For Quick Alerts
  ALLOW NOTIFICATIONS  
  For Daily Alerts

  ನಾಗಾರ್ಜುನ ಜೊತೆ ನಾನು ಅತ್ಯಮೂಲ್ಯವಾದ ಸಂಬಂಧ ಹೊಂದಿದ್ದೆ ಎಂದಿದ್ದ ಟಬು: 15 ವರ್ಷದ ವಿಡಿಯೋ ವೈರಲ್

  |

  ಟಾಲಿವುಡ್ ಮನ್ಮಥ ನಾಗಾರ್ಜುನ ಹಾಗೂ ನಟಿ ಟಬು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಜೋಡಿ ಆಗಿನ ಕಾಲಕ್ಕೆ ಹಿಟ್ ಪೇರ್ ಅಂತ ಸಾಬೀತಾಗಿತ್ತು. 'ಆವಿಡ, ಮಾ ಆವಿಡೆ', 'ನಿನ್ನೆ ಪೆಳ್ಳಾಡತಾ', 'ಸಿಸೀಂದ್ರಿ' ಅಂತಹ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗಿದ್ದವು. ಟಬು ಹಾಗೂ ನಾಗಾರ್ಜುನ ಕೆಮಿಸ್ಟ್ರಿಗೆ ತೆಲುಗು ಮಂದಿಗೆ ಇಷ್ಟ ಆಗಿತ್ತು. ತೆರೆಮೇಲೆ ಇಬ್ಬರು ಮಾಡಿದ ಮೋಡಿ ನೋಡಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇನ್ನೇನು ಇಬ್ಬರು ಮದುವೆನೇ ಆಗಿ ಬಿಡುತ್ತಾರೆ ಅನ್ನುವ ಮಟ್ಟಿಗೆ ಸುದ್ದಿ ಹರಿದಾಡಿತ್ತು.

  ಎರಡು- ಎರಡೂವರೆ ದಶಕಗಳ ಹಿಂದೆ ನಾಗಾರ್ಜುನ ಎಲ್ಲಾ ನಾಯಕಿಯರ ಫೇವರಿಟ್ ಆಗಿದ್ದರು. ಇವರೊಂದಿಗೆ ನಟಿಸಿದ ಬಹುತೇಕ ನಟಿಯರಿಗೆ ನಾಗರ್ಜುನ ಮೇಲೆ ಕ್ರಶ್ ಆಗಿರುವ ಎಲ್ಲಾ ಸಾಧ್ಯತೆ ಇತ್ತು. ಅದಕ್ಕೆ ಅಭಿಮಾನಿಗಳು ಮನ್ಮಥ ಅಂತ ಬಿರುದು ಬೇರೆ ನೀಡಿದ್ದರು. ನಾಗಾರ್ಜುನ ಅದೆಷ್ಟೇ ನಟಿಯರೊಂದಿಗೆ ನಟಿಸಿದ್ದರೂ, ಟಬು ಜೊತೆ ಮಾತ್ರ ಇವರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ, ಇಬ್ಬರೂ ಒಂದಾಗಲಿಲ್ಲ. ಒಂದಿಷ್ಟು ವರ್ಷ ಈ ಬಗ್ಗೆ ಎಲ್ಲೂ ಮಾತನಾಡಲೂ ಇಲ್ಲ. 15 ವರ್ಷಗಳ ಹಿಂದೆ ಟಾಕ್ ಶೋ ಒಂದರಲ್ಲಿ ಟಬು ಮೊದಲ ಬಾರಿ ನಾಗಾರ್ಜುನ ಜೊತೆಗಿನ ಸಂಬಂಧದ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ.

  ನಾಗ ಚೈತನ್ಯ- ಸಮಂತಾ ವಿಚ್ಛೇದನಕ್ಕೆ ಹೊಸ ಟ್ವಿಸ್ಟ್: ಡಿವೋರ್ಸ್ ಬಯಸಿದ್ದು ಚೈ ಅಲ್ಲ ಸಮಂತಾನಾಗ ಚೈತನ್ಯ- ಸಮಂತಾ ವಿಚ್ಛೇದನಕ್ಕೆ ಹೊಸ ಟ್ವಿಸ್ಟ್: ಡಿವೋರ್ಸ್ ಬಯಸಿದ್ದು ಚೈ ಅಲ್ಲ ಸಮಂತಾ

   ನಾಗಾರ್ಜುನ-ಟಬು ರೂಮರ್ ಏನು?

  ನಾಗಾರ್ಜುನ-ಟಬು ರೂಮರ್ ಏನು?

