ಒಬ್ಬ ಹುಡುಗಿಗಾಗಿ ಇಬ್ಬರು ಮುದುಕರ ಜಟಾಪಟಿ
ಹುಡುಗಿಯೊಬ್ಬಳಿಗಾಗಿ ಹುಡುಗರಿಬ್ಬರು ಹೊಡೆದಾಡುವುದು ಹೊಸದೆಂದು ಹೇಳೋದು ಹ್ಯಾಗೆ? ಆದರೆ ಮುದುಕರಿಬ್ಬರು ಹೊಡೆದಾಡುತ್ತಿದ್ದಾರೆ. ಅದೂ ಅಂತಿಂಥವರಲ್ಲ. ಪ್ರಪಂಚಕ್ಕೇ ಗೊತ್ತಿರುವ ಮಹಾನ್ ಮುದುಕರು. ಒಬ್ಬ ಬಿಗ್ ಬಿ ಅಮಿತಾಬ್ ಬಚ್ಚನ್, ಇನ್ನೊಬ್ಬರು ಸಮಕಾಲೀನ ಅನ್ನಬಹುದಾದ ರಿಷಿಕಪೂರ್. ಹೊಡೆದಾಟ ಮಾಡಿಸಿದ ಹುಡುಗಿ ಚಿತ್ರಾಂಗದ ಸಿಂಗ್.
ಛೇ, ಈ ವಯಸ್ಸಿನಲ್ಲಿ ಅವರಿಗೆ ಇದೆಲ್ಲಾ ಬೇಕಿತ್ತಾ ಎಂದು ಕೇಳದೆ ಇರ್ತೀರಾ ನೀವು? ಆದರೆ ಅವರಾದ್ರೂ ಏನು ಮಾಡಿಯಾರು? ಎದುರಿಗೆ ಚಿತ್ರಾಂಗದ ಇದ್ದರೆ ಅವರೇನು ಮಾಡೋದಕ್ಕಾಗುತ್ತೆ! ನೀವೂ ಅರ್ಥ ಮಾಡ್ಕೋಬೇಕಲ್ವಾ. ಆದ್ರೆ ಅವರು ಕಂಟ್ರೋಲ್ ಮಾಡ್ಕೋತಿದ್ರು. ಅದಕ್ಕೆ ನಿರ್ದೇಶಕ ಸುಧೀರ್ ಮಿಶ್ರಾ ಬಿಡಬೇಕಲ್ಲ!
ಈಗ ನಿಮಗೆ ಅರ್ಥವಾಗಿರಬೇಕು. ಇದು ಸುಧೀರ್ ಮಿಶ್ರಾ ಕನಸಿನ 'ಮೆಹ್ರುನಿಸ್ಸಾ' ಸಿನಿಮಾದ ಕಥೆಗಾಗಿ ಅಮಿತಾಬ್ ಮತ್ತು ರಿಷಿಕಪೂರ್ ಮಧ್ಯೆ ನಡೆಯುವ ಜಟಾಪಟಿ. ಹುಡುಗಿಯ ಪಾತ್ರದಲ್ಲಿದ್ದಾರೆ ಚಿತ್ರಾಂಗದಾ ಸಿಂಗ್. ಹಿಂದು ವ್ಯಕ್ತಿಯಾಗಿ ಅಮಿತಾಬ್ ಮತ್ತು ಮುಸ್ಲಿಮ್ ಆಗಿ ರಿಷಿಕಪೂರ್ ಅಭಿನಯಿಸುತ್ತಿದ್ದಾರೆ. ಅತಿರಥ ಮಹಾರಥರ ಈ ಕಾಳಗ ನೋಡಲು ನಾಲ್ಕು ಕಣ್ಣು ಬೇಕೇ ಬೇಕು. (ಏಜೆನ್ಸೀಸ್)


Click it and Unblock the Notifications











