ಐಶ್ವರ್ಯ ರೈ ಬೇಬಿ ಹೆಸರು 'ಕೆ' ಯಿಂದ ಪ್ರಾರಂಭ?

ಅಂತೂ ಇಂತೂ ಜಗತ್ತೇ ಕಾದು ಕೂತಿದ್ದ ಐಶೂ ಹೆರಿಗೆ ಸುಸೂತ್ರವಾಗಿ ನಡೆದಿದೆ. ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಅದೀಗ ಹಳೆಯ ವಿಷಯವಾಯ್ತು. ಈಗ ಮಗುವಿಗೆ ಹೆಸರೇನು ಇಡಬಹುದೆಂಬ ಸಹಜ ಕುತೂಹಲ ಎಲ್ಲರಲ್ಲಿದೆ. ಅದಕ್ಕೊಂದು ಉತ್ತರವೂ ದೊರೆತಿದೆ. ಅದು ಸಂಖ್ಯಾಶಾಸ್ತ್ರಜ್ಞರ ಕಡೆಯಿಂದ ಬಂದಿದೆ.

ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸಂಖ್ಯಾಶಾಸ್ತ್ರಜ್ಞ ಭಾವಿಕ್, "ಐಶೂ ಬೇಬಿಯದು ಸಂಖ್ಯಾಶಾಸ್ತ್ರದ ಪ್ರಕಾರ ಮಿಥುನ ರಾಶಿ. ದಿನಾಂಕ 16 ರಂದು ಜನಿಸಿದ್ದರಿಂದ ಕೆ (K) ಯಿಂದ ಹೆಸರು ಪ್ರಾರಂಭವಾದರೆ ಒಳ್ಳೆಯದು. ಅದೃಷ್ಟದ ಸಂಖ್ಯೆ '7'. ಈ 7. ಚಂದ್ರನಿಂದ ಆಳಲ್ಪಡುತ್ತದೆ" ಎಂದಿದ್ದಾರೆ. ಜೊತೆಗೆ, ಮಗು ಹೆಚ್ಚಿನ ಪ್ರೀತಿ ಕಾಳಜಿಯನ್ನು ಬಯಸುತ್ತದೆಯಂತೆ.

ತಂದೆ-ತಾಯಿಯಂತೆ ಮಗು, ಯಾವುದೇ ಕ್ರೀಯಾಶೀಲ ಕ್ಷೇತ್ರ, ಕಲೆ ಅಥವಾ ಮಾಧ್ಯಮ ಕ್ಷೇತ್ರದಲ್ಲಿ ಹೆಸರುವಾಸಿ ಆಗುವುದು ಎಂದಿದ್ದಾರೆ. ಬಚ್ಚನ್ ಪರಿವಾರ ಜಗತ್ತಿನ ಗೌರವಾನ್ವಿತ ಪರಿವಾರದಲ್ಲೊಂದು. ಜೊತೆಗೆ ವಿಶ್ವಸುಂದರಿ ಐಶ್ವರ್ಯ ರೈ ಮಗಳು. ಖ್ಯಾತಳಾಗದೇ ಇರಲು ಸಾಧ್ಯವೇ ಎಂದಾರು ಭವಿಷ್ಯ ಕೇಳಿದ ಜನ. ಏನೇ ಆಗಲಿ, ಹುಟ್ಟುವ ಮೊದಲೇ ಸಂಚಲನ ಸೃಷ್ಟಿಸಿ ಹುಟ್ಟಿದ ಕೂಡಲೇ ಹೆಸರು ಹುಡುಕವಂತೆ ಮಾಡಿದ ಬೇಬಿಗೆ 'ಭಲೇ' ಅನ್ನಲೇಬೇಕು...(ಏಜೆನ್ಸೀಸ್)

More from Filmibeat

English summary
Numerologist Bhavvik suggests that Aishwarya Rai Bachchan new born baby girl name should start with the alphabet K since her rashi is mithuna.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X