twitter
    For Quick Alerts
    ALLOW NOTIFICATIONS  
    For Daily Alerts

    ಸಾಲು ಸಾಲು ದುರ್ಘಟನೆಗಳು: ಸುಶಾಂತ್ ಸಾವಿನಿಂದ ಮನನೊಂದು ಜೀವ ತೆಗೆದುಕೊಂಡ ಬಾಲಕಿ

    By Avani Malnad
    |

    ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಸಂಗತಿ ತಿಳಿದು ಉತ್ತರ ಪ್ರದೇಶದ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡ ಪ್ರಕರಣದ ಬೆನ್ನಲ್ಲೇ, ಮತ್ತೊಂದು ಘಟನೆ ನಡೆದಿದೆ. 15 ವರ್ಷದ ಬಾಲಕಿಯೊಬ್ಬಳು ಸುಶಾಂತ್ ಸಾವಿನಿಂದ ಮನನೊಂದು ಜೀವ ತೆಗೆದುಕೊಂಡಿದ್ದಾಳೆ.

    Recommended Video

    ಸುಶಾಂತ್ ಸಾವು ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದ ಕಂಗನ | Kangana Ranaut | Oneindia Kannada

    ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್‌ನಲ್ಲಿ ಈ ದುರ್ಘಟನೆ ನಡೆದಿದೆ. ಸುಶಾಂತ್ ಸಾವಿನಿಂದ ತೀವ್ರ ಬೇಸರಗೊಂಡಿದ್ದ ಬಾಲಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಸುಶಾಂತ್ ಆತ್ಮಹತ್ಯೆಯ ಬಳಿಕ ಇಂತಹ ಅನೇಕ ಘಟನೆಗಳು ನಡೆದಿದ್ದು, ಹರೆಯದ ಮಕ್ಕಳು ಜೀವ ತೆಗೆದುಕೊಳ್ಳುವ ಆತುರಕ್ಕೆ ಮುಂದಾಗುತ್ತಿದ್ದಾರೆ.

    'ಸುಶಾಂತ್ ಆತ್ಮಹತ್ಯೆಯ ಸುದ್ದಿಯಿಂದ ಖಿನ್ನತೆಗೆ ಒಳಗಾಗಿದ್ದ 15 ವರ್ಷದ ಬಾಲಕಿ ನೇಣು ಹಾಕಿಕೊಂಡು ಮೃತಪಟ್ಟಿರುವುದು ನಿಜ. ಇಂತಹ ಆತುರದ ಮತ್ತು ಕೆಟ್ಟ ತೀರ್ಮಾನ ತೆಗೆದುಕೊಳ್ಳುವ ಬದಲು ದೇಶ ನಿರ್ಮಾಣದಲ್ಲಿ ತಮ್ಮ ಗುರಿಗಳನ್ನು ತಲುಪಲು ಬದುಕಿನತ್ತ ನೋಡಿಕೊಳ್ಳುವಂತೆ ಎಲ್ಲ ಯುವಜನರಿಗೆ ಮನವಿ ಮಾಡುತ್ತೇನೆ' ಎಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೊಲೀಸ್ ಮಹಾ ನಿರ್ದೇಶಕ ದೇಪೇಂದ್ರ ಪಾಠಕ್ ಹೇಳಿದ್ದಾರೆ. ಮುಂದೆ ಓದಿ...

    ಪೋಷಕರಿಗೆ ಒಂದು ಮನವಿ

    ಪೋಷಕರಿಗೆ ಒಂದು ಮನವಿ

    'ನಿಮ್ಮ ಮಕ್ಕಳೊಂದಿಗೆ ಯಾವಾಗಲೂ ಮಾತನಾಡುತ್ತಾ ಇರಿ. ಅವರಲ್ಲಿ ಯಾವುದೇ ಮಾನಸಿಕ ಖಿನ್ನತೆಯ ಲಕ್ಷಣಗಳು ಕಂಡುಬಂದರೆ ಅದನ್ನು ಸರಿಪಡಿಸುವತ್ತ ಗಮನ ಕೊಡಿ. ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಎಲ್ಲ ಪೋಷಕರಿಗೂ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

    ಸುಶಾಂತ್ ಸಿಂಗ್ ಆತ್ಮಹತ್ಯೆ ಪೂರ್ವನಿರ್ಧಾರಿತವೇ? ಅನುಮಾನಕ್ಕೆ ಕಾರಣವಾದ ಸಿಬ್ಬಂದಿ ಹೇಳಿಕೆಸುಶಾಂತ್ ಸಿಂಗ್ ಆತ್ಮಹತ್ಯೆ ಪೂರ್ವನಿರ್ಧಾರಿತವೇ? ಅನುಮಾನಕ್ಕೆ ಕಾರಣವಾದ ಸಿಬ್ಬಂದಿ ಹೇಳಿಕೆ

