ಮೈತುಂಬಾ ಸೀರೆಯುಟ್ಟು ಶಾಕ್ ಕೊಟ್ಟ 'ಡರ್ಟಿ' ವಿದ್ಯಾ

ತನ್ನ 'ದಿ ಡರ್ಟಿ ಪಿಕ್ಚರ್' ಪ್ರಮೋಷನ್ ಗಾಗಿ ಈಗ ರೌಂಡ್ ಹೊಡೆಯುತ್ತಿರುವ ವಿದ್ಯಾ, ಬಿಗ್ ಬಾಸ್ ಗೆ ಕೆಂಪು ಬಣ್ಣದ ಝರಿಯಿಂದ ಅಲಂಕರಿಸಿದ ಸೀರೆಯುಟ್ಟು ಬಂದಿದ್ದರು. ಜತೆಗೆ ಸಹ ಕಲಾವಿದರಾದ ಇಮ್ರಾನ್ ಹಶ್ಮಿ, ತುಷಾರ್ ಕಪೂರ್ ಹಾಗೂ ಸಹ ಬಂದಿದ್ದರು. ಆದರೆ ಎಲ್ಲರ ಕಣ್ಣುಗಳ ಕೇಂದ್ರಬಿಂದು ವಿದ್ಯಾ ಹಾಗೂ ಆಕೆಯುಟ್ಟ ಕೆಂಪುಸೀರೆ.
ವಿದ್ಯಾ ಉಟ್ಟಿರುವ ಸೀರೆಗೆ ಆಗಲೇ ಗಿರಾಕಿಯೊಬ್ಬ ರೆಡಿಯಾಗಿದ್ದಾನೆ. ರು. 90,000 ಕ್ಕೆ ಆತ ಆ ಸೀರೆಯನ್ನು ಕೊಳ್ಳುವುದಾಗಿ ಹೇಳಿದ್ದಲ್ಲದೇ, ರು. 40,000 ವನ್ನು ಅಲ್ಲೇ ಕೊಟ್ಟಿದ್ದಾನೆ ಕೂಡ. ಬಹಳಷ್ಟು ಬಾಲಿವುಡ್ ಹೀರೋಗಳ ಚಿತ್ರಕ್ಕೆ ಸಿಗದಿದ್ದ ಓಪನಿಂಗ್ ಈಕೆಗೆ ದಕ್ಕಿದೆ. ವಿದ್ಯಾ ಈಗ ಬಾಲಿವುಡ್ ನ ಹಾಟ್ ಕೇಕ್. ಗೌರಮ್ಮನಂತೆ ಬಂದರೆ ಗುರುತು ಹಿಡಿಯುವವರಿಲ್ಲ. (ಒನ್ ಇಂಡಿಯಾ ಕನ್ನಡ)
More from Filmibeat
English summary
Vidya Balan, who had been promoting her movie, The Dirty Picture, until recently, also made an appearance on reality show Bigg Boss last month. Wearing a red sari, the actor had showed up along with her co-stars, Emraan Hashmi and Tusshar Kapoor. Somebody not recognised her.


Click it and Unblock the Notifications











