ಅಣ್ಣ ಎನ್ನಬೇಡಿ ಎಂದು ಹುಡುಗೀರ ಅಂಗಲಾಚಿದ ಸಲ್ಲು
ಬಾಲಿವುಡ್ ಗುಡ್‌ಬಾಯ್ ಅನ್ನಿಸಿಕೊಂಡಿದ್ದ ಸಲ್ಮಾನ್ ಖಾನ್‌ಗೆ ಇದ್ದಕ್ಕಿದ್ದಂತೆ ಏನಾಯಿತೋ ಏನೋ ಗೊತ್ತಿಲ್ಲ. ಸಲ್ಮಾನ್ ಖಾನ್ ಬಾಡಿ ನೋಡಿದರೆ ಹುಡುಗಿಯರು ಹುಷಾರು ತಪ್ಪುವ ಸಾಧ್ಯತೆಗಳೇ ಹೆಚ್ಚು. ಇಂತಹ ಧಡಿಯನನ್ನು ಅಣ್ಣ ಎಂದು ಕರೆಯದೆ ಅವರು ಇನ್ನೇನು ಕರೆಯಲು ಸಾಧ್ಯ.
ಹುಡುಗಿಯರು ಅಣ್ಣ ಎಂದು ಕರೆಯುತ್ತಿದ್ದರೆ ಸಲ್ಮಾನ್ ಖಾನ್ ಒಳಗೊಳಗಗೆ ಕುದಿಯುತ್ತಿದ್ದ. ಕಡೆಗೆ ಇದನ್ನು ಹತ್ತಿಕ್ಕಿಕ್ಕೊಳ್ಳಲಾಗದೆ ಪ್ಲೀಸ್ ದಯವಿಟ್ಟು ನನ್ನನ್ನು ಇನ್ನು ಮುಂದೆ ಅಣ್ಣ ಎಂದು ಕರೆಯಬೇಡಿ ಎಂದು ಹುಡುಗಿಯರಲ್ಲಿ ಮನವಿ ಮಾಡಿಕೊಂಡಿದ್ದಾನೆ.
ನಟ ಸುನಿಲ್ ಶೆಟ್ಟಿ ಕೂಡ ಸಲ್ಮಾನ್‌ರನ್ನು ಅಣ್ಣ ಎಂದು ಕರೆಯುತ್ತಿದ್ದ. ಇದರಿಂದ ಬೇಸತ್ತಿದ್ದ ಸಲ್ಮಾನ್ ದಯವಿಟ್ಟು ನನ್ನನ್ನು ಯಾರೂ ಅಣ್ಣ ಎಂದು ಕರೆಯಬೇಡಿ ಎಂದಿದ್ದಾರೆ. ಇನ್ನೂ ಮದುವೆಯಾಗದ ಸಲ್ಮಾನ್ ಖಾನ್ ವಯಸ್ಸು ಸದ್ಯಕ್ಕೆ 46 ವರ್ಷ. ಸಲ್ಲುಗೆ ಅಂಕಲ್ ವಯಸ್ಸಾಗಿದ್ದರು ಇನ್ನೂ ಅಣ್ಣ ಎಂದು ಕರೆಯುತ್ತಿದ್ದಾರಲ್ಲಾ ಎಂಬ ನೋವು ಕಾಡುತ್ತಿದೆಯೇನೋ ಗೊತ್ತಿಲ್ಲ. (ಏಜೆನ್ಸೀಸ್)
More from Filmibeat
English summary
Salman Khan, still one of Bollywood's eligible bachelor doesn't like being called as Bhai(brother) especially from girls.


Click it and Unblock the Notifications