    ಅಜ್ಜ ಬೈದಿದ್ದರು

    ಅಜ್ಜ ಬೈದಿದ್ದರು

    ಸುಶಾಂತ್ ಸಾವಿನ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಿದ್ದ ಬಾಲಕಿ, ಅದರ ಬಗ್ಗೆ ತನ್ನ ನೋಟ್ ಬುಕ್‌ನಲ್ಲಿಯೂ ಬರೆದುಕೊಂಡಿದ್ದಳು. ಇದರಿಂದ ಕೋಪಗೊಂಡಿದ್ದ ಅಜ್ಜ ಆಕೆಯನ್ನು ಬೈದಿದ್ದರು. ಸ್ವಲ್ಪ ಸಮಯದಲ್ಲಿಯೇ ಆಕೆ ಬಾತ್ ರೂಮ್ ಒಳಗೆ ಲಾಕ್ ಮಾಡಿಕೊಂಡು ತನ್ನ ಜೀವ ತೆಗೆದುಕೊಂಡಿದ್ದಾಳೆ ಎಂದು ವರದಿಯಾಗಿದೆ.

    ಸುಶಾಂತ್‌ಗಾಗಿ ಹುಡುಕುತ್ತಾ ಕಣ್ಣೀರಿಡುತ್ತಿದೆ ಅವರ ಮುದ್ದಿನ ನಾಯಿಸುಶಾಂತ್‌ಗಾಗಿ ಹುಡುಕುತ್ತಾ ಕಣ್ಣೀರಿಡುತ್ತಿದೆ ಅವರ ಮುದ್ದಿನ ನಾಯಿ

    ನಾನೂ ಏಕೆ ಮಾಡಬಾರದು?

    ನಾನೂ ಏಕೆ ಮಾಡಬಾರದು?

    ಉತ್ತರ ಪ್ರದೇಶದ ಬರೇಲಿಯಲ್ಲಿ ಕೆಲವು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ಸುಶಾಂತ್ ಸಿಂಗ್ ಸಾವಿನಿಂದ ಬೇಸರಗೊಂಡಿದ್ದ ಹತ್ತನೇ ತರಗತಿ ವಿದ್ಯಾರ್ಥಿ, 'ಬದುಕುವ ಬದಲು ಸಾಯುವ ನಿರ್ಧಾರವನ್ನು ಸುಶಾಂತ್ ತೆಗೆದುಕೊಳ್ಳುವುದಾದರೆ ನಾನೂ ಏಕೆ ಮಾಡಬಾರದು?' ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಚಿಕ್ಕಂದಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಆತ ಎಲ್ಲರೂ ತನ್ನನ್ನು 'ಹೆಣ್ಣಪ್ಪಿ' ಎಂದು ಹೀಯಾಳಿಸುತ್ತಾರೆ ಎಂದು ಮನನೊಂದಿದ್ದ.

    ಸುಶಾಂತ್ ಸಾವಿನ ಬಗ್ಗೆ ಹತ್ತು ಗಂಟೆ ವಿಚಾರಣೆ: ಪೊಲೀಸರಿಗೆ ರಿಯಾ ತಿಳಿಸಿದ್ದೇನು?ಸುಶಾಂತ್ ಸಾವಿನ ಬಗ್ಗೆ ಹತ್ತು ಗಂಟೆ ವಿಚಾರಣೆ: ಪೊಲೀಸರಿಗೆ ರಿಯಾ ತಿಳಿಸಿದ್ದೇನು?

    ಪಟ್ನಾದಲ್ಲಿ ನಡೆದ ಘಟನೆ

    ಪಟ್ನಾದಲ್ಲಿ ನಡೆದ ಘಟನೆ

    ಪಟ್ನಾದಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಸುಶಾಂತ್ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದಳು. 10ನೇ ತರಗತಿ ಓದುತ್ತಿದ್ದ ಆಕೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಿಂದಿದ್ದಳು. ಹೀಗಾಗಿ ಖಿನ್ನತೆಗೆ ಒಳಗಾಗಿದ್ದಳು. ಇದರಿಂದ ಮನೆಯವರು ಆಕೆ ಸುಶಾಂತ್ ಆತ್ಮಹತ್ಯೆಗೆ ಸಂಬಂಧಿಸಿದ ಸುದ್ದಿಗಳನ್ನು ನೋಡದಂತೆ ತಡೆಯಲು ಪ್ರಯತ್ನಿಸಿದ್ದರು. ಆದರೂ ಆಕೆ ತನ್ನ ಜೀವ ತೆಗೆದುಕೊಳ್ಳುವುದನ್ನು ತಡೆಯುವುದು ಅವರಿಂದ ಸಾಧ್ಯವಾಗಲಿಲ್ಲ.

    English summary
    A 15 year old girl in Andaman and Nicobar Islands has ended her life after the sad demise of Sushant Singh Rajput.
    Saturday, June 20, 2020, 10:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X