ಅಮೀರ್ ಖಾನ್ ಊಟ ಕಸಿದುಕೊಂಡ ರಣವೀರ್ ಸಿಂಗ್

ಬಾಲಿವುಡ್ ಹೊಸ ಹುಡುಗ, ಅದೇ 'ಬ್ಯಾಂಡ್ ಬಾಜಾ ಬಾರಾತ್' ನಟ ರಣವೀರ್ ಸಿಂಗ್ ಅಮೀರ್ ಖಾನ್ ಗೇ ಸಡ್ಡು ಹೊಡೆಯಲಿದ್ದಾರೆಯೇ? ಹೀಗೊಂದು ಪ್ರಶ್ನೆ ಬಾಲಿವುಡ್ ಅಂಗಳದಲ್ಲಿ ಬೇರುಬಿಟ್ಟಿದೆ. ಅದೇನೂ ಸುಮ್ಮನೆ ಹುಟ್ಟಿಕೊಂಡ ಸುದ್ದಿಯಲ್ಲ. ಅದಕ್ಕೂ ತಂದೆ, ತಾಯಿ ಇದ್ದಾರೆ. ಯಾರದು ತಂದೆ-ತಾಯಿ ಎಂದು ಚಿಂತೆ ಮಾಡಬೇಡಿ.

ಬಾಲಿವುಡ್ ಮೇರು ನಟ ಅಮೀರ್ ಖಾನ್, ನಿರ್ದೇಶಕ ಅನುರಾಗ್ ಕಶ್ಯಪ್ ರ ಬಹುನಿರೀಕ್ಷೆಯ 'ಬಾಂಬೆ ವೆಲ್ವೆಟ್' ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಅದೀಗ ರಣವೀರ್ ಸಿಂಗ್ ಪಾಲಾಗಿದೆ. ಅಮೀರ್ ಗಾಗಿ ಅನುರಾಗ್ ಬರೋಬ್ಬರಿ 3 ವರ್ಷ ಕಾದಿದ್ದಾರೆ. ಆದರೆ ಅಮೀರ್ ಕಡೆಯಿಂದ 'ಓಕೆ' ಬಂದಿಲ್ಲ. ಅವರಾದರೂ ಇನ್ನೂ ಕಾಯಲು ಸಾಧ್ಯವೇ?

ಹಾಗಾಗಿ ಅನುರಾಗ್ ರಣವೀರ್ ನನ್ನು ಒಪ್ಪಿಸಿದ್ದಾರೆ. ಸಾಕಷ್ಟು ಪ್ರಬುದ್ಧ ಅಭಿನಯ ಬಯಸುವ ಪಾತ್ರ ಅದಾಗಿರುವುದರಿಂದ ರಣವೀರ್ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಅಂದಹಾಗೆ, ಅದು ಸೆಟ್ಟೇರಲಿರುವುದು 2012 ರಲ್ಲಿ. ಅನುರಾಗ್ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರಿಂದ ಸಹಜವಾಗಿಯೇ ರಣವೀರ್ ಹಾಗೂ ಬಾಲಿವುಡ್ ನಿರೀಕ್ಷೆಯೂ ಹೆಚ್ಚಿದೆ. (ಏಜೆನ್ಸೀಸ್)

More from Filmibeat

English summary
Aamir Khan is replaced by Ranveer Singh in the first project of Anurag Kashyap trilogy on erstwhile Mumbai, Bombay Velvet.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X