹಾ ಬುದ್ಧಿವಂತ ಎನ್ನದೇ ವಿಧಿಯಿಲ್ಲ. (ಏಜೆನ್ಸೀಸ್)


Click it and Unblock the Notifications











