ಅಸಿನ್ ಜತೆ ತುಟಿ ತುಟಿ ಚುಂಬನ ಒಲ್ಲೆ ಎಂದ ಸಲ್ಲು

By Srinath

ಅಲ್ಲಾ, ಈ ಸಲ್ಲುಗೆ ಏನಾಗಿದೆ. ಹೋಗಿ, ಹೋಗಿ ದಕ್ಷಿಣ ಭಾರತದ ನಮ್ಮ ಮುದ್ದಿನ ಚೆಲುವೆ ಅಸಿನ್-ಗೂ ಲಿಪ್-ಲಾಕ್ ಮಾಡೊಲ್ಲ ಅಂದಿದ್ದಾನೆ, ಏನ್ಮಾಡೋದ್ ಇವಯ್ಯನಿಗೆ! ಎಂದು ಅಸಿನ್ ಅಭಿಮಾನಿಗಳು ಬಾಲಿವುಡ್ ಬ್ಯಾಡ್ ಗಯ್ ಸಲ್ಮಾನ್ ವಿರುದ್ಧ ಹುಸಿ ಮುನಿಸು ತೋರಿದ್ದಾರೆ. ಆದರೆ ಸಲ್ಲುಗೆ ಇದೇನೂ ಹೊಸದಲ್ಲ ಬಿಡಿ. ಎಂತೆಂಥಾ ಹಾಟಿ ಬ್ಯೂಟಿಗಳಿಗೋ ಅವನು ಈ ತುಟಿ ತುಟಿ ಚುಂಬನ ಬೇಡ್ವೇಬೇಡ ಅಂದಿದ್ದಾನೆ. ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಝರೀನ್ ಕಾನ್ ಜತೆಗೂ ತುಟಿಗೆ ತುಟಿ ಬೆರೆಸಲು ಅವ ಸುತರಾಂ ಒಪ್ಪಿರಲಿಲ್ಲ.

ಅನಾದಿಕಾಲದಿಂದಲೂ ತನ್ನ ತುಟಿ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಬಂದಿರುವ ಸಲ್ಲು ಇದೀಗ ಅಸಿನ್-ಗಾದ್ರೂ ಆ ಭಾಗ್ಯ ಕಲ್ಪಿಸುತ್ತಾನಾ ಅಂದರೆ ಉಂಹು ಎಂದು ನಾಚಿ ನೀರಾಗಿದ್ದಾನಂತೆ. ಅಸಿನ್ ನಿಜಕ್ಕೂ ದುರಾದೃಷ್ಟವಂತೆ. ಅನೀಸ್ ಬಜ್ಮಿ ಅವರ 'ರೆಡಿ' ಸಿನಿಮಾದ ದೃಶ್ಯವೊಂದರಲ್ಲಿ ಅಸಿನ್-ಳ ತುಟಿಯನ್ನು ಚುಂಬಿಸಬೇಕಿತ್ತು. ಪರದೇ ಕೆ ಪೀಛೆ ಇದೆಲ್ಲ ಓಕೆ. ಆದ ಪರದೆ ಮೇಲೆ ಇಂಥದ್ದೆಲ್ಲ ತನಗೆ ವರ್ಜ್ಯ ಎಂದು ಗೊಣಗಿದ್ದಾನೆ. ಲಿಪ್ ಲಾಕ್-ಗೆ ನಾಟ್ ರೆಡಿ ಎಂದಿದ್ದಾನೆ. ವಿಧಿಯಲ್ಲಿದೆ ಆ ದೃಶ್ಯವನ್ನು ಕೈಬಿಡಲಾಗಿದೆ.

ಬ್ಯಾಡ್ ಗಯ್ ಸಲ್ಲು ಮಿಯಾ ಯಾವಾಗ ತನ್ನ ನಾಚಿಕೆ ಬಿಡುತ್ತಾನೋ ಎಂದು ಬಾಲಿವುಡ್ ಬ್ಯಾಡ್ ಗರ್ಲ್ಸ್ ಹಪಹಪಿಸುತ್ತಿದ್ದಾರೆ ಎಂಬುದು ಹಳೆಯ ವಾರ್ತೆ. ಬಾಲಿವುಡ್ ಮ್ಯಾಚೊ ಮ್ಯಾನ್ ಹಿಂದೆ ಹುಡುಗಿಯರ ಹಿಂಡೇ ಬಿದ್ದಿರುತ್ತದೆ. ಸಲ್ಲು ಕ್ರೇಜ್ ಯಾರಿಗೆ ತಾನೇ ಇರುವುದಿಲ್ಲ. ಕೊನೆಗೆ ಅವ ಕತ್ರಿನಾ ಜತೆ ಡೇಟಿಂಗ್ ಮಾಡುವ ವಸಂತ ಕಾಲದಲ್ಲಿಯೂ ಮೈ ಪ್ಯಾರ್ ಕ್ಯೋ ಕಿಯಾ, ಯುವರಾಜ್ ಸಿನಿಮಾಗಳಲ್ಲಿ ಇಂತಹುದೇ ದೃಶ್ಯಗಳು ಅನಿವಾರ್ಯವಿದ್ದರೂ ಕೈ ಎತ್ತಿದ್ದ. ದಬಾಂಗ್ ಚಿತ್ರದಲ್ಲಿಯೂ ಸೋನಾಕ್ಷಿ ಸಿನ್ಹಾಗೆ ಈ ಭಾಗ್ಯ ಕರುಣಿಸಲಿಲ್ಲ. ಲಿಪ್-ಲಾಕ್ ಕಿಸ್ಸಿಗೆ ಡಮಾರ್ ಆಗಲು ಬಾಲಿವುಡ್ ನಟರು ಕ್ಯೂ ನಿಲ್ಲುತ್ತಾರೆ. ಆದರೆ ಈ ಸಲ್ಲು... ಅದಕ್ಕೇ ಅವನೆಂದ್ರೆ ತುಂಬಾ ಇಷ್ಟಾ ಎನ್ನುವ ಹೆಂಗೆಳೆಯರೂ ಇದ್ದಾರೆ, ಏನಂತೀರಿ!?

More from Filmibeat

English summary
Over the years, Salman Khan has been paired opposite many hot and beautiful lasses but no heroines has been lucky in smooching the most eligible bachelor. He always shows hesitance in smooching his co-actresses. Lately, he refused to lip-lock south sensation, Asin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X