ಬಾಲಿವುಡ್ ತಾರೆ ಜೂಹಿ ಚಾವ್ಲಾ ಮನೆಯಲ್ಲಿ ಸಿಕ್ಕಿಬಿದ್ದ ಕಳ್ಳ

By Rajendra

ಬಾಲಿವುಡ್ ತಾರೆ ಜೂಹಿ ಚಾವ್ಲಾ ಅವರ ಮನೆಯಲ್ಲಿಕಳ್ಳತನ ಮಾಡಿದ್ದ ಕಳ್ಳ ಕಡೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಜನವರಿ 15ರಂದು ಜೂಹಿ ಚಾವ್ಲಾ ಅವರ ಮುಂಬೈ ವೀರ್ ಭವನ್ ಮನೆಯಲ್ಲಿ ಒಂದು ಲ್ಯಾಪ್ ಟಾಪ್, ಮೊಬೈಲ್ ಫೋನ್ ಮತ್ತು ಐಪಾಡ್ ಕಳುವಾಗಿತ್ತು. ಈ ಸಂಬಂಧ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜ.15ರಂದು ಜೂಹಿ ಮತ್ತು ಅವರ ಪತಿ ಜೈ ಮೆಹ್ತಾ ಸಮಾರಂಭವೊಂದನ್ನು ಆಯೋಜಿಸಿದ್ದರು. ಆಗ ಇವರ ಮನೆಗೆ ಸರಿಸುಮಾರು 40 ಮಂದಿ ಅಡುಗೆ ಭಟ್ಟರು ಬಂದಿದ್ದರು. ಅಮೆರಿಕಾದ ಅತಿಥಿಯೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರಿಗೂ ಒಂದು ಕೊಠಡಿ ನೀಡಲಾಗಿತ್ತು.

ಆ ಕೊಠಡಿಯ ಒಂದು ಕೀಲಿ ಕೈ ಅಮೆರಿಕಾದ ಅತಿಥಿಗೆ ಹಾಗೂ ಮತ್ತೊಂದು ಕೀಲಿ ಕೈಯನ್ನು ಅವರ ಇಬ್ಬರು ಸೇವಕರಿಗೆ ನೀಡಲಾಗಿತ್ತು. ಸಮಾರಂಭದಲ್ಲಿ ಗಡಿಬಿಡಿಯಲ್ಲಿ ಅಮೆರಿಕಾ ಅತಿಥಿಯ ಲ್ಯಾಪ್ ಟಾಪ್, ಮೊಬೈಲ್ ಫೋನ್ ಹಾಗೂ ಐಪಾಡ್ ಕಳುವಾಗಿತ್ತು. ಈ ಸಂಬಂಧ ತನಿಖೆ ನಡೆಸಿದಪೊಲೀಸರು ಕಡೆಗೂ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

"ನಲವತ್ತು ಮಂದಿ ಅಡುಗೆ ಭಟ್ಟರನ್ನು ಕರೆಸಿ ಅವರನ್ನು ವಿಚಾರಣೆ ಮಾಡಲಾಗಿ ಅವರಲ್ಲೇ ಒಬ್ಬ ಸಂದೀಪ್ ಬಲೆರಾವ್ (28) ಎಂಬುವವನು ಸಿಕ್ಕಿಬಿದ್ದಿದ್ದಾನೆ. ಅಮೆರಿಕಾ ಅತಿಥಿಗೆ ಸೇರಿದ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸ್ ಇನ್ಸ್‌ಪೆಕ್ಟರ್ ವಿನಯ್ ಬಗಡೆ ವಿವರ ನೀಡಿದ್ದಾರೆ. ಫೆ.17ರವರೆಗೆ ಬಲೆರಾವ್‌ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

More from Filmibeat

English summary
The Mumbai police have arrested the person who stole electronic gadgets from the house of actress Juhi Chawla. A complaint was lodged after a laptop, a mobile phone and an iPod was lost. The theft was reported to the police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X