ಶಾಹಿದ್ ಕಪೂರ್, ನರ್ಗಿಸ್ ಫಕ್ರಿ ಈಗ 'ಜೋಡಿ'ಹಕ್ಕಿಗಳು
ಬಾಲಿವುಡ್ ನಟರು ಲವ್, ಡೇಟಿಂಗ್ ಎನ್ನುತ್ತಾ ನಟಿಯರು ಹಾಗೂ ರೂಪದರ್ಶಿಗಳ ಹಿಂದೆ ಸುತ್ತುವುದು ಹೊಸದೇನೂ ಅಲ್ಲ. ಆದರೆ ಯಾರು ಯಾರ ಜೊತೆ ಯಾವಾಗ ಎಲ್ಲಿ ಮಾಧ್ಯಮದ ಕ್ಯಾಮರಾ ಕಣ್ಣಿಗೆ ಸಿಕ್ಕಿಕೊಳ್ಳುತ್ತಾರೆ ಎಂಬುದು ಕತೂಹಲದ ಸಂಗತಿ ಅಷ್ಟೇ. ಪ್ರಿಯಾಂಕಾ ಚೋಪ್ರಾ ಜೊತೆ ಲವ್ ಮುರಿದುಬಿದ್ದ ಮೇಲೆ ಶಾಹಿದ್ ಕಪೂರ್ ಹೆಸರು ಸಾಕಷ್ಟು ನಟಿಯರೊಂದಿಗೆ ಕೇಳಿಬಂದಿತ್ತು.
ಆ ಪಟ್ಟಿಯಲ್ಲಿ ಇದ್ದ ಹೆಸರುಗಳು, ಬಿಪಾಶಾ ಬಸು, ಅನುಷ್ಕಾ ಶರ್ಮ ಮತ್ತು ಶ್ರದ್ಧಾ ಕಪೂರ್. ಇದೀಗ ಶಾಹಿದ್ ಕಪೂರ್ ಲವ್ ಮಾಡುತ್ತಿರುವ ಹುಡುಗಿ ನರ್ಗಿಸ್ ಫಕ್ರಿ ಎಂಬುದು ಅಧಿಕೃತವಾಗಿ ಪಕ್ಕಾ ಆಗಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ. ಆದರೆ ಅವರೊಬ್ಬರೇನಾ ಅಥವಾ ಇನ್ನೆಷ್ಟು ಜನರಿದ್ದಾರೆ ಎಂಬುದಕ್ಕೆ ವರದಿಯಲ್ಲಿ ಉತ್ತರವಿಲ್ಲ.
ಅಂದಹಾಗೆ, ಈ ನರ್ಗಿಸ್ ಫಕ್ರಿ ಇತ್ತೀಚಿಗೆ ಬಿಡುಗಡೆಯಾಗಿದ್ದ 'ರಾಕ್ ಸ್ಟಾರ್' ಚಿತ್ರದಲ್ಲಿ ನಟಿಸಿದ್ದ ನಟಿ. ಈ ನರ್ಗಿಸ್, ಶಾಹಿದ್ ಬಲೆಗೆ ಬೀಳುವ ಮೊದಲು ಅದೇ ಚಿತ್ರದಲ್ಲಿ ನಟಿಸಿದ್ದ ಇನ್ನೊಬ್ಬ ನಟ ರಣಬೀರ್ ಕಪೂರ್ ಜೊತೆ ಸ್ನೇಹ, ಡೇಟಿಂಗ್ ಹೊಂದಿದ್ದರು. ಇದೀಗ ಬಾಯ್ ಫ್ರಂಡ್ ಬದಲಾಯಿಸಿದ್ದಾಳೆ. ಶಾಹಿದ್ ಜೊತೆ ಮೊದಲು ಇದ್ದ ಸ್ನೇಹ ಇದೀಗ ಪ್ರೇಮವಾಗಿ ಮಾರ್ಪಟ್ಟಿದೆಯಂತೆ. (ಏಜೆನ್ಸೀಸ್)


Click it and Unblock the Notifications











