ನಟ ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಚತುರ್ಥಿ!
ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಖ್ಯಾತನಾದ ಸಲ್ಮಾನ್ ಖಾನ್ ಈ ಬಾರಿ ತಮ್ಮ ಮನೆಯಲ್ಲಿ ರಂಜಾನ್ ಜೊತೆಗೆ ಗಣೇಶ ಚತುರ್ಥಿಯನ್ನು ಆಚರಿಸಿ ಪಾವನರಾಗಿದ್ದಾರೆ. ಗಣೇಶನ ಮೂರ್ತಿಯನ್ನು ಮನೆಗೆ ತರಿಸಿ ಪೂಜೆ ಮಾಡಿ ವಿಘ್ನೇಶ್ವರನಲ್ಲಿ ಪ್ರಾರ್ಥಿಸಿದ್ದಾಗಿ ಬಾಲಿವುಡ್ ಮೂಲಗಳು ವರದಿ ಮಾಡಿವೆ.
ಗಣೇಶನ ಮಹಿಯೋ ಏನೋ ಸಲ್ಲು ಅಭಿನಯಿಸಿದ್ದ 'ದಬಾಂಗ್' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಒಂದು ಅಂದಾಜಿನ ಪ್ರಕಾರ 'ದಬಾಂಗ್' ಚಿತ್ರ ಒಂದೇ ವಾರದಲ್ಲಿ ರು.50 ಕೋಟಿ ಗಳಿಸಿದೆ. ಗಣೇಶನ ಪೂಜೆಯಲ್ಲಿ ಸಲ್ಲು ಜೊತೆಗೆ ಅವರ ಮನೆಯವರೂ ಪಾಲ್ಗೊಂಡಿದ್ದದ್ದು ವಿಶೇಷ.
ಸಲ್ಮಾನ್ ಖಾನ್ ಗಣೇಶನ ಪರಮ ಭಕ್ತನಂತೆ. ಹಾಗಾಗಿ ಆತ ಈ ಬಾರಿ ಗಣೇಶನ ಮೂರ್ತಿಯನ್ನು ಮನೆಗೆ ತಂದು ಪೂಜೆಸಿದ್ದಾರೆ. ಗಣೇಶ ನಿನ್ನ ಮಹಿಮೆ ಅಪಾರ ಎಂಬ ಮಾತು ಸಲ್ಲು ಪಾಲಿಗೆ ನಿಜವಾಗಿದೆ. 'ದಬಾಂಗ್' ಯಶಸ್ಸಿ ನಿಂದ ಖುಷಿಯಾಗಿರುವ ಅರ್ಬಾಜ್ ಖಾನ್ ಭಾಗ 2ರನ್ನು ತೆಗೆಯುವ ಸಿದ್ಧತೆ ನಡೆಸಿದ್ದಾರೆ.


Click it and Unblock the Notifications











