ನಟ ಅಭಿಷೇಕ್ ಬಚ್ಚನ್‌ಗೆ ಚಿತ್ರೀಕರಣದಲ್ಲಿ ಆಕ್ಸಿಡೆಂಟ್

By Rajendra

ಬಾಲಿವುಡ್ ತಾರೆ ಐಶ್ವರ್ಯ ರೈ ಗಂಡ ಹಾಗೂ ಅಮಿತಾಬ್ ಏಕೈಕ ಪುತ್ರ ನಟ ಅಭಿಷೇಕ್ ಬಚ್ಚನ್ ಚಿತ್ರೀಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೈಪುರದಲ್ಲಿ ನಡೆಯುತ್ತಿರುವ ಚಿತ್ರವೊಂದರ ಚಿತ್ರೀಕರಣದಲ್ಲಿ ಅಭಿಷೇಕ್ ಗಾಯಗೊಂಡಿದ್ದಾರೆ.

'ಬೋಲ್ ಬಚ್ಚನ್' ಚಿತ್ರೀಕರಣದ ಸಾಹಸ ಸನ್ನಿವೇಶವನ್ನು ಜೈಪುರದಲ್ಲಿ ಚಿತ್ರೀಕರಿಸಬೇಕಾದರೆ ಅಭಿ ತೀವ್ರವಾಗಿ ಗಾಯಗೊಂಡಿದ್ದು ಅವರ ಬಲಗಣ್ಣಿಗೆ ಸೀಳು ಗಾಯವಾಗಿದೆ. ಕೂಡಲೆ ಚಿತ್ರೀಕರಣವನ್ನು ನಿಲ್ಲಿಸಿ ಮುಂಬೈಗೆ ಅವರನ್ನು ರವಾನಿಸಲಾಯಿತು. ಅವರ ಕಣ್ಣಿಗೆ ಸರ್ಜರಿ ಮಾಡಬೇಕಾಗಿದೆ ಎನ್ನುತ್ತವೆ ಮೂಲಗಳು.

ಬಾಂದ್ರಾದಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ಅಭಿಗೆ ಚಿಕಿತ್ಸೆ ನೀಡಲಾಗಿದೆ. ಡ್ಯೂಪ್ ಇಲ್ಲದೆ ಅಭಿಷೇಕ್ ಅವರೇ ಈ ಸಾಹಸ ಸನ್ನಿವೇಶದಲ್ಲಿ ಅಭಿನಯಿಸಿದ ಕಾರಣ ಈ ಘಟನೆ ಸಂಭವಿಸಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್, ಅಸಿನ್, ಪ್ರಚಿ ದೇಸಾಯಿ ಮುಂತಾದವರು ಅಭಿನಯಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಚಿತ್ರ. (ಏಜೆನ್ಸೀಸ್)

More from Filmibeat

English summary
Actor Abhishek Bachchan, who is shooting for his upcoming film Bol Bachchan in Jaipur, has suffered minor injuries on his head and legs in an accident on the set of the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X