  ನಾಗಾರ್ಜುನ ಹಾಗೂ ಟುಬು ನಟಿಸಿದ ಸಿನಿಮಾಗಳು ಹಿಟ್ ಆಗಿದ್ದವು. ಇಬ್ಬರ ತೆರೆಮೇಲೆ ಕೆಮಿಸ್ಟ್ರಿಯನ್ನು ಜನರು ಇಷ್ಟ ಪಡತೊಡಗಿದ್ದರು. ಇದೇ ವೇಳೆ ಟಾಲಿವುಡ್‌ನಲ್ಲಿ ಇಬ್ಬರ ಲವ್‌ ಸ್ಟೋರಿಯ ಸುದ್ದಿಯೂ ಕೂಡ ಹರಿದಾಡಲು ಶುರುವಾಗಿತ್ತು. ಒಂದು ವರದಿಯ ಪ್ರಕಾರ, ನಾಗಾರ್ಜುನ ಟಬು ಜೊತೆ ಡೇಟಿಂಗ್ ಮಾಡುತ್ತಿರುವಾಗ, ನಾಗಾರ್ಜುನ ಎರಡನೇ ಮದುವೆ ಆಗಿದ್ದರು. ಹೀಗಿದ್ದರೂ, ಇಬ್ಬರ ನಡುವೆ ಪ್ರೇಮ ಚಿಗುರಿತ್ತು. 10 ವರ್ಷ ಇಬ್ಬರು ಡೇಟಿಂಗ್ ನಡೆಸಿದ ಬಳಿಕ ನಾಗಾರ್ಜುನಾ ಎರಡನೇ ಪತ್ನಿಯನ್ನು ಬಿಟ್ಟು ಬರುವುದಿಲ್ಲ ಎಂದು ಖಾತ್ರಿಯಾಗಿತ್ತು. ಹೀಗಾಗಿ ಇಬ್ಬರು ಬೇರೆಯಾದರು. ಈ ನೋವಿನಲ್ಲೇ ಟಬು ಇದೂವರೆಗೂ ಮದುವೆಯಾಗಿಲ್ಲ ಅಂತ ಹೇಳುವವರು ಇದ್ದಾರೆ. ಆದರೆ, ಈ ಸುದ್ದಿಗಳಿಗೆ 15 ವರ್ಷ ಹಿಂದೆ ಟಬು ಆಡಿದ ಮಾತು ಈಗ ಮತ್ತೆ ವೈರಲ್ ಆಗುತ್ತಿದೆ.

  ಸಮಂತಾ ನಾಗಚೈತನ್ಯ ವಿಚ್ಛೇದನ: ಅಪ್ಪ-ಮಗ ಮಾಧ್ಯಮಗಳಿಂದ ತಪ್ಪಿಸಿಕೊಂಡು ಓಡಾಡುತ್ತಿರುವುದೇಕೆ?ಸಮಂತಾ ನಾಗಚೈತನ್ಯ ವಿಚ್ಛೇದನ: ಅಪ್ಪ-ಮಗ ಮಾಧ್ಯಮಗಳಿಂದ ತಪ್ಪಿಸಿಕೊಂಡು ಓಡಾಡುತ್ತಿರುವುದೇಕೆ?

   ಕರಣ್ ಶೋನಲ್ಲಿ ಟಬು ಹೇಳಿದ್ದೇನು?

  ಕರಣ್ ಶೋನಲ್ಲಿ ಟಬು ಹೇಳಿದ್ದೇನು?

  2007ರಲ್ಲಿ ಕರಣ್ ಜೋಹರ್ ನಡೆಸಿಕೊಡುತ್ತಿದ್ದ ಟಾಕ್ ಶೋ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ವೇಳೆ ಕರಣ್ ಜೋಹರ್ ನಟಿ ಟಬುಗೆ ನಾಗಾರ್ಜುನ ಬಗ್ಗೆ ಪ್ರಶ್ನೆ ಹಾಕಿದ್ದರು. ಆ ಪ್ರಶ್ನೆಗೆ ಟಬು ಮನಸ್ಸು ಬಿಚ್ಚಿ ಮಾತಾಡಿದ್ದರು. " ನಾಗಾರ್ಜುನ ಉಳಿಸಿಕೊಂಡಿರುವ ಅತ್ಯಮೂಲ್ಯ ಸಂಬಂಧಗಳಲ್ಲಿ ನಾಗಾರ್ಜುನ ಕೂಡ ಒಬ್ಬರು. ನಾಗಾರ್ಜುನ ಜೊತೆಗಿನ ನನ್ನ ಸಂಬಂಧ ನನಗೆ ತೀರ ಹತ್ತಿರವಾಗಿದೆ. ನಾಗ್ ಜೊತೆಗಿನ ನನ್ನ ಸಂಬಂಧವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ, ಬದಲಾಯಿಸಲೂ ಸಾಧ್ಯವಿಲ್ಲ. ಈ ಸಂಬಂಧಕ್ಕೆ ಒಂದು ಲೇಬಲ್ ಅನ್ನುವುದು ಇಲ್ಲ. ಅದಕ್ಕೆ ಏನೂ ಮಾಡಲೂ ಸಾಧ್ಯವಿಲ್ಲ." ಎಂದು ಹೇಳಿದ್ದರು. ಅದೇ ವಿಡಿಯೋ ಈಗ ವೈರಲ್ ಆಗುತ್ತಿದೆ.

