ಆಹಾ ಜೆನಿಲಿಯಾ ಮದ್ವೆಯಂತೆ, ಲವ್ ಮ್ಯಾರೇಜ್ ಅಂತೆ

ಬಾಲಿವುಡ್ ನಟ ಹಾಗೂ ಕೇಂದ್ರ ಸಚಿವ ವಿಲಾಸ್ ರಾವ್ ದೇಶ್ ಮುಖ್ ಮಗ ರಿತೇಶ್ ದೇಶ್ ಮುಖ್ ಜೊತೆ ಜೆನಿಲಿಯಾ ಮದುವೆ ಫೆಬ್ರವರಿ 4 ರಂದು ಎನ್ನಲಾಗಿದೆ. ನಾರ್ತ್ ಸೌತ್ ಭೇದವಿಲ್ಲದೇ ಸುದ್ದಿ ಸುತ್ತುತ್ತಿದೆ. ಅಲ್ಲ, ಈ ರಸಗುಲ್ಲಕ್ಕೆ ಮದುವೆ ಇಷ್ಟು ಬೇಗ ಯಾಕೆ ಅಂತ ಹುಡುಗರೆಲ್ಲ ಬಾಯಿ ಬಾಯಿ ಬಿಡುತ್ತಿದ್ದಾರೆ.
2003 ರಲ್ಲಿ ಬಂದಿದ್ದ 'ತುಝೇ ಮೇರಿ ಕಸಮ್' ಬಾಲಿವಡ್ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದ ಈ ಜೋಡಿ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದು 'ತೇರೆ ನಾಲ್ ಲವ್ ಹೋ ಗಯಾ' ಚಿತ್ರದಲ್ಲಿ. ಬಿಡುಗಡೆ ಹಂತದಲ್ಲಿರುವ ಈ ಚಿತ್ರ ಪ್ರೇಕ್ಷಕರನ್ನು ಮೋಡಿ ಮಾಡುತ್ತೋ ಬಿಡುತ್ತೋ ಆದರೆ ಅವರಿಬ್ಬರಿಗಂತೂ ಮದುವೆ ಮಾಡಿಸುತ್ತಿದೆ. (ಏಜೆನ್ಸೀಸ್)
More from Filmibeat
English summary
Actress Genelia DSouza marries actor Ritesh Deshmukh on Feb 4. This is Love cum Marriage according to the sources.


Click it and Unblock the Notifications











