ಆರಾಧ್ಯಳಿಗಾಗಿ 'ಆಡಿ A8' ಬುಕ್ ಮಾಡಿದ ಅಭಿಷೇಕ್

ಮಗಳು ಆರಾಧ್ಯ ಮೇಲೆ ಅಪ್ಪ ಅಭಿಷೇಕ್ ಬಚ್ಚನ್ ಅವರಿಗೆ ಸಹಜವಾಗಿಯೇ ಪ್ರೀತಿ ಮತ್ತು ಕನಸುಗಳು ತುಂಬಿ ತುಳುಕುತ್ತಿವೆ. ಆಕೆಯ ಹೆಸರಿಡುವ ಸಮಾರಂಭಕ್ಕೆ (ನಾಮಕರಣ) ಅಭಿ ಹೇಗೆ ಸಿದ್ಧವಾಗುತ್ತಿದ್ದಾರೆ ಗೊತ್ತೇ? ಆಕೆ, ಐಷ್, ಅಭಿ ಮತ್ತು ಆರಾಧ್ಯಳ ತಾತ ಅಮಿತಾಬ್ ಅವರೆಲ್ಲರ ಪ್ರಾರಂಭಿಕ ಅಕ್ಷರ 'A' ಹಿಂದೆ ಬಿದ್ದಿದ್ದಾರೆ ಅಭಿ.

ಮಗಳ ನಾಮಕರಣ ಸಮಾರಂಭಕ್ಕೆ ಆಗಮಿಸುವಂತೆ 'A' ಅಕ್ಷರದಿಂದ ಪ್ರಾರಂಭವಾಗುವ 'ಆಡಿ A8' ಕಾರನ್ನು ಬುಕ್ ಮಾಡಿಸಿದ್ದಾರಂತೆ ಅಭಿಷೇಕ್. ತಮ್ಮ ಕುಟುಂಬದ ಕುಡಿಗೆ ಹೆಸರಿಡುವುದಕ್ಕೇ ಬರೋಬ್ಬರಿ ನಾಲ್ಕು ತಿಂಗಳು ತೆಗೆದುಕೊಂಡ ಅಮಿತಾಬ್ ಕುಟುಂಬ, ಆಕೆಗೆ ಆರಾಧ್ಯ ಎಂದು ಹೆಸರಿಟ್ಟು ಧನ್ಯತೆ ಅನುಭವಿಸಿದೆ.

ಇದೀಗ ಆಕೆಯ ಹೆಸರಿನ ಹೋಲಿಕೆ ಇರುವ ಆಡಿ ಕಾರ್ ಕೂಡ ಮನೆಗೆ ಬರಲಿದೆ. ಇನ್ನೂ ಏನೇನು 'A' ಯಿಂದ ಪ್ರಾರಂಭವಾಗುವ ವಸ್ತುಗಳನ್ನು ಮನೆತುಂಬಿಸಿಕೊಳ್ಳಲಿದ್ದಾರೋ ಏನೋ! ಒಟ್ಟಿನಲ್ಲಿ ಐಶ್-ಅಭಿ ಮಗಳು, ಅಮಿತಾಬ್ ಮೊಮ್ಮಗಳು ಆರಾಧ್ಯ ಅದೆಷ್ಟು ಪುಣ್ಯವಂತೆ ಎಂದು ಎಲ್ಲರೂ ಅನ್ನುತ್ತಿದ್ದಾರಂತೆ. (ಏಜೆನ್ಸೀಸ್)

More from Filmibeat

English summary
Abhishek Bachchan has reportedly booked an Audi A8 premium sedan to celebrate the naming of his daughter as Aradhya. Abhishek's daughter's name has been a much discussed topic and was called Beti B by the media. The Audi A8 is a premium saloon.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X