ಜಾನ್ ಅಬ್ರಹಾಂಗೆ ಜೈಲು, ಬಳಿಕ ಜಾಮೀನು
2006ರಲ್ಲಿ ನಡೆದ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಲಯ ಬಾಲಿವುಡ್ ನಟ ಜಾನ್ ಅಬ್ರಹಾಂಗೆ 15 ದಿನಗಳ ಲಘು ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಿದೆ. ಬಳಿಕ ರು.1,500 ಮುಚ್ಚಳಿಕೆ ಪತ್ರ ಬರೆಸಿಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಮುಂಬೈನ ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಜಾನ್ ಅಬ್ರಹಾಂ ಬೇಕಾಬಿಟ್ಟಿ ಮತ್ತು ಅಜಾಗರೂಕ ಚಾಲನೆ ಮಾಡಿದ್ದರ ಪರಿಣಾಮ ಬೈಸಿಕಲ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆಯಲ್ಲಿ ಜಾನ್ ಸಹ ಗಾಯಗೊಂಡಿದ್ದ.
ಜಾನ್ ಅಬ್ರಹಾಂ ಬಳಸಿದ ಹಯಬುಸಾ ಬೈಕ್ ಸಹ ಚಿಂದಿಯಾಗಿತ್ತು. ಗಾಯಗೊಂಡವರನ್ನು ಸ್ವತಃ ಜಾನ್ ಅಬ್ರಹಾಂ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದ. "ಮಾನವೀಯತೆ ಮತ್ತು ಸೌಮ್ಯ ಸ್ವಭಾವವನ್ನು" ಪರಿಗಣಿಸಿದ ನ್ಯಾಯಲಯ ಜಾನ್‌ಗೆ ಕೂಡಲೆ ಜಾಮೀನು ನೀಡಿದೆ.


Click it and Unblock the Notifications











