ರಜನಿಕಾಂತ್ ಜೊತೆ ಮತ್ತೆ ಅಭಿನಯಿಸಲಿದ್ದಾರೆ ಐಶ್ವರ್ಯ ರೈ
ಐಶ್ವರ್ಯ ರೈ ಸದ್ಯಕ್ಕೆ ಲಾಲಿ ಹಾಡು ಹಾಡುತ್ತಾ ತನ್ನ ಪುಟ್ಟ ಮಗಳಿಗೆ ಹಾಲುಣಿಸುತ್ತಾ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಅಮ್ಮನಾದ ಮೇಲೆ ಇನ್ನೇನು ಆಕೆಯ ಬೆಳ್ಳಿತೆರೆಯ ಜೀವನ ಮುಗಿದೇ ಹೋಯಿತೋ ಏನೋ ಎಂಬಂತಿತ್ತು. ಆದರೆ ಮತ್ತೊಮ್ಮೆ ಆಕೆ ಬಣ್ಣ ಹಚ್ಚಿಕೊಳ್ಳಲು ಮುಂದಾಗಿದ್ದಾರೆ.
ಈ ಹಿಂದೆ ರಜನಿಕಾಂತ್ ಜೊತೆ 'ರೋಬೋ' ಚಿತ್ರದಲ್ಲಿ ಐಶ್ವರ್ಯ ರೈ ಅಭಿನಯಿಸಿದ್ದರು. ಆ ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ಹಿಟ್ ದಾಖಲಿಸಿತ್ತು. ಈಗ ಮತ್ತೊಮ್ಮೆ ರಜನಿಕಾಂತ್ ಅಭಿನಯಿಸಲಿರುವ 'ಕೋಚಡಯಾನ್' ಚಿತ್ರದಲ್ಲಿ ಅತಿಥಿ ಪಾತ್ರವನ್ನು ಐಶ್ವರ್ಯ ಪೋಷಿಸಲಿದ್ದಾರೆ.
ಇದೇ ಚಿತ್ರದಲ್ಲಿ ದಕ್ಷಿಣದ ಕೋಲ್ಗೇಟ್ ಸ್ಮೈಲ್ ಸುಂದರಿ ಸ್ನೇಹಾ ತಂಗಿ ಪಾತ್ರವನ್ನು ಪೋಷಿಸುತ್ತಿದ್ದಾರೆ. ಚಿತ್ರದ ನಾಯಕಿಗಾಗಿ ಹುಡುಕಾಟ ನಡೆದಿದೆ. ರಜನಿಕಾಂತ್ ಪುತ್ರಿ ಸೌಂದರ್ಯ ಅವರು 'ಕೋಚಡಯಾನ್' ಚಿತ್ರದಲ್ಲಿ ಅಭಿನಯಿಸುವಂತೆ ಕೋರಿದ್ದರು. ಇದಕ್ಕೆ ಐಶ್ವರ್ಯ ರೈ ಮೌನ ಸಮ್ಮತಿ ಸೂಚಿಸಿದ್ದಾರೆ ಎಂಬುದು ಸದ್ಯದ ರಿಪೋರ್ಟ್. (ಏಜೆನ್ಸೀಸ್)
More from Filmibeat
English summary
Aishwarya Rai Bachchan's comeback to films is not seem to be Sanjay Leela Bhansali's next flick rather the actress has decided to appear in another movie before she starts the Hindi project. Well, the actress, who is enjoying her motherhood, will be seen in a cameo in none other than Rajinikanth's Kochadaiyaan.


Click it and Unblock the Notifications











