ಹಿಂದಿ ಬಿಸಿನೆಸ್ ಮ್ಯಾನ್ ಗೆ ಅಭಿಷೇಕ್ : RGV

ಹಿಂದಿಯಲ್ಲಿ ಅಭಿಷೇಕ್ ಬಚ್ಚನ್ ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ನಾನು ಚಿತ್ರ ನಿರ್ಮಿಸುತ್ತಿದ್ದೇನೆ ಎಂದು ರಾಮು ಟ್ವೀಟ್ ಮಾಡಿದ್ದಾರೆ.
ಆದರೆ, ಈ ಮುಂಚೆ ಸುದ್ದಿ ಹಬ್ಬಿದಂತೆ ತೆಲುಗಿನ ಪ್ರಿನ್ಸ್ ಮಹೇಶ್ ಬಾಬು ಹಿಂದಿಯಲ್ಲಿ ನಟಿಸುತ್ತಿಲ್ಲ. ಜೊತೆಗೆ ಹಿಂದಿ ಆವೃತ್ತಿಯನ್ನು ರಾಮು ನಿರ್ದೇಶಿಸುತ್ತಾರೋ ಇಲ್ಲವೋ ಇನ್ನೂ ಸ್ಪಷ್ಟವಾಗಿಲ್ಲ.
ಚಿತ್ರ ನಿರ್ಮಾಣದ ಬಗ್ಗೆ ಕೂಡಾ ಕ್ಲಿಯರ್ ಆಗಿ ಹೇಳಿಲ್ಲ. ಒಟ್ಟಿನಲ್ಲಿ ಆರ್ ಜಿವಿ ಬ್ಯಾನರ್ ನಲ್ಲಿ ಚಿತ್ರ ಹೊರಬರುವುದು ಮಾತ್ರ ಖಾತ್ರಿಯಾಗಿದೆ. ಆರ್ ಜಿವಿ ನಿರ್ದೇಶನಕ್ಕೆ ಇಳಿದರೆ ಪುರಿ ಜಗನ್ನಾಥ್ ನಿರ್ಮಾಪಕನ ರೋಲ್ ಮಾಡುವ ಸಾಧ್ಯತೆಯಿದೆ.
ಸದ್ಯಕ್ಕಂತೂ ಆರ್ ಜಿವಿ 'Attacks of 26/11' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಪುರಿ ಕೂಡಾ 'ದೇವರು ಚೇಸಿನ ಮನುಷ್ಯುಲು' ಹಾಗೂ 'ಕ್ಯಾಮ್ರಾಮಾನ್ ಗಂಗಥೊ ರಾಮ್ ಬಾಬು' ಚಿತ್ರ ಕೈಲಿಟ್ಟುಕೊಂಡಿದ್ದಾರೆ. ಅಭಿಷೇಕ್ ಮಾತ್ರ ಬಿಸಿನೆಸ್ ಮ್ಯಾನ್ ಚಿತ್ರವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ.
More from Filmibeat
English summary
Ram Gopal Verma has tweeted and confirmed the Hindi version of 'Businessman' will go on role with Puri Jaganath and Abhishek bachchan. Businessman is the remake of telugu blockbaster movie.
ಮಹೇಶ್ ಬಾಬು ಬಾಲಿವುಡ್ ರಾಮ್ ಗೋಪಾಲ್ ವರ್ಮಾ ಅಭಿಷೇಕ್ ಬಚ್ಚನ್ bollywood ram gopal verma abhishek bachchan mahesh babu


Click it and Unblock the Notifications











