ಪ್ರೀತಿ ಜಿಂಟಾ ಜೊತೆ ಯುವರಾಜ್ ಸಿಂಗ್ ಪಾರ್ಟಿ

By Rajendra

ಭಾರತ ಕ್ರಿಕೆಟ್ ತಂಡದ ಅತ್ಯ್ಯುತ್ತಮ ಕ್ಷೇತ್ರರಕ್ಷಕ ಹಾಗೂ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹಲವಾರು ಬಾಲಿವುಡ್ ಬೆಡಗಿಯರ ಜೊತೆ ಕಣ್ಣಾಮುಚ್ಚಾಲೆ ಆಡಿದ್ದು ಗೊತ್ತೇ ಇದೆ. ಈಗ ಯುವಿ ತಮ್ಮ ಹುಟ್ಟುಹಬ್ಬವನ್ನು ಬಾಲಿವುಡ್ ಬೆಡಗಿಯರ ಜೊತೆ ಗುಟ್ಟಾಗಿ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.

ಅದರಲ್ಲೂ ಮುಖ್ಯವಾಗಿ ತನ್ನ ನೆಚ್ಚಿನ ಗೆಳತಿ ಪ್ರೀತಿ ಜಿಂಟಾರಿಗೆ ಯುವಿ ವಿಶೇಷ ಆಹ್ವಾನ ನೀಡಿದ್ದರಂತೆ. ಆಹ್ವಾನಿತರ ಪಟ್ಟಿಯಲ್ಲಿ ಆರ್ತಿ ಛಾಬ್ರಿಯಾ, ರಕ್ಷಾಂದಾ ಖಾನ್ ಮುಂತಾದವರು ಇದ್ದರು. ಅಂದಹಾಗೆ ಈ ಹಿಂದೆ ಬಾಲಿವುಡ್ ನಟಿ ಕಿಮ್ ಶರ್ಮಾ ಜೊತೆ ಯುವಿ ಗುಟ್ಟಾಗಿ ಐಸ್‌ಪೈಸ್ ಆಡಿದ್ದು ರಟ್ಟಾಗಿತ್ತು. ಬಳಿಕ ಕಾರಣಾಂತರಗಳಿಂದ ಅವರಿಬ್ಬರ ಸಂಬಂಧ ಕಟ್ ಆಗಿತ್ತು.

ವಿದೇಶದ ಖಾಸಗಿ ಯಾಚ್ ಒಂದರಲ್ಲಿ ಭಾನುವಾರ ರಾತ್ರಿ ತಮ್ಮ ಹುಟ್ಟುಹಬ್ಬವನ್ನು ಯುವಿ ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಈ ಹುಟ್ಟುಹಬ್ಬ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಆಪ್ತಗೆಳೆಯರು ಭಾಗವಹಿಸಿದ್ದರಂತೆ.

ಐಪಿಎಲ್ ಪಂದ್ಯಾವಳಿಯಲ್ಲಿ ಯುವಿ ಮತ್ತು ಪ್ರೀತಿ ಒಟ್ಟೊಟ್ಟಿಗೆ ಕಾಣಿಸಿಕೊಂಡು ಗಾಸಿಪ್ ಕಾಲಂಗಳಲ್ಲಿ ಮಿಂಚಿದ್ದರು. ಪಂದ್ಯ ಗೆದ್ದಾಗಲೆಲ್ಲಾ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿ ಮುದ್ದಾಡಿ ಗೆಲುವಿನ ಸಂಭ್ರಮವನ್ನು ಬರಮಾಡಿಕೊಂಡದ್ದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

More from Filmibeat

English summary
Indian cricketer Yuvraj Singh celebrated his birthday with Preity Zinta. His birthday party held aboard a private yacht on Sunday night. The cricketer invited about 50 close friends to the hush-hush party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X