ಹೀರೋಯಿನ್ ಕರೀನಾಗೆ ಸಾವಿರ ಮಂದಿ ಮುತ್ತಿಗೆ
ಮಧುರ್ ಭಂಡಾರ್ಕರ್ ಬಹು ನಿರೀಕ್ಷೆಯ ಚಿತ್ರ 'ಹೀರೋಯಿನ್' ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದೆ. ಐಶ್ವರ್ಯ ರೈ ಗರ್ಭಿಣಿಯಾಗಿದ್ದರಿಂದ ಆ ಜಾಗಕ್ಕೆ ಬಂದ ಕರೀನಾ ಈಗ ಹೀರೋಯಿನ್ ನಾಯಕಿ. ಬಾಲಿವುಡ್ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಈ ಚಿತ್ರದ ಮೂಲಕ ಕರೀನಾ ಹೊರಹೊಮ್ಮಿದ್ದಾರೆ.
ಹೀರೋಯಿನ್ ಶೂಟಿಂಗ್ ಸ್ಥಳದಲ್ಲಿ ಆಕಸ್ಮಿಕ ಘಟನೆಯೊಂದು ನಡೆದಿದೆ. ಸುಮಾರು ಸಾವಿರದಷ್ಟು ಜನ ಕರೀನಾರನ್ನು ನೋಡಲು ಶೂಟಿಂಗ್ ಸ್ಪಾಟ್ ನಲ್ಲಿ ಜಮಾಯಿಸಿದ್ದಾರೆ. ಗುಂಪು, ಕರೀನಾ ಹತ್ತಿರ ಹೋಗಿ ಅವರನ್ನು ಮುತ್ತಿಕೊಂಡಿದೆ. ಇದ್ದಕಿದ್ದಂತೆ ನಡೆದ ಈ ಬೆಳವಣಿಗೆಯಿಂದ ಚಿತ್ರೀಕರಣ ತಂಡ ಗಲಿಬಿಲಿಗೊಂಡರೂ ತಕ್ಷಣ ಪರಿಸ್ಥಿತಿಯನ್ನು ನಿಭಾಯಿಸಿ ಕರೀನಾರನ್ನು ರಕ್ಷಿಸುವಲ್ಲಿ ಸಫಲವಾಗಿದೆ.
ಒಟ್ಟಿನಲ್ಲಿ ಹೀರೋಯಿನ್ ನೋಡಲು ಜನ ಮುಗಿಬೀಳುವ ಸ್ಪಷ್ಟ ಸೂಚನೆ ಸಿಕ್ಕಿದೆ. ಮಧು ಭಂಡಾರ್ಕರ್ ಗೆ ಸಖತ್ ಖುಷಿಯೂ ಆಗಿದೆ. ಕರೀನಾಗೆ ಒಮ್ಮೆ ಗಾಬರಿಯಾದರೂ ನಂತರ ಜನರ ನಿರೀಕ್ಷೆ ಹಾಗೂ ಕ್ರೇಜ್ ನೋಡಿ ಮನಸ್ಸು ತುಂಬಿ ಬಂದಿದೆ. ಈಗ ಬಾಲಿವುಡ್ ನಲ್ಲಿ 'ಹೀರೋಯಿನ್' ಮಂತ್ರ ಮನೆಮಾತಾಗಿದೆ. ಈ ಚಿತ್ರದ ನಂತರ ಕರೀನಾ ನೆಲದ ಮೇಲೆ ನಡೆದಾಡುವುದು ಕಷ್ಟವಾಗಬಹುದು. (ಏಜೆನ್ಸೀಸ್)


Click it and Unblock the Notifications











