ಬೇಬಿಗೆ ಹೆಸರಿಡಲು ಜೋತಿಷ್ಯಕ್ಕೆ ಬಿಗ್ ಬಿ ಮೊರೆ
ಬಾಲಿವುಡ್ ಬಿಗ್ ಬಿ ತನ್ನ ಮುದ್ದಿನ ಮೊಮ್ಮಗು ಐಶೂ ಬೇಬಿಗೆ ಹೆಸರಿಡುವ ವಿಷಯದಲ್ಲಿ ಕೊನೆಗೂ ಸೋತು ಹೋಗಿದ್ದಾರೆ. ಪ್ರಪಂಚದಾದ್ಯಂತ ಈ ಮಗುವಿಗೆ ಹೆಸರಿಡುವ ಬಗ್ಗೆ ಜನ ತಲೆಕೆಡಿಸಿಕೊಂಡು ತಲೆಗೆ ಬಂದ ಹೆಸರನ್ನೆಲ್ಲಾ ಟ್ವೀಟ್ ಮಾಡಿದ್ದೂ ಆಗಿದ್ದೆ. ಶಾರ್ಟ್ ಲಿಸ್ಟ್ ಮಾಡಿದ ಬಚ್ಚನ್ ಪರಿವಾರಕ್ಕೆ ಒಂದು ಹೆಸರನ್ನು ಫೈನಲ್ ಮಾಡಲು ಸಖತ್ ಕಷ್ಟವಾಗಿದೆ.
ಇದೀಗ ಯಾವ ತಾಪತ್ರಯ ಬೇಡ ಎಂದು ನಿರ್ಧರಿಸಿರುವ ಅಮಿತಾಬ್ ಜೋತಿಷ್ಯದ ಮೊರೆಹೋಗಲು ನಿರ್ಧರಿಸಿದ್ದಾರೆ. ಈ ವಿಷಯ ಜಗತ್ತಿಗೆ ತಮಾಷೆಯಾಗಿ ಕಂಡರೂ ಗೌರವಾನ್ವಿತ ಕುಟುಂಬ ಬಚ್ಚನ್ ಪರಿವಾರಕ್ಕೆ ಅನಿವಾರ್ಯವಾಗಿದೆ. ಕಾರಣ, ಜೋತಿಷಿ ಹೇಳಿದ ಹೆಸರಿಟ್ಟರೆ ಯಾರಿಗೂ ಬೇಸರವಿಲ್ಲ. ಇಲ್ಲದಿದ್ದರೆ ಮಗು ಬೆಳೆದಂತೆ ಹೆಸರಿನ ವಿವಾದವೂ ಬೆಳೆದೀತು.
ಈ ವಿಷಯ ಅರಿತೇ ಜಾಣ ಬಿಗ್ ಬಿ ಈ ನಿರ್ಧಾರ ಕೈಗೊಂಡಿದ್ದಾರೆ. ದೊಡ್ಡ ಮನುಷ್ಯರು ಕೆಲವು ವಿಷಯಗಳಲ್ಲಿ ಹೇಗೆ ಅಸಹಾಯಕರಾಗುತ್ತಾರೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಒಟ್ಟಿನಲ್ಲಿ ಬಚ್ಚನ್ ಪರಿವಾರದ ಐಶೂ ಬೇಬಿಗೆ ಹೆಸರಿಡುವ ಭಾಗ್ಯ ಜ್ಯೋತಿಷಿ ಪಾಲಿಗೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











