ಮಾರುಕಟ್ಟೆಗೆ ಮೋಸರ್ ಬೇರ್ ಸಿನಿಮಾ ಪೆನ್ ಡ್ರೈವ್
ಸಾಮಾನ್ಯವಾಗಿ ಚಲನಚಿತ್ರವೊಂದನ್ನು ಸಿಡಿ ಅಥವಾ ಡಿವಿಡಿ ರೂಪದಲ್ಲಿ ಖರೀದಿಸಬಹುದು. ಪೆನ್ ಡ್ರೈವ್‌ಗಳ ರೂಪದಲ್ಲಿ ಖರೀದಿಸಲು ಸಾಧ್ಯವೆ? ಹೌದು ಇದನ್ನು ಸಾಧ್ಯವಾಗಿಸಿದೆ ಜಗತ್ತಿನ ಎರಡನೆ ಅತಿದೊಡ್ಡ ಕಂಪ್ಯೂಟರ್ ಬಿಡಿಭಾಗಗಳ ತಯಾರಕ ಕಂಪನಿ ಮೋಸರ್ ಬೀಯರ್. ಕಂಪನಿಯ ಹೊಸ ಮಾರುಕಟ್ಟೆ ತಂತ್ರ ಚಿತ್ರೋದ್ಯಮವನ್ನು ಚಕಿತಗೊಳಿಸಿದೆ.
ಇನ್ನು ಮುಂದೆ 4 ಜಿಬಿ ಪೆನ್ ಡ್ರೈವ್‌ನಲ್ಲಿ ಬಾಲಿವುಡ್ ಚಿತ್ರಗಳು ಲಭ್ಯವಾಗಲಿವೆ. ಇದರ ಬೆಲೆ ರು.850 ಎಂದು ಮೋಸರ್ ಬೇರ್ ಸಂಸ್ಥೆ ತಿಳಿಸಿದೆ. ಶೀಘ್ರದಲ್ಲೆ ಮಾರುಕಟ್ಟೆಗೆ 8 ಮತ್ತು 16 ಜಿಬಿ ಸಾಮರ್ಥ್ಯದಪೆನ್ ಡ್ರೈವ್‌ಗಳಲ್ಲಿ ಸಿನಿಮಾಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.
ಮೋಸರ್ ಬೇರ್ ಸಂಸ್ಥೆ ಒದಗಿಸುತ್ತಿರುವ ಪೆನ್ ಡ್ರೈವ್‌ಗಳಲ್ಲಿನ ಸಿನಿಮಾಗಳನ್ನು ಅಳಿಸಿ ಹಾಕಬಹುದಾಗಿದೆ. ಬಳಿಕ ಇವುಗಳನ್ನು ಮಾಹಿತಿಯನ್ನು ತುಂಬಿಕೊಳ್ಳಲು ಮರುಬಳಕೆ ಮಾಡಿಕೊಳ್ಳಬಹುದಾಗಿದೆ. ತಿಂಗಳೊಂದಕ್ಕೆ ಒಂದು ಲಕ್ಷ ಸಿನಿಮಾ ಪೆನ್ ಡ್ರೈವ್ ಗಳನ್ನು ಉತ್ಪಾದಿಸಲು ಮೋಸರ್ ಬೇರ್ ಮುಂದಾಗಿದೆ.
ಬಾಲಿವುಡ್ ಮೋಸರ್ ಬೇರ್ ಸಿಡಿ ಡಿವಿಡಿ ಪೆನ್ ಡ್ರೈವ್ ಯುಎಸ್ ಬಿ ತಂತ್ರಜ್ಞಾನ moser baer pen drives bollywood cd dvd usb


Click it and Unblock the Notifications