ಬಾಬಾ ರಾಮ್‌ದೇವ್‌ಗೆ ರಾಖಿ ಸಾವಂತ್ ಚಾಲೆಂಜ್
ಯೋಗ ಗುರು ಬಾಬಾ ರಾಮ್‌ದೇವ್ ಅವರಿಗೆ ಐಟಂ ಬೆಡಗಿ ರಾಖಿ ಸಾವಂತ್ ಸಖತ್ ಚಾಲೆಂಜ್ ಹಾಕಿದ್ದಾರೆ. ತಾಕತ್ ಇದ್ದರೆ ತಮ್ಮ ಜೊತೆ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಬನ್ನಿ ಎಂದಿದ್ದಾರೆ. ಈ ಹಿಂದೊಮ್ಮೆ ರಾಖಿ ಸಾವಂತ್‌ಗೆ ಬಾಬಾ ತೀವ್ರ ಮುಖಭಂಗ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಖಿ ತಿರುಗೇಟು ನೀಡಿದ್ದಾರೆ.
'ಬಿಗ್ ಬಾಸ್' ಅಡ್ಡಾಗೆ ಬನ್ನಿ ಮುಖಾ ಮುಖಿ ಭೇಟಿಯಾಗೋಣ. ಅಲ್ಲಿ ನೀನಾ ನಾನಾ ನೋಡೇ ಬಿಡೋಣ ಎಂದಿದ್ದಾರೆ. ಈ ಹಿಂದೆ ಬಾಬಾ ರಾಮ್‌ದೇವ್ ಮೇಲೆ ರಾಖಿಗೆ ಮನಸಾಗಿ ಮದುವೆಯಾಗುವುದಾದರೆ ಅವರನ್ನೇ ಆಗುತ್ತೇನೆ. ಇಲ್ಲದಿದ್ದರೆ 'ಕನ್ಯೆ'ಯಾಗಿಯೇ ಉಳಿದುಬಿಡುತ್ತೇನೆ ಎಂದಿದ್ದರು.
ಇದಕ್ಕೆ ತಡವಾಗಿ ಪ್ರತಿಕ್ರಿಯಿಸಿದ ಬಾಬಾ, ಇದೊಂದು ನಡತೆಗೆಟ್ಟ ಮಾತು ಎಂದಿದ್ದರು. ಬಾಬಾ ಮಾತಿಗೆ ಕೆರಳಿದ ಸರ್ಪದಂತಾಗಿರುವ ರಾಖಿ, "ಬಾಬಾಗೆ ನಾನು ಚಾಲೆಂಜ್ ಮಾಡುತ್ತಿದ್ದೇನೆ, ನನ್ನೊಂಗಿಗೆ ಅವರು ಬಿಗ್‌ಬಾಸ್ ಮನೆಗೆ ಬರಲಿ. ವಿಶ್ವಾಮಿತ್ರನಿಗೆ ಮೇನಕೆ ತಪಸ್ಸು ಭಂಗ ಮಾಡಿದಂತೆ ಮಾಡುತ್ತೇನೆ. ನಾನು ಚಾಲೆಂಜ್ ಮಾಡುತ್ತಿದ್ದೇನೆ ಅವರ ಶೀಲ ಹರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ.
ಕಲರ್ಸ್ ವಾಹಿನಿಯ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮಕ್ಕೆ ವೆಲ್ಡ್ ಎಂಟ್ರಿ ಮೂಲಕ ಬಾಬಾ ರಾಮ್ ದೇವ್ ಹಾಗೂ ರಾಖಿ ಸಾವಂತ್ ಪ್ರವೇಶಿಸುವ ಸಾಧ್ಯತೆಗಳೂ ಇಲ್ಲದಿಲ್ಲ! ಆದರೆ ಬಾಬಾ ರಾಮ್ ದೇವ್ ಗಡ್ಡ ಯಾಕೋ ಇಷ್ಟವಾಗಲಿಲ್ಲ. ಅವರು ಕ್ಲೀನ್ ಆಗಿ ಶೇವ್ ಮಾಡಿಕೊಂಡು ಬಂದರೆ ಒಳಿತು ಎಂದಿದ್ದಾರೆ ಬಿಂಕದ ರಾಣಿ ರಾಖಿ. (ಏಜೆನ್ಸೀಸ್)


Click it and Unblock the Notifications