   'ಬಾಯ್‌ಫ್ರೆಂಡ್ ಬರ್ತಾರೆ ಹೋಗ್ತಾರೆ,

  'ಬಾಯ್‌ಫ್ರೆಂಡ್ ಬರ್ತಾರೆ ಹೋಗ್ತಾರೆ,

  ಆ ವೇಳೆ ಟಬು ಮುಂಬೈನಿಂದ ಹೈದರಾಬಾದ್‌ಗೆ ಶಿಫ್ಟ್ ಆಗಿದ್ದರು. ಆಗ ಕರಣ್ ಜೋಹರ್ಮ ನಟಿ ಟಬುಗೆ ನಾಗಾರ್ಜುನಗಾಗಿಯೇ ಹೈದರಾಬಾದ್‌ಗೆ ಶಿಫ್ಟ್ ಆದರಾ? ಎಂದು ಪ್ರಶ್ನೆ ಮಾಡಿದ್ದರು. " ಈ ರೂಮರ್‌ಗಳು ತುಂಬಾನೇ ಹಳೆಯದು. ಆದರೆ, ಹಲವು ಸಂದರ್ಭಗಳಲ್ಲಿ ಮತ್ತೆ ಬರುತ್ತವೆ. ಇಂತಹ ಪ್ರಶ್ನೆಗಳು ಬಂದಾಗಲೆಲ್ಲಾ ನನಗೆ ಆಶ್ಚರ್ಯವೆನಿಸುತ್ತದೆ. ನನಗೆ ಬಾಯ್‌ಫ್ರೆಂಡ್ ಇದ್ದಾರಾ ಇಲ್ಲವಾ ಅನ್ನುವುದು ಮಾಧ್ಯಮಗಳಿಗೆ ಬೇಕಿರಬಹುದು ಎಂದು ಅನಿಸುತ್ತದೆ. ಬಾಯ್‌ಫ್ರೆಂಡ್ ಬರುತ್ತಾರೆ. ಹೋಗುತ್ತಾರೆ. ಆದರೆ, ನಾಗಾರ್ಜುನ ಅಕ್ಕಿನೇನಿ ಯಾವಾಗಲೂ ಇರುತ್ತಾರೆ." ಎಂದು ಹೇಳಿದ್ದರು.

  ಜಾಕ್ವೆಲಿನ್, ಕಾಜಲ್ ನಂತರ ನಾಗಾರ್ಜುನ ಅಡ್ಡಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಬೆಡಗಿ!ಜಾಕ್ವೆಲಿನ್, ಕಾಜಲ್ ನಂತರ ನಾಗಾರ್ಜುನ ಅಡ್ಡಾಗೆ ಎಂಟ್ರಿ ಕೊಟ್ಟ ಬಾಲಿವುಡ್ ಬೆಡಗಿ!

   ಟಬು ಬಗ್ಗೆ ನಾಗಾರ್ಜುನ ಹೇಳಿದ್ದೇನು?

  ಟಬು ಬಗ್ಗೆ ನಾಗಾರ್ಜುನ ಹೇಳಿದ್ದೇನು?

  " ಹೌದು, ಟಬು ನನ್ನ ಅತ್ಯದ್ಭುತ ಸ್ನೇಹಿತೆ. ನಮ್ಮಿಬ್ಬರ ಸ್ನೇಹ ತುಂಬಾನೇ ಹಳೆಯದು. ನನಗೆ 21 ಅಥವಾ 22 ವಯಸ್ಸು. ಆಕೆಗೆ 16. ನಮ್ಮಿಬ್ಬರ ಸ್ನೇಹದ ಬಗ್ಗೆ ಏನೇ ಹೇಳಿದರೂ ಕಮ್ಮಿನೇ. ಆಕೆ ಬಗ್ಗೆ ಬಚ್ಚಿಡುವಂತಹದ್ದು ಏನೂ ಇಲ್ಲ. ಅವರ ಹೆಸರು ಹೇಳಿದಾಗ, ನನ್ನ ಮುಖದಲ್ಲಿ ಕಾಂತಿ ಬರುತ್ತೆ. ನನಗೆ ಆಕೆ ತುಂಬಾ ಒಳ್ಳೆಯ ಸ್ನೇಹಿತೆ. ಯಾವಾಗಲೂ ಸ್ನೇಹಿತೆಯಾಗಿಯೇ ಇರುತ್ತಾರೆ." ಎಂದು ನಾಗಾರ್ಜುನ ಪತ್ರಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

  English summary
  15 years back Tabu had opened up about her dating rumours with Nagarjuna goes viral. In an episode of Karan Johar's chat show, Koffee With Karan, Tabu had opened up about her dating rumours with Akkineni Nagarjuna.
  Thursday, March 3, 2022, 12:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X